ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಬ್ರಿ ಮಸೀದಿ ಅಕ್ರಮವಾದರೆ ಅಡ್ವಾಣಿ ವಿಚಾರಣೆ ಏಕೆ? ಓವೈಸಿ ಕಿಡಿ

|
Google Oneindia Kannada News

ಹೈದರಾಬಾದ್, ನವೆಂಬರ್ 11: "ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಬಾಬ್ರಿ ಮಸೀದಿ ಅಕ್ರಮ ಎಂದಾದರೆ ಬಿಜೆಪಿ ಮುಖಂಡ ಎಲ್.ಕೆ.ಅಡ್ವಾಣಿ ಅವರನ್ನು ಏಕೆ ವಿಚಾರಣೆಗೊಳಪಡಿಸಿದ್ದೀರಿ?" ಎಂದು ಎಐಎಂಐಎಂ ಮುಖಂಡ ಅಸಾದುದ್ದಿನ್ ಓವೈಸಿ ಪ್ರಶ್ನಿಸಿದ್ದಾರೆ.

"ಬಾಬ್ರಿ ಮಸೀದಿ ಸಕ್ರಮ ಎಂದಾದರೆ ಆ ಭೂಮಿಯನ್ನು ಧ್ವಂಸ ಮಾಡಿದವರಿಗೇ ಯಾಕೆ ಆ ಜಾಗವನ್ನು ಕೊಡಲಾಗಿದೆ? ಅದು ಅಕ್ರಮ ಎಂದಾದರೆ ಅದರ ದ್ವಂಸದ ಪ್ರಕರಣ ಇನ್ನೂ ಏಕಿದೆ? ಬಿಜೆಪ ಮುಖಂಡ ಎಲ್ ಕೆ ಅಡ್ವಾಣಿ ಅವರನ್ನೇಕೆ ವಿಚಾರಣೆಗೊಳಪಡಿಸಲಾಗುತ್ತಿದೆ?" ಎಂದು ಓವೈಸಿ ಪ್ರಶಸ್ನಿಸಿದರು.'

ಅಯೋಧ್ಯಾ ತೀರ್ಪಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೆ.ಕೆ. ಮುಹಮ್ಮದ್ಅಯೋಧ್ಯಾ ತೀರ್ಪಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ಕೆ.ಕೆ. ಮುಹಮ್ಮದ್

ಅಯೋಧ್ಯೆ ವಿವಾದದ ಕುರಿತು ನವೆಂಬರ್ 09 ಶನಿವಾರದಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಹೈದರಾಬಾದ್ ಅಸಾದುದ್ದಿನ್ ಓವೈಸಿ ತಮ್ಮ ಸಮಾಧಾನ ವ್ಯಕ್ತಪಡಿಸಿದ್ದರು.

ಅಡ್ವಾನಿ ವಿರುದ್ಧ ಪ್ರಕರಣವೇಕೆ?

ಅಡ್ವಾನಿ ವಿರುದ್ಧ ಪ್ರಕರಣವೇಕೆ?

ಬಾಬ್ರಿ ಮಸೀದಿ ಅಕ್ರಮ ಎಂದಾದರೆ ಎಲ್ ಕೆ ಅಡ್ವಾಣಿ ಅವರ ಮೇಲೆ ಪ್ರಕರಣವೇಕೆ? ಅವರ ಮೇಲೆ ಪ್ರಕರಣವಿದೆ ಎಂದಾದ ಮೇಲೆ ಬಾಬ್ರಿ ಮಸೀದಿ ಸಕ್ರಮ ಎಂದೇ ಅಲ್ಲವೇ? ಎಂದು ಅವರು ಪ್ರಶ್ನಿಸಿದ್ದಾರೆ.

