• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸೆಲ್ಫಿ ತೆಗೆದುಕೊಳ್ಳಲು ಹೋಗಿ ಜಲಪಾತದಲ್ಲಿ ಜಾರಿದ ಮಹಿಳೆ!

|

ಹೈದ್ರಾಬಾದ್, ಸಪ್ಟೆಂಬರ್,14: ಆಂಧ್ರ ಪ್ರದೇಶ ಮೂಲದ ಯುವತಿಯೊಬ್ಬರು ತಮ್ಮ ಭಾವಿ ಪತಿಯೊಂದಿಗೆ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಹೋಗಿ ಜಲಪಾತದಲ್ಲಿ ಬಿದ್ದು ಪ್ರಾಣ ಬಿಟ್ಟಿರುವ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ.

ಅಟ್ಲಾಂಟಾದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ಪೊಲವರಪು ಕಮಲ ಎಂಬ ಯುವತಿ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ ಬಾಲ್ದ್ ರಿವರ್ ಫಾಲ್ ಗೆ ತೆರಳಿದ್ದಾರೆ. ಈ ವೇಳೆ ವಾಟರ್ ಫಾಲ್ ಬಳಿ ಸೆಲ್ಫಿ ಕ್ಲಿಕಿಸಿಕೊಳ್ಳಲು ತೆರಳಿದ ದಂಪತಿ ಕಾಲುಜಾರಿ ಬಿದ್ದಿದ್ದಾರೆ.

ಹೋಂ ಕ್ವಾರಂಟೇನ್ ಗಳಿಂದ ಗಂಟೆಗೊಂದು ಸೆಲ್ಫೀ; ರಾಮನಗರ ಡಿಸಿ ಸೂಚನೆ

ಇನ್ನು, ರಕ್ಷಣಾ ಕಾರ್ಯಾಚರಣೆ ನಡೆಸಿ ಪತಿಯನ್ನು ಸುರಕ್ಷಿತವಾಗಿ ಮೇಲೆ ಕರೆದುಕೊಂಡು ಬರಲಾಗಿದೆ. ಆದರೆ ಪೊಲವರಪು ಕಮಲ ಅವರ ಪ್ರಾಣ ಉಳಿಸುವುದಕ್ಕೆ ಸಾಧ್ಯವಾಗಿಲ್ಲ ಎಂದು ರಕ್ಷಣಾ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ಆಂಧ್ರ ಪ್ರದೇಶ ಮೂಲದ ಪೊಲವರಪು ಕಮಲ:

ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಗುದ್ಲಾವಲೇರು ಮೂಲದ ಪೊಲವರಪು ಕಮಲ ಅವರು ತಮ್ಮ ಪದವಿ ವಿದ್ಯಾಭ್ಯಾಸವನ್ನು ಮುಗಿಸಿ ಅಮೆರಿಕಾಗೆ ತೆರಳಿದ್ದರು. ಅಮೆರಿಕಾದ ಸಾಫ್ಟವೇರ್ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. "ಇಂಜಿನಿಯರಿಂಗ್ ನಲ್ಲಿ ಪದವಿ ಪಡೆದುಕೊಂಡಿದ್ದ ಮಗಳು ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾಗೆ ತೆರಳಿದ್ದರು. ವಿದ್ಯಾಭ್ಯಾಸ ಪೂರ್ಣಗೊಳಿಸಿದ ಮಗಳಿಗೆ ಇತ್ತೀಚಿಗೆ ಉದ್ಯೋಗವೂ ಸಿಕ್ಕಿತ್ತು" ಎಂದು ಪೊಲವರಪು ಕಮಲ ಅವರ ತಾಯಿ ಹೇಳಿದ್ದಾರೆ. ಪೊಲವರಪು ಕಮಲ ಅವರ ಮೃತದೇಹವನ್ನು ಸ್ವದೇಶಕ್ಕೆ ತೆಗೆದುಕೊಂಡು ಬರುವುದಕ್ಕೆ ಆಂಧ್ರ ಪ್ರದೇಶದ "ದಿ ತೆಲಗು ಅಸೋಸಿಯೇಷನ್" ಸಹಾಯ ಮಾಡುವುದಕ್ಕೆ ಮುಂದೆ ಬಂದಿದೆ.

English summary
Andhra Pradesh Woman Dies While Taking Selfie At Waterfall In America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X