ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಾನಾಯ್ಡುಗೆ ತೆಲಂಗಾಣ-ಆಂಧ್ರದಿಂದ ಐಕ್ಯತಾ ಶ್ರದ್ಧಾಂಜಲಿ

By Mahesh
|
Google Oneindia Kannada News

ಹೈದರಾಬಾದ್, ಫೆ.19: ಭಾರತೀಯ ಚಿತ್ರರಂಗದ ಅಗ್ರಗಣ್ಯ ನಿರ್ಮಾಪಕ ದಗ್ಗುಬಾಟಿ ರಾಮಾನಾಯ್ಡು ಅವರ ನಿಧನಕ್ಕೆ ಇಡೀ ಆಂಧ್ರಪ್ರದೇಶವೇ ಕಂಬನಿ ಮಿಡಿದಿದೆ. ಸಕಲ ಸರ್ಕಾರಿ ಗೌರವ ಮರ್ಯಾದೆಗಳೊಂದಿಗೆ ರಾಮಾನಾಯ್ಡು ಅವರ ಅಂತ್ಯಕ್ರಿಯೆ ನಡೆಸಲು ತೆಲಂಗಾಣ ಸರ್ಕಾರಕ್ಕೆ ಆಂಧ್ರಪ್ರದೇಶ ಸರ್ಕಾರವೂ ನೆರವಾಗಿದೆ.

ಸಾವಲ್ಲಿ ಎಲ್ಲರೂ ಒಂದಾದರೂ ಎಂಬ ಮಾತಿದೆ. ದಾಯಾದಿ ಮತ್ಸರಗಳನ್ನು ಮರೆತು ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಹಾಗೂ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಅವರು ಸೇರಿದಂತೆ ಅನೇಕ ರಾಜಕೀಯ ಮುಖಂಡರು, ಸಿನಿಮಾ ರಂಗದ ಗಣ್ಯರು ತಮ್ಮ ಕಂಬನಿ ಮಿಡಿದು ಅಂತಿಮ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. [ನಿರ್ಮಾಪಕ ರಾಮಾನಾಯ್ಡು ವಿಧಿವಶ]

ದಗ್ಗುಬಾಟಿ ರಾಮಾನಾಯ್ಡು ಅವರ ಮಾಜಿ ಅಳಿಯ ಅಕ್ಕಿನೇನಿ ನಾಗಾರ್ಜುನ, ಮೊಮ್ಮಗ ಅಕ್ಕಿನೇನಿ ನಾಗಚೈತನ್ಯ,ರಾಣಾ ದಗ್ಗುಬಾಟಿ ಮಗ ವಿಕ್ಟರಿ ವೆಂಕಟೇಶ್ ಎಲ್ಲರೂ ಕಂಬನಿ ಮಿಡಿಯುವುದನ್ನು ಕಂಡು ತೆಲುಗು ಸಿನಿರಸಿಕರು ತಾವೂ ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಪುಷ್ಪಕ ವಿಮಾನ ಚಿತ್ರ ನೀಡಿದ ಸಿಂಗೀತಂ ಶ್ರೀನಿವಾಸ್ ಅವರು ರಾಮಾನಾಯ್ಡು ಅವರನ್ನು 'ಚಿತ್ರರಂಗದ ಮಹಾವೃಕ್ಷ' ಎಂದು ಬಣ್ಣಿಸಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ರಾಮಾನಾಯ್ಡು ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೇ ಹೈದರಾಬಾದಿನ ನಿವಾಸದಲ್ಲಿ ನಿಧನರಾಗಿದ್ದರು. ಅಂತಿಮ ಯಾತ್ರೆ ನಂತರ ಗುರುವಾರ ರಾಮಾನಾಯ್ಡು ಸ್ಟುಡಿಯೋದಲ್ಲಿ ಅವರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ನಟ ರಾಣಾ ದಗ್ಗುಬಾಟಿ ರೋದನ

ನಟ ರಾಣಾ ದಗ್ಗುಬಾಟಿ ರೋದನ

ರಾಮಾನಾಯ್ಡು ಅವರ ಮೊಮ್ಮಗ ನಟ ರಾಣಾ ದಗ್ಗುಬಾಟಿ ಕಂಬನಿಗೆ ಚಿರಂಜೀವಿ ಅವರ ಪುತ್ರ ನಟ ರಾಮ್ ಚರಣ್ ತೇಜ ಹೆಗಲು ಕೊಟ್ಟ ದೃಶ್ಯ ನೆರದಿದ್ದವರ ಕಣ್ಣುಗಳನ್ನು ತೇವಗೊಳಿಸಿತು.

ಶ್ರದ್ಧಾಂಜಲಿ ಸಲ್ಲಿಸಲು ಬಂದ ತೆಲಂಗಾಣ ಸಿಎಂ

ಶ್ರದ್ಧಾಂಜಲಿ ಸಲ್ಲಿಸಲು ಬಂದ ತೆಲಂಗಾಣ ಸಿಎಂ

ಹೈದರಾಬಾದಿನ ರಾಮಾನಾಯ್ಡು ಸ್ಟುಡಿಯೋದಲ್ಲಿ ರಾಮಾನಾಯ್ಡು ಅವರ ಅಂತಿಮ ವಿಧಿವಿಧಾನ ನಡೆಸಲಾಯಿತು. ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಅವರು ಶ್ರದ್ಧಾಂಜಲಿ.

