ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫ್ಲೈಓವರ್‌ನಿಂದ ಕೆಳಕ್ಕೆ ಬಿದ್ದ ಕಾರ್, ಮಹಿಳೆ ಸಾವು: ಭೀಕರ ಘಟನೆಯ ವೈರಲ್ ವಿಡಿಯೋ

|
Google Oneindia Kannada News

ಹೈದರಾಬಾದ್, ನವೆಂಬರ್ 23: ವೇಗವಾಗಿ ಸಾಗುತ್ತಿದ್ದ ಕಾರೊಂದು ಮೇಲ್ಸೇತುವೆಂದ ಕೆಳಕ್ಕೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಭೀಕರ ಘಟನೆ ಹೈದರಾಬಾದ್‌ನ ಗಚ್ಚಿಬೌಲಿಯಲ್ಲಿ ಶನಿವಾರ ನಡೆದಿದೆ. ಕಾರ್ ಸೇತುವೆಯಿಂದ ಬೀಳುವ ವಿಡಿಯೋ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ದೃಶ್ಯ ವೈರಲ್ ಆಗಿದೆ.

ಇತ್ತೀಚೆಗಷ್ಟೇ ಉದ್ಘಾಟನೆಗೊಂಡಿದ್ದ ಬಯೋ ಡೈವರ್ಸಿಟಿ ಫ್ಲೈಓವರ್‌ನಿಂದ ಮಧ್ಯಾಹ್ನ 1 ಗಂಟೆ ಸುಮಾರಿಗೆ ಕಾರ್ ನಿಯಂತ್ರಣ ತಪ್ಪಿ ಕೆಳಕ್ಕೆ ರಸ್ತೆಯಲ್ಲಿದ್ದ ಕಾರ್ ಮೇಲೆ ಬಿದ್ದಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ. ಎರಡು ಕಾರ್‌ಗಳಿಗೆ ಹಾನಿಯಾಗಿದೆ.

 ಅಪಘಾತ; ರಸ್ತೆ ಮೇಲೆ ಚಿಂದಿಯಾಗಿ ಹೋದ ಮೂವತ್ತು ಕುರಿಗಳು, ಮಹಿಳೆ ಅಪಘಾತ; ರಸ್ತೆ ಮೇಲೆ ಚಿಂದಿಯಾಗಿ ಹೋದ ಮೂವತ್ತು ಕುರಿಗಳು, ಮಹಿಳೆ

ಗಾಯಾಳುಗಳನ್ನು ಸಮೀಪದ ಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ ಇಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಮಹಿಳೆಯನ್ನು ಸತ್ಯವೇಣಿ (40) ಎಂದು ಗುರುತಿಸಲಾಗಿದೆ.

ಕಾರ್ ಅಡಿ ನಜ್ಜುಗುಜ್ಜಾದ ಮಹಿಳೆ

ವೇಗವಾಗಿ ಸಾಗುತ್ತಿದ್ದ ಕೆಂಪು ಬಣ್ಣದ ವೋಕ್ಸ್ ವ್ಯಾಗನ್ ಜಿಟಿಐ ಕಾರ್, ಮೇಲ್ಸೇತುವೆಯ ತಿರುವಿನಲ್ಲಿ ನಿಯಂತ್ರಣ ತಪ್ಪಿದೆ. ಎತ್ತರದಿಂದ ಜೋರಾಗಿ ಕೆಳಕ್ಕೆ ಬಿದ್ದರೂ, ಕಾರ್‌ನ ಏರ್‌ ಬ್ಯಾಗ್‌ಗಳು ತೆರೆದುಕೊಂಡಿದ್ದರಿಂದ ಚಾಲಕ ಮಿಲನ್ ಅಪಾಯದಿಂದ ಪಾರಾಗಿದ್ದಾರೆ. ಆದರೆ, ಸೇತುವೆ ಕೆಳಗಿನಿಂದ ಬಿದ್ದ ಕಾರ್, ಇನ್ನೊಂದು ಪಲ್ಟಿಯಾಗಿ ರಸ್ತೆಯಲ್ಲಿ ಆಟೋಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಬಿದ್ದು ಆಕೆಯ ದೇಹ ಕಾರ್ ಅಡಿ ಸಿಲುಕಿ ನಜ್ಜುಗುಜ್ಜಾಗಿದೆ. ನಿಸಾನ್ ಶೋರೂಂ ಎದುರು ನಿಲ್ಲಿಸಿದ್ದ ಎರಡು ಹೊಸ ಕಾರುಗಳ ಸಹ ಪುಡಿಯಾಗಿವೆ.

