ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ ಕೆಸಿಆರ್ ಗೆ ಬೆಂಬಲ ಸೂಚಿಸಿದ ಅಸಾದುದ್ದಿನ್ ಓವೈಸಿ

|
Google Oneindia Kannada News

Recommended Video

ತೆಲಂಗಾಣದಲ್ಲಿ ಕೆಸಿಆರ್ ಗೆ ಬೆಂಬಲ ಸೂಚಿಸಿದ ಅಸಾದುದ್ದಿನ್ ಓವೈಸಿ | Oneindia Kannada

ಹೈದರಾಬಾದ್, ಡಿಸೆಂಬರ್ 11: ತೆಲಂಗಾಣ ವಿಧಾನಸಭೆ ಚುನಾವಣೆಯ ನಂತರ ಮತ್ತು ಫಲಿತಾಂಶಕ್ಕೂ ಮುನ್ನಾದಿನ ತೆಲಂಗಾಣದಲ್ಲಿ ನಡೆದ ಮಹತ್ವದ ಬೆಳವಣಿಗೆಯಲ್ಲಿ ಎಐಎಂಐಎಂ ಮುಖಂಡ ಮತ್ತು ಹೈದರಾಬಾದ್ ಸಂಸದ ಅಸಾದುದ್ದಿನ್ ಓವೈಸಿ, ತಾವು ತೆಲಂಗಾಣ ರಾಷ್ಟ್ರ ಸಮಿತಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ಮೊದಲಿನಿಂದಲೂ ಕೆಸಿಆರ್ ಜೊತೆ ಉತ್ತಮ ಬಾಂಧವ್ಯವನ್ನೇ ಹೊಂದಿರುವ ಓವೈಸಿ, ಚುನಾವಣೆಯ ಪ್ರಚಾರದ ಸಮಯದಲ್ಲೂ ಟಿಆರ್ ಎಸ್ ವಿರುದ್ಧ ಹೆಚ್ಚು ಮಾತನಾಡಿರಲಿಲ್ಲ.

ಇಂದು ಓವೈಸಿ-ಕೆಸಿಆರ್ ಭೇಟಿ, ತೆಲಂಗಾಣ ರಾಜಕೀಯದಲ್ಲಿ ತಲ್ಲಣಇಂದು ಓವೈಸಿ-ಕೆಸಿಆರ್ ಭೇಟಿ, ತೆಲಂಗಾಣ ರಾಜಕೀಯದಲ್ಲಿ ತಲ್ಲಣ

ಬಹುತೇಕ ಚುನಾವಣೋತ್ತರ ಸಮೀಕ್ಷೆಗಳು ತೆಲಂಗಾಣದಲ್ಲಿ ಟಿಆರ್ ಎಸ್ ಗೆಲುವು ಸಾಧಿಸುವುದು ಖಚಿತ ಎಂದಿವೆ. ರಾಜಕೀಯ ಪಂಡಿತರ ಲೆಕ್ಕಾಚಾರವೂ ಅದೇ.

Asaduddin Owaisi declares he will support KCR

ಸೋಮವಾರ ತಮ್ಮ ಬುಲೆಟ್ ನಲ್ಲಿ ತೆರಳಿ ಕೆಸಿಆರ್ ಅವರನ್ನು ಭೇಟಿ ಮಾಡಿದ ಓವೈಸಿ ಬುಲೆಟ್ ಮೂಲಕ ಸುದ್ದಿಯಾಗಿದ್ದರು.

ಒಟ್ಟು 119 ಕ್ಷೇತ್ರಗಳ ವಿಧಾನಸಭೆಯಲ್ಲಿ ಮ್ಯಾಜಿಕ್ ನಂಬರ್ 60. ಅದನ್ನು ಟಿಆರ್ ಎಸ್ ಸುಲಭವಾಗಿ ಪಡೆಯಬಹುದು. ಅಕಸ್ಮಾತ್ ಪಡೆಯದಿದ್ದರೂ, ಟಿಆರ್ ಎಸ್ ಗೆ ಬೆಂಬಲ ನೀಡುವ ಸೂಚನೆಯನ್ನು ಈಗಾಗಲೇ ಬಿಜೆಪಿಯೇ ನೀಡಿದೆ. ಜೊತೆಗೆ ಓವೈಸಿ ಬೆಂಬಲವೂ ಸಿಕ್ಕಿದೆ.

ಪಂಚರಾಜ್ಯ ಚುನಾವಣೆ ಫಲಿತಾಂಶ LIVE: ವಿಜಯಮಾಲೆ ಯಾರ ಕೊರಳಿಗೆ? ಪಂಚರಾಜ್ಯ ಚುನಾವಣೆ ಫಲಿತಾಂಶ LIVE: ವಿಜಯಮಾಲೆ ಯಾರ ಕೊರಳಿಗೆ?

ತೆಲಂಗಾಣದಲ್ಲಿ ಹಾಲಿ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ವಿಧಾನಸಭೆಯನ್ನು ಅವಧಿಗೂ ಮುನ್ನವೇ ವಿಸರ್ಜಿಸಿದ್ದರಿಂದ ತೆಲಂಗಾಣದಲ್ಲಿ ಅವಧಿಗೂ ಮುನ್ನವೇ ಚುನಾವಣೆ ನಡೆದಿದೆ.

ಕಾಂಗ್ರೆಸ್ ಮತ್ತು ಟಿಡಿಪಿ ನೇತೃತ್ವದ ಮೈತ್ರಿ ಸರ್ಕಾರ ತೆಲಂಗಾಣದಲ್ಲಿ ಬಹುಮತ ಪಡೆಯಲು ವಿಫಲವಾಗಲಿದೆ ಎಂದು ಸಮೀಕ್ಷೆಗಳು ಹೇಳಿವೆ.

English summary
AIMIM leader Asaduddin Owaisi declares he will support Telangana Rashtra Samithi's K Chandrasekhar Rao.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X