ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಘಾತಕಾರಿ ಸಂಗತಿ ಬಹಿರಂಗ: ಗೂಗಲ್ ಸರ್ಚ್‌ನಲ್ಲಿ ಆಧಾರ್, ಬ್ಯಾಂಕ್ ಖಾತೆ ವಿವರ

|
Google Oneindia Kannada News

ಹೈದರಾಬಾದ್, ಜುಲೈ 12: ನಮ್ಮ ಖಾಸಗಿ ವಿವರಗಳು ಎಷ್ಟು ಸುರಕ್ಷಿತ? ಬ್ಯಾಂಕ್ ಖಾತೆ, ಪ್ಯಾನ್ ಸಂಖ್ಯೆ, ಮೊಬೈಲ್ ಹೀಗೆ ಪ್ರತಿಯೊಂದಕ್ಕೂ ಆಧಾರ್ ಸಂಖ್ಯೆಯನ್ನು ಸಂಪರ್ಕಿಸುವ ಚಟುವಟಿಕೆ ಆರಂಭವಾದಾಗಿನಿಂದಲೂ ಈ ಬಗ್ಗೆ ಪ್ರಶ್ನೆಗಳು ಉದ್ಭವಿಸುತ್ತಲೇ ಇವೆ.

ಆಧಾರ್ ಸಂಖ್ಯೆ ಜೋಡಣೆಯಿಂದ ಯಾರ ಮಾಹಿತಿಯೂ ಸೋರಿಕೆಯಾಗುವುದಿಲ್ಲ ಎಂಬ ಭರವಸೆಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ.

ಇಂದಿರಾಗಿಂತ ಅಣ್ಣಾ ಕ್ಯಾಂಟೀನ್ ಅಗ್ಗ, ಆಂಧ್ರದಲ್ಲಿ 5 ರುಪಾಯಿಗೆ ತಿಂಡಿ, ಊಟಇಂದಿರಾಗಿಂತ ಅಣ್ಣಾ ಕ್ಯಾಂಟೀನ್ ಅಗ್ಗ, ಆಂಧ್ರದಲ್ಲಿ 5 ರುಪಾಯಿಗೆ ತಿಂಡಿ, ಊಟ

ಆದರೆ, ಅದು ಎಷ್ಟು ಸತ್ಯ? ನಮ್ಮ ವೈಯಕ್ತಿಕ ಮಾಹಿತಿಗಳು ನಿಜಕ್ಕೂ ಸುರಕ್ಷಿತವೇ? ಇಲ್ಲ ಎನ್ನುತ್ತದೆ ಇತ್ತೀಚೆಗೆ ಬಹಿರಂಗವಾದ ಆಘಾತಕಾರಿ ವರದಿ.

Andhra pradeshs farmers details leaked in website

ಜನರ ವೈಯಕ್ತಿಕ ಮಾಹಿತಿಗಳನ್ನು ಕೇವಲ ಗೂಗಲ್ ಸರ್ಚ್ ಮೂಲಕವೇ ಪಡೆದುಕೊಳ್ಳಬಹುದು. ಇದಕ್ಕೆ ಅವರ ಮೊಬೈಲ್ ಫೋನ್ ಸಂಖ್ಯೆ ನಮೂದಿಸಿದರೆ ಸಾಕು.

ಆಂಧ್ರಪ್ರದೇಶ ಸರ್ಕಾರಕ್ಕೆ ಸಂಬಂಧಿಸಿದ ವೆಬ್‌ಸೈಟ್‌ ಒಂದು ಜನರ ಫೋನ್‌ ನಂಬರ್, ಆಧಾರ್ ಸಂಖ್ಯೆ, ತಂದೆ ಹೆಸರು, ಪಾಸ್‌ಬುಕ್ ಮತ್ತು ಬ್ಯಾಂಕ್ ಖಾತೆ ಸಂಖ್ಯೆಗಳು, ಅವರು ವಾಸ ಮಾಡುವ ಜಿಲ್ಲೆ, ಗ್ರಾಮಗಳ ಮಾಹಿತಿಯನ್ನು ಸೋರಿಕೆ ಮಾಡುತ್ತಿದೆ.

ಇಲ್ಲಿನ ಡಾಟಾಬೇಸ್‌ನಲ್ಲಿ ನೀವು ಜನರ ಮೊಬೈಲ್ ಸಂಖ್ಯೆ ನಮೂದಿಸಿದರೆ ಸಾಕು.

ವೈರಲ್ ವಿಡಿಯೋ: ಛೆ, ಇಂಥವರಿಗೆ ಮಕ್ಕಳ್ಯಾಕೆ ಬೇಕೋ! ವೈರಲ್ ವಿಡಿಯೋ: ಛೆ, ಇಂಥವರಿಗೆ ಮಕ್ಕಳ್ಯಾಕೆ ಬೇಕೋ!

ಆಂಧ್ರಪ್ರದೇಶದಲ್ಲಿ ಆಯುರ್ವೇದಿಕ್ ಔಷಧದ ಗಿಡಗಳನ್ನು ಬೆಳೆಯುವುದನ್ನು ಉತ್ತೇಜಿಸುವ ಕೆಲಸ ಮಾಡುತ್ತಿರುವ ಆಂಧ್ರಪ್ರದೇಶ ಔಷಧೀಯ ಮತ್ತು ಚಿಕಿತ್ಸೆಯ ಗಿಡಗಳ ಮಂಡಳಿಯು ಸಬ್ಸಿಡಿ ಪಡೆದುಕೊಂಡ 23 ಸಾವಿರ ರೈತರ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡಿದೆ.

ರಾಜ್ಯದ ರೈತರು ಮತ್ತು ಬುಡಕಟ್ಟು ಸಮುದಾಯದವರಿಗೆ ಸಬ್ಸಿಡಿಯನ್ನು ನೀಡಲಾಗಿತ್ತು. ಈಗ ಅವರೆಲ್ಲರ ಖಾಸಗಿ ಮಾಹಿತಿಗಳು ಆಂಧ್ರಪ್ರದೇಶ ಸರ್ಕಾರದ ವೆಬ್‌ಸೈಟ್‌ನಲ್ಲಿನ ಮುಕ್ತ ಡಾಟಾಬೇಸ್‌ನಲ್ಲಿ ಲಭ್ಯವಾಗುತ್ತಿದೆ.

ಈ ಮಾಹಿತಿಗಳ ಮೇಲೆ ಯಾವುದೇ ಪ್ರವೇಶ ನಿರ್ಬಂಧವಿಲ್ಲ. ಅವುಗಳ ಮೇಲೆ ಕ್ಲಿಕ್ ಮಾಡಿ ಯಾರದ್ದೇ ಬೇಕಾದರೂ ಮಾಹಿತಿಗಳನ್ನು ವೀಕ್ಷಿಸಬಹುದು ಅಥವಾ ಎಲ್ಲವನ್ನೂ ಎಕ್ಸೆಲ್‌ಶೀಟ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಬೇರೆ ಕಡೆ ಮಾಹಿತಿ ಕದಿಯುವವರು ವೆಬ್‌ಸೈಟ್‌ಗೆ ಹೋಗಿ ಒಂದಷ್ಟು ಸಮಯ, ಶ್ರಮ ವಿನಿಯೋಗಿಸಿ ಮಾಹಿತಿಗಳನ್ನು ಕದಿಯಬೇಕಾಗುತ್ತದೆ.

ಆದರೆ, ಈ ಪ್ರಕರಣದಲ್ಲಿ ಹಾಗಿಲ್ಲ. ವ್ಯಕ್ತಿಯ ಫೋನ್ ಸಂಖ್ಯೆ ನಮೂದಿಸಿದರೆ ಸಾಕು. ಅವರ ಎಲ್ಲ ಮಾಹಿತಿಯೂ ಸುಲಭವಾಗಿ ಲಭ್ಯವಾಗುತ್ತವೆ.

English summary
In a shocking development, a website of Andhra Pradesh government is leaking 23,000 farmers personel details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X