ಇಬ್ಬರು ಸತ್ತಿದ್ದರು

ಅಪಘಾತದ ಬಳಿಕ ಮೇಲ್ಸೇತುವೆಯನ್ನು ಮೂರು ದಿನಗಳವರೆಗೆ ಬಂದ್ ಮಾಡಲಾಗಿದೆ. ನವೆಂಬರ್ 4ರಂದು ಸಚಿವ ಕೆ.ಟಿ. ರಾಮರಾವ್ ಫ್ಲೈಓವರ್‌ಅನ್ನು ಉದ್ಘಾಟಿಸಿದ್ದರು. ಈ ಅವಧಿಯಲ್ಲಿಯೇ ನಡೆದ ಎರಡನೆಯ ಪ್ರಮುಖ ಅಪಘಾತ ಇದು. ನ.10ರಂದು ಫ್ಲೈಓವರ್ ಮೇಲೆ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದರು.

ಮಂಡ್ಯದ ನಾಗಮಂಗಲ ಬಳಿ ಭೀಕರ ಅಪಘಾತ ಎಂಟು ಸಾವುಮಂಡ್ಯದ ನಾಗಮಂಗಲ ಬಳಿ ಭೀಕರ ಅಪಘಾತ ಎಂಟು ಸಾವು

ಕಡಿದಾದ ತಿರುವು

ಕಡಿದಾದ ತಿರುವು

ಈ ಫ್ಲೈಓವರ್ ಉದ್ಘಾಟನೆಯಾದ ಸಂದರ್ಭದಿಂದಲೂ ಅದರ ವಿನ್ಯಾಸದ ಕುರಿತು ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಮೇಲ್ಸೇತುವೆ ಮೇಲೆ ತೀರಾ ಕಡಿದಾದ ತಿರುವನ್ನು ನಿರ್ಮಿಸಿದ್ದು, ಅಲ್ಲಿ ಈ ಅಪಾಯಕಾರಿ ತಿರುವಿನ ಬಗ್ಗೆ ಸೂಚನೆ ನೀಡುವ ಯಾವುದೇ ಫಲಕ ಅಳವಡಿಸಿಲ್ಲ. ಬಯೋಡೈವರ್ಸಿಟಿ ಮೇಲ್ಸೇತುವೆಯು ನಗರದ ಐಟಿ ವಲಯದ ಪ್ರಮುಖ ರಸ್ತೆಯಾಗಿದ್ದು, ದಿನನಿತ್ಯವೂ ಲಕ್ಷಾಂತರ ವಾಹನಗಳು ಇಲ್ಲಿ ಓಡಾಡುತ್ತವೆ.

69.47 ಕೋಟಿ ರೂ. ವೆಚ್ಚದ ಮೇಲ್ಸೇತುವೆ

69.47 ಕೋಟಿ ರೂ. ವೆಚ್ಚದ ಮೇಲ್ಸೇತುವೆ

ಏಕಮುಖ ಸಂಚಾರದ 990 ಮೀಟರ್ ಉದ್ದದ ಫ್ಲೈಓವರ್‌ಅನ್ನು ರಾಜ್ಯ ಸರ್ಕಾರದ ಸ್ಟ್ರಾಟೆಜಿಕ್ ರೋಡ್ ಡೆವಲಪ್‌ಮೆಂಟ್ ಪ್ರೋಗ್ರಾಮ್ ಅಡಿ 69.47 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದರ ಎದುರಾಗಿ ಇನ್ನೊಂದು ಫ್ಲೈಓವರ್‌ಅನ್ನು ಕೂಡ ನಿರ್ಮಿಸಲಾಗುತ್ತಿದೆ.

English summary
A car falls from Hyderabad's newly inaugarated biodiversity flyover and killed a women. Video went viral in social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X