ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆ ಪರಿಸರದಲ್ಲಿ ಕೊರೊನಾ ಸೋಂಕು ಎಷ್ಟು ಸಮಯ ಇರುತ್ತೆ?:ಒಂದು ಅಧ್ಯಯನ

|
Google Oneindia Kannada News

ಹೈದರಾಬಾದ್, ಸೆಪ್ಟೆಂಬರ್ 28: ಗಾಳಿಯ ಮೂಲಕ ಕೊರೊನಾ ಸೋಂಕು ಹರಡುತ್ತದೆಯೇ?, ಸೋಂಕು ಗಾಳಿಯಲ್ಲಿ ಎಷ್ಟು ಸಮಯಗಳ ಕಾಲ ಉಳಿಯಬಹುದು ಎನ್ನುವ ಅಧ್ಯಯನಕ್ಕೆ ಹೈದರಾಬಾದ್‌ನ ಸಿಎಸ್‌ಐಆರ್‌-ಸೆಂಟರ್ ಫಾರ್‌ ಸೆಲ್ಯುಲಾರ್‌ ಅಂಡ್ ಮಾಲಿಕ್ಯುಲರ್ ಬಯಾಲಜಿ ಮುಂದಾಗಿದೆ.

ಆಸ್ಪತ್ರೆ ಪರಿಸರದಲ್ಲಿನ ಗಾಳಿಯಲ್ಲಿ ಈ ವೈರಸ್ ಎಷ್ಟು ಸಮಯ ಜೀವಿಸುತ್ತದೆ, ಎಷ್ಟು ದೂರ ಚಲಿಸುತ್ತದೆ ಎಂಬ ಅಧ್ಯಯನ ಆರಂಭಿಸಿದೆ.

ಭಾರತದಲ್ಲಿ 11 ದಿನದಲ್ಲಿ 10 ಲಕ್ಷ ಮಂದಿ ಕೊರೊನಾ ಸೋಂಕಿತರು ಗುಣಮುಖ ಭಾರತದಲ್ಲಿ 11 ದಿನದಲ್ಲಿ 10 ಲಕ್ಷ ಮಂದಿ ಕೊರೊನಾ ಸೋಂಕಿತರು ಗುಣಮುಖ

ಈ ಅಧ್ಯಯನದ ಅಡಿಯಲ್ಲಿ ಆಸ್ಪತ್ರೆಗಳಲ್ಲಿರುವ ವಿವಿಧ ಸ್ಥಳಗಳಾದ ತೀವ್ರ ನಿಗಾ ಘಟಕ ಅಥವಾ ಕೊವಿಡ್‌- 19 ವಾರ್ಡ್‌ಗಳಿಂದ ಎರಡು, ನಾಲ್ಕು ಮತ್ತು ಎಂಟು ಮೀಟರ್‌ ವ್ಯಾಪ್ತಿಯಲ್ಲಿರುವ ವ್ಯಕ್ತಿಗಳಿಂದ ಮಾದರಿಗಳನ್ನು ಸಂಗ್ರಹಿಸಿ, ಅಧ್ಯಯನ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.

ಈ ಅಧ್ಯಯನವನ್ನು ಆರಂಭಿಸಿ 10 ದಿನಗಳು ಕಳೆದಿದ್ದು, ಫಲಿತಾಂಶ ಹೊರಬರಬೇಕಿದೆ. ವೈರಸ್ ಮೂರು ಮೀಟರ್‌ಗಳ ವರೆಗೆ ಗಾಳಿಯಲ್ಲಿ ಸಂಚರಿಸಬಲ್ಲದು.

ಮಾಲ್, ಬ್ಯಾಂಕ್, ಬಯಲಿನಲ್ಲಿ ಸೋಂಕು ಎಷ್ಟು ಹೊತ್ತು ಇರುತ್ತದೆ

ಮಾಲ್, ಬ್ಯಾಂಕ್, ಬಯಲಿನಲ್ಲಿ ಸೋಂಕು ಎಷ್ಟು ಹೊತ್ತು ಇರುತ್ತದೆ

ಸೋಂಕಿತರಿಂದ ವೈರಸ್‌ ಗಾಳಿಯೊಳಗೆ ಸೇರಿದ ನಂತರ ಎಷ್ಟು ಹೊತ್ತಿನವರೆಗೆ ಜೀವಿಸಿರುತ್ತದೆ ಎಂಬುದನ್ನು ಅಧ್ಯಯನದಿಂದ ತಿಳಿಯಲಾಗುತ್ತದೆ' ಎಂದು ಮಿಶ್ರಾ ವಿವರಿಸಿದ್ದಾರೆ.

ಈ ಅಧ್ಯಯನದಿಂದ ದೊರೆಯುವ ಫಲಿತಾಂಶವನ್ನು ಆಧರಿಸಿ, ಸಾರ್ವಜನಿಕರು ಸೇರುವ ಬ್ಯಾಂಕ್‌, ಮಾಲ್‌ನಂತಹ ಪ್ರದೇಶಗಳು ಅಥವಾ ಬಯಲಿನಲ್ಲಿರುವ ಜನರಿಂದ ಗಂಟಲು ಮತ್ತು ಮೂಗಿನ ದ್ರವದ ಮಾದರಿಗಳನ್ನು ತೆಗೆದುಕೊಂಡು ಪರೀಕ್ಷೆಗೆ ಒಳಪಡಿಸಲಾಗುತ್ತದೆ. 'ಕೊರೊನಾ ಸೋಂಕಿತ ವ್ಯಕ್ತಿಯ ಪರಿಸರದಲ್ಲಿ ವೈರಸ್‌ ಎಷ್ಟು ದೂರ ಮತ್ತು ಸಮಯ ಗಾಳಿಯಲ್ಲಿ ಇರುತ್ತದೆ.
ಗಾಳಿಯ ಮೂಲಕವೂ ಕೊರೊನಾ ಸೋಂಕು ಹರಡುವಿಕೆ

ಗಾಳಿಯ ಮೂಲಕವೂ ಕೊರೊನಾ ಸೋಂಕು ಹರಡುವಿಕೆ

ಗಾಳಿ ಮೂಲಕವೂ ಕೊರೊನಾ ವೈರಸ್‌ ಪ್ರಸರಣವಾಗುತ್ತದೆ ಎಂಬುದಾಗಿ ವಿಶ್ವದ ವಿವಿಧ ದೇಶಗಳ 200ಕ್ಕೂ ಹೆಚ್ಚು ಜನ ವಿಜ್ಞಾನಿಗಳು ವಿಶ್ವ ಆರೋಗ್ಯ ಸಂಸ್ಥೆಗೆ ಎರಡು ತಿಂಗಳ ಹಿಂದೆ ಪತ್ರ ಬರೆದಿದ್ದರು. ಈ ಹಿನ್ನೆಯಲ್ಲಿ ಈ ಅಧ್ಯಯನಕ್ಕೆ ಮಹತ್ವ ಬಂದಿದೆ.

ಆರೋಗ್ಯ ಸಿಬ್ಬಂದಿಯ ಆರೋಗ್ಯದ ಗತಿ ಏನು?

ಆರೋಗ್ಯ ಸಿಬ್ಬಂದಿಯ ಆರೋಗ್ಯದ ಗತಿ ಏನು?

'ಆಸ್ಪತ್ರೆಯಲ್ಲಿ ಹಾಗೂ ಸದಾ ಸೋಂಕಿತರ ಸಮೀಪದಲ್ಲೇ ಕಾರ್ಯನಿರ್ವಹಿಸುವ ಆರೋಗ್ಯ ಸೇವಾ ಸಿಬ್ಬಂದಿಯ ಸುರಕ್ಷತೆಯನ್ನು ಹೆಚ್ಚಿಸಲು ಈ ಅಧ್ಯಯನ ಸಹಕಾರಿಯಾಗಲಿದೆ' ಎಂದು ಸಿಸಿಎಂಬಿ ನಿರ್ದೇಶಕ ರಾಕೇಶ್ ಮಿಶ್ರಾ ತಿಳಿಸಿದ್ದಾರೆ.

ವಿಶ್ವದಾದ್ಯಂತ 10 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ

ವಿಶ್ವದಾದ್ಯಂತ 10 ಲಕ್ಷ ದಾಟಿದ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ

ವಿಶ್ವದಾದ್ಯಂತ ಕೊರೊನಾ ಸೋಂಕಿತರ ಸಾವಿನ ಸಂಖ್ಯೆ 10 ಲಕ್ಷ ದಾಟಿದೆ. ಕೊರೊನಾ ವೈರಸ್ ವಿಶ್ವದ ಆರ್ಥಿಕತೆ, ಸಾಮಾಜಿಕ, ರಾಜಕೀಯ ಪರಿಸ್ಥಿತಿ, ಸಾಮಾನ್ಯ ಜನಜೀವನ ಮೇಲೆ ಇನ್ನಿಲ್ಲದಂತ ಪರಿಣಾಮವನ್ನುಂಟುಮಾಡಿದ್ದು, ಭಾರತ, ಬ್ರೆಜಿಲ್ ಮತ್ತು ಅಮೆರಿಕಾ ದೇಶಗಳು ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಅನುಭವಿಸುತ್ತಿವೆ.
ನಿನ್ನೆಯ ಹೊತ್ತಿಗೆ ಕೊರೊನಾಗೆ ವಿಶ್ವಾದ್ಯಂತ 10 ಲಕ್ಷದ 009 ಮಂದಿ ಬಲಿಯಾಗಿದ್ದು 33 ಲಕ್ಷದ 018 ಸಾವಿರದ 877 ಮಂದಿಗೆ ಸೋಂಕು ತಗಲಿದೆ. ಅಮೆರಿಕಾದಲ್ಲಿ ಅತಿ ಹೆಚ್ಚು ಸಾವು 2 ಲಕ್ಷಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ನಂತರದ ಸ್ಥಾನಗಳಲ್ಲಿ ಬ್ರೆಜಿಲ್, ಭಾರತ, ಮೆಕ್ಸಿಕೊ ಮತ್ತು ಬ್ರಿಟನ್ ದೇಶಗಳಿವೆ.

Recommended Video

UNLOCK 5.0 ಎನಿರತ್ತೆ ? ಎನಿರಲ್ಲಾ?? | Oneindia Kannada

English summary
The CSIR-Centre for Cellular and Molecular Biology (CCMB) here has launched a study in hospital environment to assess how long and far the coronavirus can stay in air from an infected person, in a bid to strengthen the safety of health workers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X