ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೀಟಿಗಾಗಿ ಸಿಟ್ಟು: ದೆಹಲಿ ಮೆಟ್ರೋದಲ್ಲಿ ಮಹಿಳಾ ಮಣಿಗಳ ಜಗಳ

|
Google Oneindia Kannada News

ನವದೆಹಲಿ ಆಗಸ್ಟ್ 18: ಪ್ರಯಾಣದ ವೇಳೆ ವಿಭಿನ್ನ ಅನುಭವಗಳು ಆಗುತ್ತವೆ. ಹಲವು ಜನ ಬಸ್‌ನಲ್ಲಿ ಪ್ರಯಾಣ ಮಾಡಲು ಸೀಟ್ ಮೇಲೆ ಕೈವಸ್ತ್ರ, ಬ್ಯಾಗ್ ಇಡುವ ಮೂಲಕ ಆ ಸೀಟ್‌ನ್ನು ಕಾಯ್ದಿರಿಸುತ್ತಾರೆ. ಆದರೆ ಮೆಟ್ರೋದಲ್ಲಿ ಈ ರೀತಿ ಸೀಟ್ ಮೇಲೆ ಕೈವಸ್ತ್ರ ಅಥವಾ ಬ್ಯಾಗ್‌ ಇಟ್ಟು ಸೀಟ್ ಕಾಯ್ದರಿಸುವ ವಿಚಾರಕ್ಕೆ ಇಬ್ಬರು ಮಹಿಳಾ ಪ್ರಯಾಣಿಕರು ಜಗಳವಾಡಿದ್ದಾರೆ. ಇವರಿಬ್ಬರ ಜಗಳವನ್ನು ಮೂರನೇ ಪ್ರಯಾಣಿಕರು ವಿಡಿಯೋ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ಘಟನೆ ದೆಹಲಿ ಮೆಟ್ರೋದೊಳಗೆ ನಡೆದಿದೆ. ಇಬ್ಬರು ಮಹಿಳೆಯರು ಜಗಳವಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಇಬ್ಬರೂ ಮಹಿಳಾ ಪ್ರಯಾಣಿಕರು ಸೀಟಿಗಾಗಿ ಸಿಟ್ಟು ಮಾಡಿಕೊಂಡು ಜಗಳವಾಡಿದ್ದಾರೆ. ಈ ವಿಡಿಯೊವನ್ನು ಇದುವರೆಗೆ Instagram ನಲ್ಲಿ 14 ದಶಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.

ಸೀಟಿಗಾಗಿ ಸಿಟ್ಟು ಮಾಡಿಕೊಂಡ ಪ್ರಯಾಣಿಕರು

ಸೀಟಿಗಾಗಿ ಸಿಟ್ಟು ಮಾಡಿಕೊಂಡ ಪ್ರಯಾಣಿಕರು

ಮೆಟ್ರೋ ಒಳಗೆ ಸೀಟು ಪಡೆಯುವುದೇ ದೊಡ್ಡ ಕೆಲಸ ಎನ್ನುವುದರಲ್ಲಿ ಎರಡು ಮಾತಿಲ್ಲ. ನಿಲ್ದಾಣದಲ್ಲಿ ಮೆಟ್ರೋ ಗೇಟ್ ತೆರೆದ ತಕ್ಷಣ ಪ್ರಯಾಣಿಕರ ಆಸನವನ್ನು ಪಡೆಯಲು ಪ್ರಯತ್ನಿಸುತ್ತಾರೆ. ವಿಶೇಷವಾಗಿ ಕಚೇರಿಗೆ ಅಥವಾ ಹೆಚ್ಚು ಜನಸಂದಣಿ ಇರುವ ವೇಳೆ ಈ ರೀತಿಯ ಘಟನೆಗಳು ಹೆಚ್ಚಾಗಿ ಸಂಭವಿಸುತ್ತವೆ. ಸಾಮಾಜಿಕ ಮಾಧ್ಯಮದಲ್ಲಿ ದೆಹಲಿ ಮೆಟ್ರೋದೊಳಗಿನ ವಿಭಿನ್ನವಾದ ಈ ದೃಶ್ಯವನ್ನು ಕಂಡು ಜನ ಆಶ್ಚರ್ಯಗೊಂಡಿದ್ದಾರೆ.

ಜಗಳ ಆಡಿದ್ದು ಯಾಕೆ?

ಜಗಳ ಆಡಿದ್ದು ಯಾಕೆ?

