ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಎಂ ವಿರುದ್ಧ ಅವಾಚ್ಯ ಶಬ್ದ, ನಟಿ ಕಮ್ ಶಾಸಕಿ ರೋಜಾ ಸಸ್ಪೆಂಡ್

By Mahesh
|
Google Oneindia Kannada News

ಹೈದರಾಬಾದ್, ಡಿ.18: ವಿಧಾನಸಭೆ ಅಧಿವೇಶನ ಜಾರಿಯಲ್ಲಿರುವಾಗಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಅವಾಚ್ಯ ಶಬ್ದ ಬಳಸಿ ನಿಂದಿಸಿದ ಆರೋಪವನ್ನು ಶಾಸಕಿ ರೋಜಾ ಮೇಲೆ ಹೊರೆಸಲಾಗಿದೆ. ನಟಿ ಕಮ್ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕಿ ರೋಜಾ ಅವರನ್ನು ಒಂದು ವರ್ಷದ ಅವಧಿಗೆ ಸದನದಿಂದ ಅಮಾನತು ಮಾಡಿ ಸ್ಪೀಕರ್ ಕೊಡಲಾ ಶಿವಪ್ರಸಾದ್ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

ಕಾಲ್ ಮನಿ ಹಗರಣಕ್ಕೆ ಸಂಬಂಧಿಸಿದಂತೆ ಬಿಸಿಬಿಸಿ ಚರ್ಚೆ ನಡೆಯುವಾಗ 'Kama Chandrababu, Call Chandrababu and Scam Chandrababu" ಎಂದು ಶಾಸಕಿ ರೋಜಾ ಅವರು ಎತ್ತರದ ದನಿಯಲ್ಲಿ ಕೂಗಿ ಕರೆದರು. ನಂತರ ಪಕ್ಷದ ಮುಖಂಡ, ವಿಪಕ್ಷ ನಾಯಕ ಜಗನ್ ಮೋಹನ್ ರೆಡ್ಡಿ ಜೊತೆಗೆ 50ಕ್ಕೂ ಅಧಿಕ ಸದಸ್ಯರು ಸದನವನ್ನು ತೊರೆದು ಹೊರಕ್ಕೆ ನಡೆದರು.

ಸಂವಿಧಾನದ ಬಗ್ಗೆ ಚರ್ಚೆ ಆರಂಭಿಸಲು ಸ್ಪೀಕರ್ ಮತ್ತೊಮ್ಮೆ ಮುಂದಾದಾಗ ಉಳಿದ ಕೆಲ ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಶಾಸಕರು ಕಾಲ್ ಮನಿ ಬಗ್ಗೆ ಚರ್ಚೆಗೆ ಅಗ್ರಹಿಸಿದರು..

 Ysrcp MLA Roja Suspended from Andhra Pradesh for 1 Year

ಸದನದಿಂದ ಹೊರಕ್ಕೆ ಹೋಗುವುದನ್ನು ಸ್ಪೀಕರ್ ಗೆ ಕೂಡಾ ತಿಳಿಸದೆ ವೈಎಸ್ಸಾರ್ ಪಕ್ಷದ ಮುಖಂಡರು ಪ್ರಮಾದ ಎಸಗಿದ್ದಾರೆ. ಸಿಎಂರನ್ನು ನಿಂದಿಸಿ ಅಸಂವಿಧಾನಾತ್ಮಕ ಶಬ್ದಗಳನ್ನು ಬಳಸಿರುವ ರೋಜಾ ಅವರ ವಿರುದ್ಧ ಕ್ರಮ ಜರುಗಿಸುವಂತೆ ಆಡಳಿತಾರೂಢ ತೆಲುಗುದೇಶಂ ಪಾರ್ಟಿಯ ವಿತ್ತ ಸಚಿವ ಯೆನಮಾಲಾ ರಾಮಕೃಷ್ಣನುಡು ಆಗ್ರಹಿಸಿದರು.

ರಕ್ತ ಚರಿತ ಕಥೆ: ರಾಯಲಸೀಮೆಯನ್ನು ನಡುಗಿಸಿದ ರಕ್ತಚರಿತದ ಅಂತ್ಯವನ್ನು ರಾಜಕೀಯ ದಾಳವಾಗಿ ಬಳಸಿಕೊಂಡ ವೈಎಸ್ ರಾಜಶೇಖರ ರೆಡ್ಡಿ ಹಾಗೂ ಜಗನ್ ಮೋಹನ್ ರೆಡ್ಡಿ ವಿರುದ್ಧ ಟಿಡಿಪಿ ಶಾಸಕರು ಮುಗಿಬಿದ್ದರು. ಮಾಜಿ ಸಚಿವ ಪೆರಿಟಾಲ ರವಿ ಸೇರಿದಂತೆ 400ಕ್ಕೂ ಅಧಿಕ ಟಿಡಿಪಿ ಮುಖಂಡರ ಹತ್ಯೆ ಆರೋಪವನ್ನು ಜಗನ್ ಮೇಲೆ ಹೊರೆಸುತ್ತಿದ್ದಂತೆ ಸದನದಲ್ಲಿ ಗದ್ದಲ ಮುಗಿಲು ಮುಟ್ಟಿತು.

ಕಾಲ್ ಮನಿ: ಬೆಂಗಳೂರಿನಲ್ಲಿ ಜನಪ್ರಿಯಗೊಂಡು ಕುಖ್ಯಾತಿ ಗಳಿಸಿರುವ ಮೀಟರ್ ಬಡ್ಡಿ ದಂಧೆಯ ಮಾದರಿಯ ಲೇವಾದೇವಿ ವ್ಯವಹಾರ ಇದಾಗಿದೆ. ಆಂಧ್ರಪ್ರದೇಶದಲ್ಲಿ ಸುಮಾರು 80ಕ್ಕೂ ಅಧಿಕ ಕಾಲ್ ಮನಿ ಆಪರೇಟರ್ ಗಳನ್ನು ಗುರುತಿಸಲಾಗಿದೆ. ಕಾಲ್ ಮಾಡಿದರೆ ಸಾಕು ಮನೆ ಬಾಗಿಲಿಗೆ ಹಣವನ್ನು ತಲುಪಿಸಲಾಗುತ್ತದೆ. ಆದರೆ, ಅವರು ಕೇಳಿದ್ದಷ್ಟು ಬಡ್ಡಿ ನೀಡಬೇಕು. ಹಾಗೂ ಯಾವಾಗ ಬೇಕಾದ್ರೂ ವ್ಯವಹಾರ ನಿಲ್ಲಿಸಿ ಅಸಲು ಸಮೇತ ಎಲ್ಲವನ್ನು ಚುಕ್ತಾ ಮಾಡಬೇಕಾಗುತ್ತದೆ. (ಪಿಟಿಐ)

English summary
Ysrcp MLA Roja Suspended from Andhra Pradesh for 1 Year. More than 50 members of YSR Congress, including Opposition leader Y S Jaganmohan Reddy, were suspended from Andhra Pradesh Assembly on Friday after they staged protest to press for a debate on 'call money racket', stalling proceedings in the House.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X