ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಿ ನಾಪತ್ತೆ ಎಂದು ಪತ್ನಿಯ ದೂರು : ಆಸ್ಪತ್ರೆ ಹೇಳೋದೆ ಬೇರೆ

|
Google Oneindia Kannada News

ಹೈದರಾಬಾದ್, ಮೇ 22: ಇಲ್ಲಿನ ಗಾಂಧಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜಿನಲ್ಲಿ 42 ವರ್ಷದ ವ್ಯಕ್ತಿ ಕೊವಿಡ್ 19 ರೋಗಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ.

Recommended Video

ವರ್ಕ್ ಫ್ರಂ ಹೋಂ‌ನಿಂದ ಆಗ್ತಿರೋ ಸಮಸ್ಯೆಗಳು ಅಷ್ಟಿಷ್ಟಲ್ಲ... | Oneindia Kannada

ಅವರು ಆಸ್ಪತ್ರೆಗೆ ದಾಖಲಾದ ಬಳಿಕ ಕೊರೊನಾ ವೈರಸ್ ಇರುವುದು ದೃಢಪಟ್ಟಿತ್ತು. ಆಸ್ಪತ್ರೆ ಹಾಗೂ ಕುಟುಂಬದವರ ನಡುವೆ ಮಾತಿನ ಚಕಮಕಿಯೂ ನಡೆದಿದೆ.

ದಾಂಡೇಲಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ವೃದ್ಧೆ ಆತ್ಮಹತ್ಯೆದಾಂಡೇಲಿ ಆಸ್ಪತ್ರೆಯಲ್ಲಿ ಕ್ವಾರಂಟೈನ್ ನಲ್ಲಿದ್ದ ವೃದ್ಧೆ ಆತ್ಮಹತ್ಯೆ

ಅದಕ್ಕೂ ಮುನ್ನ ನಡೆದ ಘಟನೆ ಏನು?
ಕಳೆದ ವಾರ ಮೇ 16 ರಂದು ಮಹಿಳೆ ಹಾಗೂ ಅವರು ಇಬ್ಬರು ಮಕ್ಕಳನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಇದೇ ಆಸ್ಪತ್ರೆಯಲ್ಲಿ ಪತಿಗೂ ಚಿಕಿತ್ಸೆ ನೀಡಲಾಗಿತ್ತು. ಅವರ ಪತಿಯ ಬಗ್ಗೆ ವಿಚಾರಿಸಿದಾಗ ವೆಂಟಿಲೇಟರ್‌ನಲ್ಲಿ ಇಟ್ಟಿರುವುದಾಗಿ ಹೇಳಿದ್ದರು.

Andhra Woman Alleges Husband Missing Hospital Says He Died Of COVID-19

ಸ್ವಲ್ಪ ಸಮಯ ಕಳೆದ ಬಳಿಕ ಮಹಿಳೆ ಏನೇ ಪ್ರಶ್ನೆ ಮಾಡಿದರೂ ಆಸ್ಪತ್ರೆ ಉತ್ತರ ನೀಡಲು ನಿರಾಕರಿಸುತ್ತಿತ್ತು. ಹಾಗಾಗಿ ಆಕೆ ಭಯಗೊಂಡು ಪತಿ ನಾಪತ್ತೆಯಾಗಿದ್ದಾಗಿ ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.

ತೆಲಂಗಾಣ ಸಚಿವ ಕೆಟಿ ರಾಮರಾಮ್ ಅವರಿಗೆ ಟ್ವಿಟ್ಟರ್‌ನಲ್ಲಿ ಪತ್ರ ಬರೆದಿದ್ದರು.' ನನ್ನ ಹೆಸರು ಮಾಧವಿ, ಪತಿಯ ಹೆಸರು ಮಧುಸೂದನ್, ಇಬ್ಬರು ಪುತ್ರಿಯರಿದ್ದಾರೆ. ನಮ್ಮ ಇಡೀ ಕುಟುಂಬ ಕೊರೊನಾದಿಂದ ಬಳಲುತ್ತಿದೆ. ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದೇವೆ ನಾವೆಲ್ಲರೂ ಮನೆಗೆ ಮರಳಿದ್ದೇವೆ ಆದರೆ ನನ್ನ ಪತಿ ಮಾತ್ರ ಕಾಣೆಯಾಗಿದ್ದಾರೆ' ಎಂದು ಬರೆದುಕೊಂಡಿದ್ದರು.

ಆಸ್ಪತ್ರೆಯಲ್ಲಿ ಪತಿ ಬಗ್ಗೆ ವಿಚಾರಿಸಿದರೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದಿದ್ದರು. ಎರಡನೇ ಟ್ವೀಟ್‌ನಲ್ಲಿ ಜಿಎಚ್‌ಎಂಸಿ ಆಸ್ಪತ್ರೆಯಲ್ಲಿ ಏಪ್ರಿಲ್ 30ರಂದು ಪತಿಯನ್ನು ದಾಖಲಿಸಲಾಗಿತ್ತು. ಆದರೆ ಮೇ 1ರಂದು ಅವರು ತೀರಿಹೋಗಿದ್ದಾರೆ. ಅಂತ್ಯಕ್ರಿಯೆ ನಡೆಸುವ ಮುನ್ನ ನಮಗ್ಯಾರಿಗೂ ವಿಷಯ ತಿಳಿಸಲೇ ಇಲ್ಲ ಎಂದು ಬರೆದಿದ್ದಾರೆ.

ಅಂತ್ಯಕ್ರಿಯೆ ನಡೆದಿರುವುದಕ್ಕೆ ಅಥವಾ ನನ್ನ ಪತಿ ಸತ್ತಿರುವುದಕ್ಕೆ ಸಾಕ್ಷಿ ಕೊಡಿ, ಹೀಗೆಯೇ ಸಾವಿರಾರು ಕುಟುಂಬದ ಸದಸ್ಯರು, ಕ್ವಾರಂಟೈನ್ ಅಥವಾ ಆಸ್ಪತ್ರೆಯಲ್ಲಿ ಕುಟುಂಬದವರನ್ನು ನೋಡದೆ ಒಬ್ಬರೇ ಇದ್ದಾರೆ. ಕುಟುಂಬದವರಿಗೆ ಇಂತಹ ಘಟನೆಗಳು ಆತಂಕವನ್ನುಂಟು ಮಾಡುತ್ತವೆ.

English summary
In a bizarre turn of events, the body of a 42-year-old man who died at Hyderabad's Gandhi Hospital and Medical College (GHMC), where he had been admitted after testing positive for the COVID-19 virus, has led to a dispute between his family and hospital authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X