ಮಹಿಳಾ ಟೆಕ್ಕಿಯನ್ನು ಹಾಸ್ಟೆಲ್ ಬದಲು ತನ್ನ ಮನೆಗೆ ಎಳೆದೊಯ್ದ ಆಟೋ ಚಾಲಕ
ಹೈದರಾಬಾದ್, ಆಗಸ್ಟ್ 1: ಹಾಸ್ಟೆಲ್ಗೆ ಹೋಗಬೇಕು ಎಂದು ಮಹಿಳಾ ಟೆಕ್ಕಿಯೊಬ್ಬರು ಬೆಳಗಿನ ಜಾವ ಆಟೋ ಹತ್ತಿದರೆ ಡ್ರೈವರ್ ತನ್ನ ಮನೆಗೆ ಕರೆದುಕೊಂಡು ಹೋಗಿ ಕಿರುಕುಳ ನೀಡಿರುವ ಘಟನೆ ವರದಿಯಾಗಿದೆ.
ಶಿವರಾಜ್ (ಕಿರುಕುಳ ನೀಡಿದ್ದ ಆಟೋ ಚಾಲಕ) ಟೆಕ್ಕಿ ಆಂಧ್ರ ಪ್ರದೇಶದ ಪ್ರಕಾಶಂ ಜಿಲ್ಲೆಯ ನಿವಾಸಿಯಾಗಿದ್ದು, ಟೆಕ್ಕಿ ಬೆಳಗಿನ ಜಾವ ಹೈದರಾಬಾದಿಗೆ ಬಂದಿದ್ದಾರೆ.
ನಮ್ಮ ವ್ಯಾಪಾರ ಕಸಿಯುತ್ತಿದ್ದೀರ ಎಂದು ಟೆಕ್ಕಿ ಮೇಲೆ ಕೈಮಾಡಿದ ಆಟೋ ಚಾಲಕ
ಬೆಳಗಿನ ಜಾವ ಸುಮಾರು 4.15ಕ್ಕೆ ಟೆಕ್ಕಿಯೊಬ್ಬರು ಹಾಸ್ಟೆಲ್ಗೆ ಹೋಗಲು ಆಟೋ ಹತ್ತಿದ್ದರು. ಆದರೆ ಆತ ಕರೆದುಕೊಂಡು ಹೋಗಿದ್ದು ಆತನ ಮನೆಗೆ, ಮಾರ್ಗ ಬದಲಾಗುತ್ತಿದ್ದಂತೆ ಟೆಕ್ಕಿ ಆಟೋ ನಿಲ್ಲಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಆತ ಆಕೆಯ ಬ್ಯಾಗನ್ನು ಕಸಿದುಕೊಂಡು ಸುಮ್ಮನಿರುವಂತೆ ಎಚ್ಚರಿಸಿದ್ದಾನೆ.
ಮನೆ ಬಳಿ ತೆರಳುತ್ತಿದ್ದಂತೆ ಶಿವರಾಜ್ ಮಹಿಳೆಯನ್ನು ಒಳ ಬರುವಂತೆ ಬಲವಂತ ಮಾಡಿದ್ದಾನೆ. ಟೆಕ್ಕಿ ಭಯಗೊಂಡು ಕಿರುಚಾಡಿದ್ದರಿಂದ ಪೀರ್ಜಾಡಿಗುಡಾ ಮುಖ್ಯರಸ್ತೆಯಲ್ಲಿ ಮಹಿಳೆಯನ್ನು ಬಿಟ್ಟು ಹೋಗಿದ್ದಾನೆ.
ಇಷ್ಟಕ್ಕೆ ನಿಲ್ಲದ ಆತ ಆಕೆ ಬಸ್ ಹತ್ತಿ ಬಂದರೂ ಆಕೆಯನ್ನೇ ಹಿಂಬಾಲಿಸಿಕೊಂಡು ಬಂದು ಆಕೆಗೆ ಕೆಟ್ಟ ಶಬ್ಧಗಳಿಂದ ನಿಂದಿಸಿದ್ದಾನೆ ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ಅನ್ವಯ ಐಪಿಸಿ ಸೆಕ್ಷನ್ 354ಸಿ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸದ್ಯ ಆರೋಪಿಯನ್ನು ನ್ಯಾಯಂಗ ಬಂಧನದಲ್ಲಿರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಾಸ್ಟೆಲ್ ಸೇರಿದ ಟೆಕ್ಕಿ ನಡೆದ ವಿಷಯವನ್ನು ತನ್ನ ಗೆಳತಿ ಮತ್ತು ಅಲ್ಲಿಯ ಮಾಲೀಕ ತೇಜಸ್ವರ್ ರೆಡ್ಡಿಗೆ ತಿಳಿಸಿದ್ದಾರೆ. ನಂತರ ಆಟೋ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ.