ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಭೀತಿ: ಬಿಜೆಪಿ ಶಾಸಕ ಹಾಗೂ ಕುಟುಂಬಕ್ಕೆ ಕ್ವಾರಂಟೈನ್

|
Google Oneindia Kannada News

ಹೈದರಾಬಾದ್, ಜೂನ್ 21: ಕೊರೊನಾವೈರಸ್ ಸೋಂಕು ಭೀತಿಯಲ್ಲಿ ಬಿಜೆಪಿ ಶಾಸಕ ಹಾಗೂ ಆತನ ಕುಟುಂಬಸ್ಥರು ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಬಿಜೆಪಿ ಶಾಸಕ ರಾಜ ಸಿಂಗ್ ಸದ್ಯ ಹೋಂ ಕ್ವಾರಂಟೈನಲ್ಲಿದ್ದಾರೆ. ರಾಜ ಸಿಂಗ್ ಅವರ ಗನ್ ಮ್ಯಾನ್ ಗೆ ಸೋಂಕು ತಗುಲಿದ್ದು ಪಾಸಿಟಿವ್ ಎಂದು ವರದಿ ಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಿಂದ ಸಂಪರ್ಕಕ್ಕೆ ಬಂದವರೆಲ್ಲರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ.

Recommended Video

ಕಳೆದ 2 ವಾರಗಳಲ್ಲಿ ಪೆಟ್ರೋಲ್ ಬೆಲೆಯಲ್ಲಿ 7 ₹ ಹೆಚ್ಚಳ | Petrol Price Hiked | Oneindia Kannada

ಹೈದರಾಬಾದಿನಲ್ಲಿ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಶುಕ್ರವಾರದಂದು ಪತ್ತೆಯಾದ 499 ಪ್ರಕರಣಗಳಲ್ಲಿ 329 ಕೇಸ್ ಜಿಎಚ್ ಎಂಸಿ ಪ್ರದೇಶದಲ್ಲೇ ಕಂಡು ಬಂದಿದೆ. ಇದರ ಜೊತೆಗೆ ಜನಪ್ರತಿನಿಧಿಗಳು, ಪೊಲೀಸ್ ಇಲಾಖೆಯಲ್ಲಿ ಕೊವಿಡ್ 19 ಪ್ರಕರಣಗಳು ಹೆಚ್ಚಾಗುತ್ತಿವೆ.

ತೆಲಂಗಾಣದಲ್ಲಿ ಲಾಕ್ ಡೌನ್ ಅಗತ್ಯವಿಲ್ಲ ಎಂದಿದ್ದೇಕೆ ಆ ಸಚಿವರು?ತೆಲಂಗಾಣದಲ್ಲಿ ಲಾಕ್ ಡೌನ್ ಅಗತ್ಯವಿಲ್ಲ ಎಂದಿದ್ದೇಕೆ ಆ ಸಚಿವರು?

ಕಳೆದ ತಿಂಗಳು ತೆಲುಗುದೇಶಂ ಪಾರ್ಟಿಯ ಸಾಸಕರಾದ ಮುತಿರೆಡ್ಡಿ ಯಾದಗಿರಿ ರೆಡ್ಡಿ, ಬಾಜಿರೆಡ್ಡಿ ಗೊವರ್ಧನ್, ಗಣೇಶ್ ಗುಪ್ತ ಅವರಿಗೆ ಕೊವಿಡ್ 19 ಪಾಸಿಟಿವ್ ಎಂದು ವರದಿ ಬಂದಿತ್ತು. ಮೂವರು ಶಾಸಕರು ಹಾಗೂ ಕುಟುಂಬಸ್ಥರಿಗೂ ಸೋಂಕು ಹರಡಿತ್ತು. ಇದಲ್ಲದೆ ಯಾದಗಿರಿ ಅವರ ಸಂಪರ್ಕದಲ್ಲಿದ್ದ ರಾಜ್ಯ ಹಣಕಾಸು ಸಚಿವ ಟಿ. ಹರೀಶ್​ ರಾವ್​​ ಸಹ ಕ್ವಾರಂಟೈನ್ ಆಗಿದ್ದಾರೆ.

BJP MLA Raja Singh and family under home quarantine

ಇದಲ್ಲದೆ ಮಾಜಿ ಬಿಜೆಪಿ ಶಾಸಕ ಚಿಂತಲಾ ರಾಮಚಂದ್ರ ರೆಡ್ಡಿ ಅವರಿಗೂ ವೈರಸ್ ಪಾಸಿಟಿವ್ ಸೋಂಕು ಕಂಡು ಬಂದಿದೆ. ಎಲ್ಲಾ ಶಾಸಕರು ಹಾಗೂ ಕುಟುಂಬಸ್ಥರು, ಸಿಬ್ಬಂದಿ ಸಂಪೂರ್ಣವಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ, ಚಿಕಿತ್ಸೆ ಮುಂದುವರೆದಿದೆ ಎಂದು ಕೆ ಚಂದ್ರಶೇಖರ್ ರಾವ್ ಸರ್ಕಾರ ಹೇಳಿದೆ.

ತೆಲಂಗಾಣದಲ್ಲಿ ಒಟ್ಟು 7072 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 3506 ಮಂದಿ ಗುಣಮುಖರಾಗಿದ್ದಾರೆ. 203 ಮಂದಿ ಮೃತರಾಗಿದ್ದಾರೆ.

English summary
BJP MLA Raja Singh, his family members and others closely associated with him have been placed in home quarantine as a personal gunman, who guards the MLA, tested positive for COVID-19 on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X