ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದ ಅಭಿವೃದ್ಧಿಗೆ ನಿಜಕ್ಕೂ ಕೇಂದ್ರ ಕೊಟ್ಟ ಅನುದಾನವೆಷ್ಟು?: ಬಿಜೆಪಿ ನೀಡಿದ ಲೆಕ್ಕ

|
Google Oneindia Kannada News

ಹೈದರಾಬಾದ್, ಜುಲೈ 21: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವ ಮೂಲಕ ಅದರ ಅಭಿವೃದ್ಧಿಗೆ ವಿಶೇಷ ಅನುದಾನಗಳನ್ನು ಬಿಡುಗಡೆ ಮಾಡಬೇಕು ಎನ್ನುವುದು ಆಡಳಿತಾರೂಢ ಟಿಡಿಪಿಯ ಒತ್ತಾಯವಾಗಿದೆ.

ಅಧಿಕಾರಕ್ಕೆ ಬಂದರೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕೊಡುವುದಾಗಿ ಚುನಾವಣೆಗೂ ಮುನ್ನ ನೀಡಿದ್ದ ಭರವಸೆಯನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ ಎಂದು ಟಿಡಿಪಿ ಆರೋಪಿಸಿದೆ.

ಈ ಕಾರಣಕ್ಕಾಗಿಯೇ ಎನ್‌ಡಿಎ ಜತೆಗಿನ ಮೈತ್ರಿಕೂಟದಿಂದ ಹೊರಬಂದ ಟಿಡಿಪಿ ಅವಿಶ್ವಾಸ ನಿರ್ಣಯದ ನಡೆಯನ್ನೂ ತೆಗೆದುಕೊಂಡಿತ್ತು.

ನಾಯ್ಡು-ಮೋದಿ, ವಿಚ್ಛೇದನ ಮತ್ತು ಅವಕಾಶವಾದೀ ರಾಜಕಾರಣ..!ನಾಯ್ಡು-ಮೋದಿ, ವಿಚ್ಛೇದನ ಮತ್ತು ಅವಕಾಶವಾದೀ ರಾಜಕಾರಣ..!

ಆದರೆ, ಯುಪಿಎ ಕಾಲಾವಧಿಯಲ್ಲಿ ಎರಡು ರಾಜ್ಯಗಳಾಗಿ ಪ್ರತ್ಯೇಕವಾದ ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡದೆ ಇದ್ದರೂ, ಅನುದಾನಗಳಿಗೆ ಕೊರತೆ ಉಂಟಾಗಿಲ್ಲ ಎಂದು ಬಿಜೆಪಿ ಪ್ರತಿಪಾದಿಸಿದೆ.

ಆಂಧ್ರಪ್ರದೇಶಕ್ಕೆ ನೀಡಿದ ಭರವಸೆಗಳು ಎಂಬ ಶೀರ್ಷಿಕೆ ಹಾಗೂ ಅಂಕಿ ಅಂಶಗಳು ಸುಳ್ಳು ಹೇಳುವುದಿಲ್ಲ ಎಂಬ ಅಡಿ ಶೀರ್ಷಿಕೆಯಲ್ಲಿ, ಕೇಂದ್ರ ಸರ್ಕಾರವು ಆಂಧ್ರದ ಅಭಿವೃದ್ಧಿ ಯೋಜನೆಗಳಿಗೆ ಎಷ್ಟು ಹಣ ನೀಡಿದೆ ಮತ್ತು ವಿವಿಧ ಮೂಲಗಳಿಗೆ ಸಾಲ ಹಾಗೂ ಅನುದಾನದ ರೂಪದಲ್ಲಿ ಬಿಡುಗಡೆಯಾಗಬೇಕಿರುವ ಹಣ ಎಷ್ಟು ಎಂದು ಆಂಧ್ರಪ್ರದೇಶ ಬಿಜೆಪಿ ಘಟಕ ನೀಡಿರುವ ಮಾಹಿತಿ ಇಲ್ಲಿದೆ.

ಶೇ 88ರಷ್ಟು ಬಳಕೆಯೇ ಆಗಿಲ್ಲ

ಶೇ 88ರಷ್ಟು ಬಳಕೆಯೇ ಆಗಿಲ್ಲ

ಏಳು ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ 2014-15ರಿಂದ ಅಗತ್ಯವಿರುವ ವಾರ್ಷಿಕ ಅನುದಾನ 350 ಕೋಟಿ ರೂ. ಇದುವರೆಗೂ ಒಟ್ಟು ಬಿಡುಗಡೆಯಾಗಿರುವ ಅನುದಾನ 1,050 ಕೋಟಿ ರೂ. 2017-18ನೇ ಸಾಲಿನಲ್ಲಿ ಬಾಕಿ ಉಳಿದಿರುವುದು 350 ಕೋಟಿ ರೂ.

ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದಲ್ಲಿ ಶೇ 88ರಷ್ಟು ಮೊತ್ತ ಬಳಕೆಯಾಗದೆ ಹಾಗೆಯೇ ಉಳಿದಿದೆ.

