• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತೆಂದು ಹೆದರಬೇಡಿ: ಓವೈಸಿ ಅಭಯ

|

ಹೈದರಾಬಾದ್, ಜೂನ್ 01: "ಬಿಜೆಪಿ ಅಧಿಕಾರಕ್ಕೆ ಬಂತೆಮದು ಹೆದರಬೇಡಿ. ಭಾರತೀಯ ಸಂವಿಧಾನ ಎಲ್ಲ ಮತೀಯರಿಗೂ ಸಮಾನ ಸ್ವಾತಂತ್ರ್ಯ ನೀಡಿದೆ" ಎಂದು ಎಐಎಂಐಎಂ ಮುಖಂಡ, ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ ಮುಸ್ಲಿಮರಿಗೆ ಅಭಯ ನೀಡಿದ್ದಾರೆ.

ಕೇಂದ್ರ ಸಚಿವ ಸಂಪುಟ: ಪ್ರಧಾನಿ ಮೋದಿ ಕೈಯಲ್ಲಿ ಯಾವ್ಯಾವ ಖಾತೆಗಳಿವೆ?ಕೇಂದ್ರ ಸಚಿವ ಸಂಪುಟ: ಪ್ರಧಾನಿ ಮೋದಿ ಕೈಯಲ್ಲಿ ಯಾವ್ಯಾವ ಖಾತೆಗಳಿವೆ?

"ಮೋದಿ ದೇವಾಲಯಕ್ಕೆ ಹೋಗುವುದಾದರೆ ನಾವು ಮಸೀದಿಗೆ ಹೋಗಬಹುದು. ಮೋದಿ ಗುಹೆಯಲ್ಲಿ ಕೂರುವುದಾದರೆ ನಾವೂ ಮಸೀದಿಯಲ್ಲಿ ಕೂತು ಪ್ರಾರ್ಥಿಸಬಹುದು. ಮುನ್ನೂರಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದು ದೊಡ್ಡ ಸಾಧನೆಯೇನಲ್ಲ. ಭಾರತದಲ್ಲಿರುವುದು ಜೀವಂತ ಸಂವಿಧಾನ. ಮುನ್ನೂರು ಸೀಟುಗಳಿಂದ ಸಂವಿಧಾನ ನೀಡಿದ ಹಕ್ಕನ್ನು ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ" ಎಂದು ಅವರು ಹೇಳಿದ್ದಾರೆ.

ಬಿಜೆಪಿ ಹೊಡೆತಕ್ಕೆ ಕಂಗಾಲಾದ ಎನ್‌ಸಿಪಿ, ಕಾಂಗ್ರೆಸ್‌ನೊಂದಿಗೆ ವಿಲೀನ? ಬಿಜೆಪಿ ಹೊಡೆತಕ್ಕೆ ಕಂಗಾಲಾದ ಎನ್‌ಸಿಪಿ, ಕಾಂಗ್ರೆಸ್‌ನೊಂದಿಗೆ ವಿಲೀನ?

"ಉತ್ತರ ಪ್ರದೇಶದಲ್ಲೂ ಬಿಜೆಪಿ ಗೆದ್ದಿದೆ. ಜನರು ಅಲ್ಲಿ ಏನಾಗಿದೆ ಎಬುದನ್ನು ಅರ್ಥಮಾಡಿಕೊಳ್ಳಬೇಕು. ಮುನ್ನೂರು ಸೀಟು ಗೆದ್ದು ಭಾರತವನ್ನೇ ಆಳಬಹುದು ಎಂದು ಬಿಜೆಪಿ ಭಾವಿಸಿದ್ದರೆ ಅದು ತಪ್ಪು. ನಾನು ನಿಮಗೆ ಭಾಷೆ ಕೊಡುತ್ತೇನೆ, ಅಸಾದುದ್ದಿನ್ ಓವೈಸಿ ಭಾರತಕ್ಕಾಗಿ ಹೋರಾಡುತ್ತಾರೆ! ಎಲ್ಲ ದಲಿತರೂ ಒಂದಾಗಬೇಕೆಂದು ನಾನು ಈ ಮೂಲಕ ಕೋರುತ್ತೇನೆ" ಎಂದು ಅವರು ಹೇಳಿದರು.

ಇನ್ನೂರೈವತ್ತಕ್ಕೂ ಹೆಚ್ಚು ಜನರ ಪ್ರಾಣ ತೆಗೆದ ಶ್ರೀಲಂಕಾದ ನಡೆದ ಬಾಂಬ್ ದಾಳಿಗೆ ಓರ್ವ ಮುಸ್ಲಿಮನೇ ಕಾರಣ ಎಂಬುದು ತಿಳಿಯಿತು. ಆದರೆ ಅವರಿಗೆ ಯಾರು ಇಸ್ಲಾಂ ಬಗ್ಗೆ ಪಾಠ ಮಾಡಿದವರು? ಅವರಿಗೆ ನಿಜವಾದ ಇಸ್ಲಾಂ ಗೊತ್ತಿಲ್ಲ. ಮುಸ್ಲಿಂ ಮತಕ್ಕೆ ಅವರೆಲ್ಲ ಕಂಟಕ" ಎಂದು ಓವೈಸಿ ಹೇಳಿದರು.

English summary
AIMIM chief Asaduddin Owaisi said Muslims not to worry for BJP 's return to power. Muslims have their rights under constitution of India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X