ಈ ವಿಡಿಯೊವನ್ನು ಪ್ರತಿಭಾ ಶರ್ಮಾ ಎಂಬ ಬಳಕೆದಾರರು Instagram ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಲ್ಲಿ ಸೀರೆಯನ್ನು ಧರಿಸಿದ ಮಹಿಳೆ ತನ್ನ ಚೀಲವನ್ನು ಖಾಲಿ ಸೀಟಿನ ಮೇಲೆ ಇರಿಸಿದ್ದಾರೆ. ಈ ಮೂಲಕ ಆ ಆಸನವನ್ನು ಕಾಯ್ದಿರಿಸಿದ್ದಾರೆ. ಜೊತೆಗೆ ಆ ಸೀಟಿನ ಮೇಲೆ ಯಾರೂ ಕೂರದಂತೆ ನಿರಾಕರಿಸಿದ್ದಾರೆ. ಈ ವೇಳೆ ಕುರ್ತಾ ಡ್ರೆಸ್ ಧರಿಸಿದ ಮಹಿಳೆ ಅಲ್ಲಿ ಕುಳಿತುಕೊಳ್ಳಲು ಸೀರೆ ತೊಟ್ಟ ಪ್ರಯಾಣಿಕರಿಗೆ ಬ್ಯಾಗ್‌ ಅನ್ನು ಎತ್ತುವಂತೆ ಕೇಳಿದರೆ, ಸೀಟಿನ ಮೇಲೆ ಕುಳಿತಿದ್ದ ಮಹಿಳಾ ಪ್ರಯಾಣಿಕರು ಅದನ್ನು ಮಾಡಲು ನಿರಾಕರಿಸಿದರು.

ಸೀರೆಗೂ ಕುರ್ತಾ ಡ್ರೆಸ್‌ಗೂ ಜಗಳ

ಸೀರೆಗೂ ಕುರ್ತಾ ಡ್ರೆಸ್‌ಗೂ ಜಗಳ

ಸೀರೆ ತೊಟ್ಟ ಮಹಿಳೆ ಬ್ಯಾಗ್ ತೆಗೆಯಲು ನಿರಾಕರಿಸಿದಾಗ ಕುರ್ತಾ ತೊಟ್ಟ ಮಹಿಳೆ ಆಕೆಯ ಹತ್ತಿರದ ಸಣ್ಣ ಸ್ಥಳದಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತಾರೆ. ಆದರೂ ಅವರು ಆಸನದಿಂದ ಸ್ವಲ್ಪವೂ ಸರಿಯುವುದಿಲ್ಲ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ವಿಡಿಯೊದ ಶೀರ್ಷಿಕೆಯಲ್ಲಿ ಹೀಗೆ ಬರೆಯಲಾಗಿದೆ - 'ಈ ಮೇಡಮ್‌ಗಳಿಗೆ ತಮ್ಮ ಬ್ಯಾಗ್‌ಗಳನ್ನು ಮೆಟ್ರೋದಲ್ಲಿ ಇರಿಸಿಕೊಳ್ಳಲು ಆಸನದ ಅಗತ್ಯವಿದೆ' ಎಂದಿದೆ.

ಬರ್ಗರ್‌ ತಿನ್ನುತ್ತಾ ಇಬ್ಬರ ಜಗಳ ಆನಂದಿಸಿದ ಯುವತಿ

ಈ ವಿಡಿಯೊವನ್ನು ನೋಡಿದ ನಂತರ ನೆಟ್ಟಿಗರು ಮಹಿಳೆಯ ವರ್ತನೆಯನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ. ಮತ್ತು ಕಾಮೆಂಟ್ ವಿಭಾಗದಲ್ಲಿ ಮಹಿಳೆಯನ್ನು ತೀವ್ರವಾಗಿ ಸ್ಲ್ಯಾಮಿಂಗ್ ಮಾಡಿದ್ದಾರೆ. ಈ ಮಧ್ಯೆ, ಒಬ್ಬ ಬಳಕೆದಾರನು ಪಕ್ಕದಲ್ಲಿ ಕುಳಿತಿದ್ದ ಇನ್ನೊಬ್ಬ ಮಹಿಳೆಯತ್ತ ಜನರ ಗಮನ ಸೆಳೆದರು. ಇಬ್ಬರ ಜಗಳದ ನಡುವೆ ಬರ್ಗರ್ ತಿನ್ನುತ್ತಾ ಯುವತಿಯೊಬ್ಬಳು ಮೋಜು ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ. ಇದನ್ನು ನೋಡಿದ ಜನ ಹೊಟ್ಟೆ ಹುಣ್ಣಾಗುವಷ್ಟು ನಗಾಡಿದ್ದಾರೆ.

English summary
A video of women fighting over a seat in the Delhi Metro has gone viral. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X