ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್: ಭೇಟಿಗೂ ಮೊದಲೇ ಪ್ರಧಾನಿ ಮೋದಿಗೆ ಬೈ ಬೈ ಹೋರ್ಡಿಂಗ್‌

|
Google Oneindia Kannada News

ಹೈದರಾಬಾದ್, ಜೂನ್ 30: ಭಾರತೀಯ ಜನತಾ ಪಕ್ಷದ (ಬಿಜೆಪಿ) ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ಜುಲೈ 2 ಮತ್ತು 3 ರಂದು ನಡೆಯಲಿದ್ದು, ಸಿಕಂದರಾಬಾದ್‌ನಲ್ಲಿ ಪರೇಡ್ ಗ್ರೌಂಡ್ ಬಳಿ ಬೃಹತ್ ಹೋರ್ಡಿಂಗ್ ಅನ್ನು ಹಾಕಲಾಗಿದೆ.

ಹೋರ್ಡಿಂಗ್‌ನಲ್ಲಿ ಬೈ ಬೈ ಮೋದಿ (BYE BYE MODI) ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಮತ್ತು "ಡೋಂಟ್ ಕಿಲ್ ಪೀಪಲ್ ಮೋದಿ" ಮತ್ತು "ಎನಫ್ ಮೋದಿ" ಎಂಬ ಬೃಹತ್ ಬರಹಗಳು ಇದ್ದವು. ಇದು ಹೊಸದಾಗಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆ, ಕೃಷಿ ಕಾನೂನುಗಳು, ನೋಟು ಅಮಾನ್ಯೀಕರಣ ಮತ್ತು ಎರಡನೇ ತರಂಗದಲ್ಲಿ ಕೋವಿಡ್-19 ಬಿಕ್ಕಟ್ಟನ್ನು ಕೇಂದ್ರ ಸರ್ಕಾರ ನಿಭಾಯಿಸಿದ ಬರೆಯಲಾಗಿತ್ತು.

'ಪ್ರಧಾನಿ ಮೋದಿ ಮಾತು ಕೇಳದೇ ಎಚ್‌ಡಿಕೆ ತಪ್ಪು ಮಾಡಿದರು': ಎಚ್.ಡಿ.ರೇವಣ್ಣ'ಪ್ರಧಾನಿ ಮೋದಿ ಮಾತು ಕೇಳದೇ ಎಚ್‌ಡಿಕೆ ತಪ್ಪು ಮಾಡಿದರು': ಎಚ್.ಡಿ.ರೇವಣ್ಣ

ಜೂನ್ 28 ರಂದು ಅಪರಿಚಿತರು ಹಾಕಿದ್ದ ಹೋರ್ಡಿಂಗ್ ಅನ್ನು ಮರುದಿನ ತಕ್ಷಣವೇ ತೆಗೆದುಹಾಕಲಾಗಿದೆ. ಆದರೆ ಈ ಹೋರ್ಡಿಂಗ್‌ಗಳನ್ನು ಅನೇಕ ಜನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Bye Bye Modi Hoarding in Secunderabad Ahead Of Modi Visits July 2 And 3

ನಗರದಾದ್ಯಂತ ಇಂತಹ ಹೋರ್ಡಿಂಗ್‌ಗಳು ಮತ್ತು ಪೋಸ್ಟರ್‌ಗಳನ್ನು ಅಳವಡಿಸಿರುವುದು ಇದೇ ಮೊದಲೇನಲ್ಲ. ಈ ವರ್ಷದ ಫೆಬ್ರವರಿಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 5 ರಂದು ಸಮಾನತೆಯ ಪ್ರತಿಮೆಯನ್ನು ಅನಾವರಣಗೊಳಿಸಲು ಹೈದರಾಬಾದ್‌ನಲ್ಲಿದ್ದಾಗ, ಯುವಕರ ಗುಂಪೊಂದು ಹುಸೇನ್ ಸಾಗರ್ ಕೆರೆಯಲ್ಲಿ ಉದ್ಯೋಗ ಸೃಷ್ಟಿ, ತೆಲಂಗಾಣಕ್ಕೆ ಐಟಿಐಆರ್, ರೈಲ್ ಕೋಚ್ ಫ್ಯಾಕ್ಟರಿ, ಅರಿಶಿನ ಮಂಡಳಿ, ಬಯ್ಯಾರಂ ಸ್ಟೀಲ್ ಫ್ಯಾಕ್ಟರಿ ಮತ್ತು ರಾಜ್ಯದಲ್ಲಿ ಐಐಎಂ ಸ್ಥಾಪನೆ ಮುಂತಾದ ಹಲವಾರು ಪ್ರಶ್ನೆಗಳನ್ನು ಕೇಳುತ್ತಾ ಪ್ರತಿಭಟನೆ ನಡೆಸಿದ್ದರು.

ಅಬುಧಾಬಿ: ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಯುಎಇ ಅಧ್ಯಕ್ಷಅಬುಧಾಬಿ: ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡ ಯುಎಇ ಅಧ್ಯಕ್ಷ

ಮೇ 26 ರಂದು, ಮೋದಿ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್ (ISB) 20 ವರ್ಷಗಳ ಪೂರ್ಣಗೊಳಿಸುವಿಕೆ ಮತ್ತು 2022 ರ ತರಗತಿಯ ಪದವಿ ಸಮಾರಂಭದಲ್ಲಿ ಭಾಗವಹಿಸಲು ಹೈದರಾಬಾದ್‌ಗೆ ಭೇಟಿ ನೀಡಿದರು. ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ಬೆಂಬಲಿಗರು ವಿಶ್ವವಿದ್ಯಾನಿಲಯಕ್ಕೆ ಹೋಗುವ ದಾರಿಯಲ್ಲಿ ಹಲವಾರು ಬಾಕಿ ಇರುವ ಯೋಜನೆಗಳ ಬಗ್ಗೆ ಪ್ರಶ್ನೆಗಳನ್ನು ಪೋಸ್ಟರ್‍‌ನಲ್ಲಿ ಪ್ರಿಂಟ್ ಮಾಡಿಸಿ ಹಾಕಿದ್ದರು.

Bye Bye Modi Hoarding in Secunderabad Ahead Of Modi Visits July 2 And 3

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಹೆಚ್‌ಎಂಸಿ) ನ ವಿಜಿಲೆನ್ಸ್ ಮತ್ತು ಜಾರಿ ವಿಭಾಗದ ಅಧಿಕಾರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಅವರು ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಜುಲೈ 2 ಮತ್ತು 3 ರಂದು ಬಿಜೆಪಿ ಕಾರ್ಯಕಾರಿಣಿ ಸಭೆ

ಪ್ರಧಾನಿ ನರೇಂದ್ರ ಮೋದಿ, ಜುಲೈ 2 ಮತ್ತು 3 ರಂದು ಹೈದರಾಬಾದ್ ನಗರಕ್ಕೆ ಭೇಟಿ ನೀಡಲಿದ್ದು, ಹೈದರಾಬಾದ್ ಇಂಟರ್‌ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ (ಎಚ್‌ಐಸಿಸಿ) ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸಹ ಭಾಗವಹಿಸುವ ನಿರೀಕ್ಷೆಯಿದೆ.

English summary
As the Bharatiya Janata Party (BJP) national executive meet is scheduled to take place on July 2 and 3, a massive hoarding was put up in Secunderabad. The hoarding had the picture of Prime Minister Narendra Modi with hashtags #BYEBYEMODI.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X