ಬಿಜೆಪಿ-ಟಿಡಿಪಿ ಬಿಕ್ಕಟ್ಟು: ಚಂದ್ರಬಾಬು ನಾಯ್ಡು ಹೊಸ ವರಸೆಬಿಜೆಪಿ-ಟಿಡಿಪಿ ಬಿಕ್ಕಟ್ಟು: ಚಂದ್ರಬಾಬು ನಾಯ್ಡು ಹೊಸ ವರಸೆ

ಪುನರ್‌ಸಂಘಟನೆ 2014 ಕಾಯ್ದೆಯಡಿ ಅನುದಾನ

ಪುನರ್‌ಸಂಘಟನೆ 2014 ಕಾಯ್ದೆಯಡಿ ಅನುದಾನ

ಆಂಧ್ರಪ್ರದೇಶ ಪುನರ್‌ಸಂಘಟನೆ 2014, ಕಾಯ್ದೆಯ ಅಡಿಯಲ್ಲಿ ಕೇಂದ್ರ ಸರ್ಕಾರ ನೀಡಿರುವ ಅನುದಾನಗಳ ಮಾಹಿತಿಯನ್ನು ಬಿಜೆಪಿ ಮುಂದಿಟ್ಟಿದೆ.

2014-15ರ ಸಂಪನ್ಮೂಲ ಅಂತರ: 3,979.50 ಕೋಟಿ ರೂ.
ಆದಾಯ ಕೊರತೆ ಅನುದಾನ: 27,138.83 ಕೋಟಿ ರೂ.
ಏಳು ಹಿಂದುಳಿದ ರಾಜ್ಯಗಳ ಅಭಿವೃದ್ಧಿಗೆ ಅನುದಾನ: 1,050 ಕೋಟಿ ರೂ.
ಹೊರ ರಾಜಧಾನಿ ನಗರಕ್ಕೆ: 2,500 ಕೋಟಿ ರೂ.
ಪೊಲಾವರಂ ಯೋಜನೆ: 5,364 ಕೋಟಿ ರೂ.
ಕಂಪೆನಿ ಆಕ್ಟ್‌ನ 13ನೇ ನಿಯಮದಡಿ ಸಂಸ್ಥೆಗಳು ಹಾಗೂ ಯೋಜನೆಗಳಿಗೆ: 736.14 ಕೋಟಿ ರೂ.
ವಿಶೇಷ ನೆರವು ಯೋಜನೆ: ಬಾಹ್ಯ ಅನುದಾನಿತ ಯೋಜನೆಗಳು (ಸಹಿ ಹಾಕಿರುವುದು): 8,991.38 ಕೋಟಿ ರೂ.
ವಿಶೇಷ ನೆರವು ಯೋಜನೆ: ಬಾಹ್ಯ ಅನುದಾನಿತ ಯೋಜನೆಗಳು (ಪ್ರಗತಿಯಲ್ಲಿರುವುದು): 17,236 ಕೋಟಿ ರೂ.

ಇಎಪಿ ಅನುದಾನಿತ ಯೋಜನೆಗಳು

ಇಎಪಿ ಅನುದಾನಿತ ಯೋಜನೆಗಳು

ಬಾಹ್ಯ ಅನುದಾನಿತ ಯೋಜನೆಗಳಲ್ಲಿ ಸಹಿ ಹಾಕಿರುವ ಮತ್ತು ಹಾಕಬೇಕಿರುವ ಸಾಲ ಸೌಲಭ್ಯಗಳ ಕುರಿತ ಮಾಹಿತಿ ಇದು.

* ಆಂಧ್ರಪ್ರದೇಶ ಸಮಗ್ರ ನೀರಾವರಿ ಮತ್ತು ಕೃಷಿ ಪರಿವರ್ತನಾ ಯೋಜನೆ, ವಿಶ್ವಬ್ಯಾಂಕ್ ಮೂಲಕ: 186.67 ಮಿಲಿಯನ್ ಡಾಲರ್ ಸಾಲ
* ಅಮರಾವತಿ ಸುಸ್ಥಿರ ರಾಜಧಾನಿ ನಗರ ಅಭಿವೃದ್ಧಿ ಯೋಜನೆಗೆ, ವಿಶ್ವಬ್ಯಾಂಕ್ ಮತ್ತು ಎಐಐಬಿ ನೆರವು: 300+200 ಮಿಲಿಯನ್ ಡಾಲರ್ ಸಾಲ
* ಆಂಧ್ರಪ್ರದೇಶ ರಸ್ತೆ ಮತ್ತು ಸೇತುವೆ ಮರುನಿರ್ಮಾಣ ಯೋಜನೆ, ಎಐಐಬಿ: 340 ಮಿಲಿಯನ್ ಡಾಲರ್ ಸಾಲ
* ಆಂಧ್ರಪ್ರದೇಶ ಮಂಡಲ ಸಂಪರ್ಕ ಮತ್ತು ಗ್ರಾಮೀಣ ಸಂಪರ್ಕ ಸುಧಾರಣೆ ಯೋಜನೆ, ಎಐಐಬಿ: 280 ಮಿಲಿಯನ್ ಡಾಲರ್ ಸಾಲ
* ಆಂಧ್ರಪ್ರದೇಶ ನಗರ ನೀರು ಸರಬರಾಜು ಮತ್ತು ತ್ಯಾಜ್ಯ ನಿರ್ವಹಣೆ ಸುಧಾರಣೆ, ಎಐಐಬಿ: 405 ಮಿಲಿಯನ್ ಡಾಲರ್ ಸಾಲ
* ಆಂಧ್ರಪ್ರದೇಶ ಗ್ರಾಮೀಣ ನೀರು ಪೂರೈಕೆ ಯೋಜನೆ, ಎಐಐಬಿ: 485 ಮಿಲಿಯನ್ ಡಾಲರ್ ಸಾಲ
* ಸಂಪರ್ಕರಹಿತ ಊರುಗಳಿಗೆ ಗ್ರಾಮೀಣ ರಸ್ತೆ ಸಂಪರ್ಕ ಯೋಜನೆ, ಎಐಐಬಿ: 455 ಮಿಲಿಯನ್ ಡಾಲರ್ ಸಾಲ