ತೀರ್ಪಿನ ಬಗ್ಗೆ ಅತೃಪ್ತಿ

ತೀರ್ಪಿನ ಬಗ್ಗೆ ಅತೃಪ್ತಿ

ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದ ಓವೈಸಿ, "ಈ ತೀರ್ಪು ನಮಗೆ ಸ್ವಲ್ಪವೂ ತೃಪ್ತಿ ತಂದಿಲ್ಲ. ಬಾಬ್ರಿ ಮಸೀದಿ ಎಂಬುದು ನನ್ನ ಕಾನೂನಾತ್ಮಕ ಹಕ್ಕು. ನಾನು ಹೋರಾಡುತ್ತಿರುವುದು ಮಸೀದಿಗಾಗಿ, ಭೂಮಿಗಾಗಿ ಅಲ್ಲ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ತೀರ್ಪಿನ ಬಗ್ಗೆ ತಕರಾರಿಲ್ಲವೆಂದ ಮೂಲ ಅರ್ಜಿದಾರ ಟೈಲರ್!ಸುಪ್ರೀಂ ತೀರ್ಪಿನ ಬಗ್ಗೆ ತಕರಾರಿಲ್ಲವೆಂದ ಮೂಲ ಅರ್ಜಿದಾರ ಟೈಲರ್!

ಐದು ಎಕರೆ ಜಮೀನು ನಮಗೆ ಬೇಡ

ಐದು ಎಕರೆ ಜಮೀನು ನಮಗೆ ಬೇಡ

ಅಯೋಧ್ಯೆ ವಿವಾದದ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿ, ವಿವಾದಿತ ಜಾಗದಿಂದ ಬೇರೆಡೆಗೆ ಮುಸ್ಲಿಮರಿಗೆ ಐದು ಎಕರೆ ಜಮೀನು ನೀಡಲು ಆದೇಶಿತ್ತು. ಈ ಕುರಿತು ಮಾತನಾಡಿದ್ದ ಓವೈಸಿ, ಐದು ಎಕರೆ ಜಮೀನಿನ ಭಿಕ್ಷೆ ನಮಗೆ ಬೇಕಿಲ್ಲ. ಹೈದರಬಾದಿನಲ್ಲಿ ರಸ್ತೆಗಿಳಿಸುವ ದೇಣಿಗೆ ಎತ್ತಿಯೇ ಆ ಜಮೀನು ಪಡೆಯಬಹುದು. ನಮಗೆ ನ್ಯಾಯ ಬೇಕು. ತೀರ್ಪು ತೃಪ್ತಿ ತಂದಿಲ್ಲ ಎಂದಿದ್ದರು.

ಅಯೋಧ್ಯೆ ತೀರ್ಪು

ಅಯೋಧ್ಯೆ ತೀರ್ಪು

ಶನಿವಾರ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನಲ್ಲಿ ರಾಮಜನ್ಮಭೂಮಿ ವಿವಾದಿತ ಜಾಗವನ್ನು ರಾಮಜನ್ಮಭೂಮಿ ನ್ಯಾಸ ಟ್ರಸ್ಟ್ ಗೆ ನೀಡುವಂತೆ ಸೂಚನೆ ನೀಡಿತ್ತು. ಸುನ್ನಿ ವಕ್ಫ್ ಬೋರ್ಡಿಗೆ ಮಸೀದಿ ನಿರ್ಮಾಣಕ್ಕಾಗಿ 5 ಎಕರೆ ಪರ್ಯಾಯ ಜಮೀನು ನೀಡುವಂತೆಯೂ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿತ್ತು.

ಅಯೋಧ್ಯಾ ತೀರ್ಪು: 5 ಎಕರೆ ಜಮೀನು ಭಿಕ್ಷೆ ನಮಗೆ ಬೇಡ ಎಂದ ಓವೈಸಿಅಯೋಧ್ಯಾ ತೀರ್ಪು: 5 ಎಕರೆ ಜಮೀನು ಭಿಕ್ಷೆ ನಮಗೆ ಬೇಡ ಎಂದ ಓವೈಸಿ

English summary
AIMIM Chief Assaduddin Owasi On Ayodhya Verdict Said, If Babri Mosque Was Illegal, Why Is LK Advani Being Tried
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X