ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

947 ಕೋಟಿ ರು ಬಾಕಿ, ಜಗನ್ ಪಕ್ಷದ ಕಚೇರಿ ಮೇಲೆ ಸಿಬಿಐ ದಾಳಿ

|
Google Oneindia Kannada News

ಹೈದರಾಬಾದ್, ಏಪ್ರಿಲ್ 30: ಸರಿ ಸುಮಾರು 947 ಕೋಟಿ ರು ಸಾಲ ಬಾಕಿ ಉಳಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮನೆ ಹಾಗೂ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದೆ.

ಆಂಧ್ರಪ್ರದೇಶದ ನರಸಾಪುರಂ ಕ್ಷೇತ್ರದ ಅಭ್ಯರ್ಥಿ ಕೆ ರಘುರಾಮ್ ಕೃಷ್ಣಂ ರಾಜು ಅವರ ಮನೆ ಹಾಗೂ ಕಚೇರಿ ಮೇಲೆ ಮಂಗಳವಾರದಂದು ದಾಳಿ ನಡೆಸಿದೆ. ರಾಜು ಅವರ ಇಂಡ್ ಭಾರತ್ ಗ್ರೂಪ್ ಸಂಸ್ಥೆಯು ಮೂರು ಆರ್ಥಿಕ ಸಂಸ್ಥೆಯಿಂದ 2,655 ಕೋಟಿ ರುಗೂ ಅಧಿಕ ಸಾಲ ಪಡೆದುಕೊಂಡಿದೆ.

ವೈಎಸ್ಸಾರ್ ಪಕ್ಷದ ಪ್ರಣಾಳಿಕೆಯಲ್ಲಿ 20 ಲಕ್ಷ ವೆಚ್ಚದಲ್ಲಿ ಮನೆ ಭರವಸೆವೈಎಸ್ಸಾರ್ ಪಕ್ಷದ ಪ್ರಣಾಳಿಕೆಯಲ್ಲಿ 20 ಲಕ್ಷ ವೆಚ್ಚದಲ್ಲಿ ಮನೆ ಭರವಸೆ

ಪವರ್ ಫಿನಾನ್ಸ್ ಕಾರ್ಪೊರೇಷನ್, ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್ ಲಿ, ಇಂಡಿಯಾ ಇನ್ಫ್ರಾ ಸ್ಟ್ರಕ್ಚರ್ ಫಿನಾನ್ಸ್ ಕಂಪನಿ ಲಿಮಿಟೆಡ್ ನಿಂದ ಪಡೆದ ಸಾಲದ ಪ್ರಮಾಣದಲ್ಲಿ 947 ಕೋಟಿ ರು ಹಿಂತಿರುಗಿಸಿಲ್ಲ.

CBI Searches YSR Congress Candidates Offices, Residences in Rs 947 Crore Loan Default Case

ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು, ಎಫ್ಐಆರ್ ಹಾಕಲಾಗಿದ್ದು, ದಾಳಿ ವಿವರಗಳು ಇನ್ನು ಲಭ್ಯವಾಗಿಲ್ಲ. ರಘುರಾಮ್ ಕೃಷ್ಣಂ ರಾಜು ಅವರ ಎರಡು ಮನೆ, ನಾಲ್ಕು ಕಚೇರಿಗಳಲ್ಲಿ ದಾಳಿಯಾಗಿದೆ.

ತೆಲುಗು ದೇಶಂ ಪಾರ್ಟಿಯಲ್ಲಿದ್ದ ಕೃಷ್ಣಂರಾಜು ಅವರು ಕಳೆದ ವರ್ಷ ಟಿಡಿಪಿ ತೊರೆದು ಜಗನ್ ಮೋಹನ್ ರೆಡ್ಡಿ ಪಕ್ಷ ಸೇರಿದ್ದರು.

ವೈಎಸ್ಸಾರ್ ಪಟ್ಟಿ ಪ್ರಕಟ : ವೈಎಸ್ ಅವಿನಾಶ್ ರೆಡ್ಡಿ ಸೇರಿ 25 ಅಭ್ಯರ್ಥಿಗಳುವೈಎಸ್ಸಾರ್ ಪಟ್ಟಿ ಪ್ರಕಟ : ವೈಎಸ್ ಅವಿನಾಶ್ ರೆಡ್ಡಿ ಸೇರಿ 25 ಅಭ್ಯರ್ಥಿಗಳು

ಲೋಕಸಭೆ ಚುನಾವಣೆ 2019ರ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಡಿಎಂಕೆ ನಾಯಕಿ ಕನ್ನಿಮೋಳಿ, ಜೆಡಿಎಸ್ ನ ಪುಟ್ಟರಾಜು ಸೇರಿದಂತೆ ಅನೇಕ ಕಡೆಗಳಲ್ಲಿ ಐಟಿ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
The CBI on Tuesday searched the residences and offices of YSR Congress candidate from Narsapuram, K Raghurama Krishnam Raju, for alleged loan default of over Rs 947 crore, agency officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X