ಹೊಸ ರಾಜಧಾನಿ ನಗರಿಗೆ

ಹೊಸ ರಾಜಧಾನಿ ನಗರಿಗೆ

ಆಂಧ್ರಪ್ರದೇಶ ರಾಜಧಾನಿ ಅಮರಾವತಿ ನಗರ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು 3,500 ಕೋಟಿ ನೆರವಿನ ಅನುಮೋದನೆ ನೀಡಿದೆ.

ಇದಕ್ಕೆ ಈಗಾಗಲೇ 2,500 ಕೋಟಿ ಬಿಡುಗಡೆ ಮಾಡಲಾಗಿದ್ದು, ಇನ್ನು 1,000 ಕೋಟಿ ಬಾಕಿ ಇದೆ. ಬಿಡುಗಡೆಯಾದ 2,500 ಕೋಟಿಯಲ್ಲಿ 1,000 ಹಣವನ್ನು ಗೃಹ ಹಾಗೂ ನಗರ ವ್ಯವಹಾರಗಳ ಸಚಿವಾಲಯ ನೀಡಿದೆ.

ಮುಂದಿನ ಹಂತದಲ್ಲಿ 333.33 ಕೋಟಿ ಬಿಡುಗಡೆ ಬಾಕಿ ಉಳಿದಿದ್ದು, ರಾಜ್ಯವು ವೆಚ್ಚದ ಶೇ 8ರಷ್ಟು ಮಾತ್ರ ಬಳಕೆ ಮಾಡಿಕೊಂಡಿದೆ. ಹೀಗಾಗಿ ಈ ವಿಚಾರವನ್ನು ನೀತಿ ಆಯೋಗದ ಪರಿಶೀಲನೆಗೆ ವಹಿಸಲಾಗಿದೆ.

ಸಂಪನ್ಮೂಲದ ಕೊರತೆ ತುಂಬಲು ಹಣ

ಸಂಪನ್ಮೂಲದ ಕೊರತೆ ತುಂಬಲು ಹಣ

ಆಂಧ್ರಪ್ರದೇಶವು ವಿಭಜನೆಯಾದ ಬಳಿಕ ರಾಜ್ಯಕ್ಕೆ ಉಂಟಾದ ಸಂಪನ್ಮೂಲ ಕೊರತೆಯನ್ನು ತುಂಬಿಸಲು ಇರುವರೆಗೂ ಕೇಂದ್ರ ಸರ್ಕಾರ 1,676.50 ಕೋಟಿ ಬಿಡುಗಡೆ ಮಾಡಿದೆ.

ಇದಕ್ಕೆ ಹೆಚ್ಚುವರಿಯಾಗಿ 2014-15ರಲ್ಲಿ 2,303 ಕೋಟಿ ರೂ ಬಿಡುಗಡೆ ಮಾಡಿದೆ. ಇನ್ನು 138.39 ಕೋಟಿ ರೂ. ಮೊತ್ತ ಬಿಡುಗಡೆಗೆ ಬಾಕಿ ಇದೆ.

ವಿಶೇಷ ನೆರವಿನ ಮೊತ್ತ

ವಿಶೇಷ ನೆರವಿನ ಮೊತ್ತ

* ಸಾಲಕ್ಕಾಗಿ ಸಹಿ ಹಾಕಿರುವ ಇಎಪಿಗಳು : 8,962.5 ಕೋಟಿ ರೂ.
* ಅನುದಾನಕ್ಕಾಗಿ ಸಹಿ ಹಾಕಿರುವ ಇಎಪಿಗಳು: 28.88 ಕೋಟಿ ರೂ.
* ಪ್ರಗತಿ ಹಂತದಲ್ಲಿರುವ ಇಎಪಿಗಳು: 17,236 ಕೋಟಿ ರೂ.
* ಒಟ್ಟು ಮೊತ್ತ: 26,227.38 ಕೋಟಿ ರೂ.

English summary
Andhra Pradesh BJP wing gave the details of grants released and yet to be released to Andhra Pradesh by NDA government since 2014-15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X