ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ, ಶಾ, ಕಾಂಗ್ರೆಸ್ಸಿಗೆ ಸವಾಲೆಸೆದ ಅಸಾದುದ್ದಿನ್ ಓವೈಸಿ!

|
Google Oneindia Kannada News

ಹೈದರಾಬಾದ್, ಜೂನ್ 30: 'ತಾಕತ್ತಿದ್ದರೆ ಹೈದರಾಬಾದಿನಲ್ಲಿ ಚುನಾವಣೆಗೆ ನಿಂತು ಗೆಲ್ಲಿ' ಎಂದು ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಕಾಂಗ್ರೆಸ್ಸಿಗೆ ಎಐಎಂಐಎಂ(All India Majlis-e-Ittehadul Muslimeen) ಮುಖಂಡ ಅಸಾದುದ್ದಿನ್ ಓವೈಸಿ ಸವಾಲೆಸೆದಿದ್ದಾರೆ.

ಮುಸ್ಲಿಮರು ಮುಸ್ಲಿಮರಿಗೇ ಮತ ಹಾಕಿ: ಓವೈಸಿ ವಿವಾದಾತ್ಮಕ ಹೇಳಿಕೆ ಮುಸ್ಲಿಮರು ಮುಸ್ಲಿಮರಿಗೇ ಮತ ಹಾಕಿ: ಓವೈಸಿ ವಿವಾದಾತ್ಮಕ ಹೇಳಿಕೆ

'ಎಐಎಂಐಎಂ ವಿರುದ್ಧ ಹೈದರಾಬಾದಿನಲ್ಲಿ ಯಾರು ಬೇಕಾದರೂ ನಿಲ್ಲಲಿ, ಗೆಲ್ಲುವುದಕ್ಕೆ ಸಾಧ್ಯವಿಲ್ಲ! ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತು ಕಾಂಗ್ರೆಸ್ಸಿಗೆ ನಾನು ಸವಾಲೆಸೆಯುತ್ತೇನೆ. ಅಷ್ಟೇ ಅಲ್ಲ, ಅಕಸ್ಮಾತ್ ಬಿಜೆಪಿ, ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಇಲ್ಲಿ ಚುನಾವಣೆಗೆ ಸ್ಪರ್ಧಿಸಿದರೂ ಗೆಲ್ಲುವುದಕ್ಕೆ ಸಾಧ್ಯವಿಲ್ಲ' ಎಂದು ಓವೈಸಿ ಹೇಳಿದ್ದಾರೆ.

Asaduddin Owaisi challenges to Modi, Amit Shah and congress

ಮುಸ್ಲಿಂ ಪ್ರಾಬಲ್ಯವಿರುವ ಹೈದರಾಬಾದಿನ ಸಂಸದರಾಗಿರುವ ಓವೈಸಿ, 'ಮುಸ್ಲಿಮರು ಮುಸ್ಲಿಮರಿಗಷ್ಟೇ ಮತ ಹಾಕಿ. ನಮ್ಮನ್ನು 70 ವರ್ಷಗಳಿಂದ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ನಮ್ಮ ಬಾಯಿ ಮುಚ್ಚಿಸಲಾಗುತ್ತಿದೆ' ಎಂಬ ಹೇಳಿಕೆ ನೀಡಿದ್ದರು. ಜಾತ್ಯಾತೀತತೆಯ ಬಗ್ಗೆ ಮಾತನಾಡುವವರೇ ನಿಜವಾದ ಡಕಾಯಿತರು ಎಂಬ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.

English summary
AIMIM chief Asaduddin Owaisi said, 'I Challenge anyone to fight All India Majlis-e-Ittehadul Muslimeen(AIMIM) from Hyderabad. I challenge PM Modi or Amit Shah to contest a seat from here. I also challenge Congress. Even if both these parties contest together, they still wont be able to defeat us'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X