ತೆಲುಗು ಚಿತ್ರನಟ ಪವನ್ ಕಲ್ಯಾಣ್

ತೆಲುಗು ಚಿತ್ರನಟ ಪವನ್ ಕಲ್ಯಾಣ್

ತೆಲುಗು ಚಿತ್ರನಟ ಪವನ್ ಕಲ್ಯಾಣ್ ಅವರು ರಾಮಾನಾಯ್ಡು ಸ್ಟುಡಿಯೋಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದರು.

ವೈಸ್ಸಾರ್ ಪಕ್ಷದ ಜಗನ್ ಮೋಹನ್ ರೆಡ್ಡಿ

ವೈಸ್ಸಾರ್ ಪಕ್ಷದ ಜಗನ್ ಮೋಹನ್ ರೆಡ್ಡಿ

ವೈಸ್ಸಾರ್ ಪಕ್ಷದ ಜಗನ್ ಮೋಹನ್ ರೆಡ್ಡಿ ಅವರನ್ನು ಬರಮಾಡಿಕೊಂಡ ವಿಕ್ಟರಿ ವೆಂಕಟೇಶ್.

ಟಿಡಿಪಿ ಚಂದ್ರಬಾಬು ನಾಯ್ಡು

ಟಿಡಿಪಿ ಚಂದ್ರಬಾಬು ನಾಯ್ಡು

ಅಂತಿಮ ನಮನ ಸಲ್ಲಿಸಿದ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು

ಜಗನ್ ಮೋಹನ್ ರೆಡ್ಡಿ ಅಂತಿಮ ನಮನ

ಜಗನ್ ಮೋಹನ್ ರೆಡ್ಡಿ ಅಂತಿಮ ನಮನ

ಜಗನ್ ಮೋಹನ್ ರೆಡ್ಡಿ ಅಂತಿಮ ನಮನ ಸಲ್ಲಿಸಿ ದಗ್ಗುಬಾಟಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಸ್ಟುಡಿಯೋಗೆ ರಾಮೋಜಿ ರಾವ್ ಆಗಮನ

ಸ್ಟುಡಿಯೋಗೆ ರಾಮೋಜಿ ರಾವ್ ಆಗಮನ

ಸ್ಟುಡಿಯೋಗೆ ಆಗಮಿಸಿದ ರಾಮೋಜಿ ರಾವ್ ಅವರು ರಾಮಾನಾಯ್ಡು ಅವರ ಪಾರ್ಥೀವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದರು.

ಜಯಪ್ರಕಾಶ್ ಅವರಿಂದ ನಮನ

ಜಯಪ್ರಕಾಶ್ ಅವರಿಂದ ನಮನ

ಹೈದರಾಬಾದಿನಲ್ಲಿ ಗುರುವಾರ ವಿಶೇಷವಾಗಿ ಸಿದ್ಧಪಡಿಸಲಾಗಿರುವ ವಾಹನದಲ್ಲಿ ರಾಮಾನಾಯ್ಡು ಅವರ ಪಾರ್ಥೀವ ಶರೀರದ ಯಾತ್ರೆ ನಡೆಸಲಾಯಿತು. ನಂತರ ಅಂತಿಮ ವಿಧಿವಿಧಾನಗಳನ್ನು ನಡೆಸಲಾಯಿತು.

ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರಿಂದ ನಮನ

ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ ಅವರಿಂದ ನಮನ

ತೆಲುಗು ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ರಾಮಾನಾಯ್ಡು ಅವರಿಗೆ ತೆಲಂಗಾಣ ಸರ್ಕಾರದ ವತಿಯಿಂದ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು

ಚಿತ್ರನಟ ಕೃಷ್ಣಂ ರಾಜು ಅವರಿಂದ ನಮನ

ಚಿತ್ರನಟ ಕೃಷ್ಣಂ ರಾಜು ಅವರಿಂದ ನಮನ

ತೆಲುಗು ಚಿತ್ರರಂಗದ ರೆಬೆಲ್ ಸ್ಟಾರ್ ಕೃಷ್ಣಂರಾಜು ಅವರು ರಾಮಾನಾಯ್ಡು ಸ್ಟುಡಿಯೋಗೆ ಆಗಮಿಸಿ ರಾಮಾನಾಯ್ಡು ಅವರ ಪಾರ್ಥೀವ ಶರೀರದ ದರ್ಶನ ಪಡೆದರು

ದಗ್ಗುಬಾಟಿ ಕುಟುಂಬದ ಸದಸ್ಯರು

ದಗ್ಗುಬಾಟಿ ಕುಟುಂಬದ ಸದಸ್ಯರು

ದಗ್ಗುಬಾಟಿ ಕುಟುಂಬದ ಸದಸ್ಯರು: ರಾಮಾನಾಯ್ಡು ಅವರ ಪುತ್ರರಾದ ಸುರೇಶ್ ಬಾಬು ಮತ್ತು ವೆಂಕಟೇಶ್ ಅವರು ಸೇರಿದಂತೆ ವಿವಿಧ ಗಣ್ಯರು ಅಂತಿಮ ವಿಧಿವಿಧಾನದಲ್ಲಿ ಪಾಲ್ಗೊಂಡಿದ್ದರು.

English summary
Andhra Pradesh and Telangana Governor E.S.L. Narasimhan and the chief ministers of the two states have condoled the death of well-known filmmaker Daggubati Ramanaidu.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X