• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕರ್ನೂಲ್: ಪರಶಿವನ ಭಕ್ತರ ಬಡಿದಾಟ ಓರ್ವ ಬಲಿ

By Mahesh
|

ಕರ್ನೂಲು(ಆಂಧ್ರಪ್ರದೇಶ) ಅ.5: ಬಿಹಾರದ ಪಾಟ್ನದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ಕಣ್ಮುಂದೆ ಇರುವಾಗಲೇ ಕರ್ನೂಲಿನಲ್ಲಿ ನಡೆದ 'ಬನ್ನಿ ಉತ್ಸವ' ಕಾರ್ಯಕ್ರಮದಲ್ಲಿ ಓರ್ವ ಮೃತಪಟ್ಟಿದ್ದು, 60ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ ಘಟನೆ ಸಡೆದಿದೆ. ಪರಶಿವನ ಭಕ್ತರು ಉತ್ಸವದ ಅಂಗವಾಗಿ ಬಡಿದಾಡಿಕೊಳ್ಳುವುದು ಹಿಂದಿನಿಂದ ನಡೆದುಕೊಂಡು ಬಂದಿದೆ.

ಆಂಧ್ರಪ್ರದೇಶದದ ಹೊಲಗುಂಡ ಮಂಡಲದ ನೆರನಿಕಿ ಗ್ರಾಮದ ದೆವರಗತ್ತು ಬೆಟ್ಟದಲ್ಲಿ ನಡೆದ 'ಸಮರಂ' ಕಾರ್ಯಕ್ರಮದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಅದೋನಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಕರ್ನಾಟಕ ಹಾಗೂ ಆಂಧ್ರದ ಭಕ್ತಾದಿಗಳು ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಬಾರಿ ಸುಮಾರು 3 ಲಕ್ಷ ಜನ ಭಾಗವಹಿಸಿದ್ದರು ಎಂದು ಅಂದಾಜಿಸಲಾಗಿದೆ.

ಗ್ರಾಮಸ್ಥರು ಎರಡು ಗುಂಪುಗಳನ್ನು ಮಾಡಿಕೊಂಡು ದೊಣ್ಣೆ, ಕೋಲು ಹಿಡಿದುಕೊಂಡು ಬಡಿದಾಡಿಕೊಳ್ಳುತ್ತಾರೆ. ಎರಡು ಗುಂಪುಗಳ ನಡುವೆ ಯಾವುದೇ ದ್ವೇಷ ಇರುವುದಿಲ್ಲ. ಅದರೆ, ರಕ್ತಕಾರುವಂತೆ ಬಡಿದಾಡಿಕೊಂಡರೆ ಶುಭ ಸೂಚನೆ ಎಂದು ನಂಬಲಾಗಿದೆ. [ಪಾಟ್ನಾದಲ್ಲಿ ಮಹಾದುರಂತ]

ಈ ಭೀಕರ ಕಾಳಗವನ್ನು ಹತ್ತಿಕ್ಕಲು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ. ಅದರೆ, ಗ್ರಾಮಸ್ಥರು ಸಂಪ್ರದಾಯ, ಪದ್ಧತಿ ಎಂದು ನೆಪ ಹೇಳೀ ಬಡಿದಾಟ ನಡೆಸುತ್ತಾರೆ ಎಂದು ಸ್ಥಳೀಯ ಎಸ್ ಪಿ ಎ ರವಿಕೃಷ್ಣ ಹೇಳಿದ್ದಾರೆ.

ಪುರಾಣ ಏನು ಹೇಳುತ್ತದೆ: ಮಣಿ ಹಾಗೂ ಮಲ್ಲಾಸುರ ಎನ್ನುವ ಇಬ್ಬರು ಅಸುರರನ್ನು ಸಂಹರಿಸಲು ಪರಶಿವನು ಭೈರವನ ರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಇಬ್ಬರನ್ನು ಕೋಲು, ದೊಣ್ಣೆ ಉಪಯೋಗಿಸಿ ಶಿವ ಕೊಂದು ಹಾಕುತ್ತಾನೆ. ಅಸುರ ಶಕ್ತಿಯನ್ನು ನಿರ್ನಾಮ ಮಾಡಿದ ದ್ಯೋತಕವಾಗಿ ಇಲ್ಲಿನ ಶಿವಭಕ್ತರು ಕೋಲು ದೊಣ್ಣೆ ಹಿಡಿದುಕೊಂಡು ಬಡಿದಾಟ ನಡೆಸುತ್ತಾರೆ.[ನರಸಿಂಹನ ಸನ್ನಿಧಿ ಅಹೋಬಿಲಮ್]

ದಸರಾ ಅಂತ್ಯಗೊಳ್ಳುತ್ತಿದ್ದಂತೆ ಶಿವನ ಸಾಹಸ ಕಥೆ ಸಾರಲು ನೆರಡಿಕಿ, ನೆರನಿಕಿತಾಂಡ, ಕೊತ್ತಾಪೇಟ ಗ್ರಾಮಸ್ಥರು ದೇವರ ತಂಡವಾಗಿ, ಎಳ್ಳಾರ್ತಿ, ಅರಿಕೇರ, ಮಡ್ಡಿಗೇರಿ, ನಿತ್ರಾನಟ್ಟಾ, ಸುಲವಾಯಿ, ಹೆಬ್ಬೆಟ್ಟಂ ಗ್ರಾಮಸ್ಥರು ಅಸುರರ ತಂಡವಾಗಿ ಕಾದಾಡುತ್ತಾರೆ. ನಂತರ ದೇವರಗತ್ತು ಬೆಟ್ಟದ ಒಡೆಯ ಮಲೆ ಮಲ್ಲೇಶ್ವರ ಸ್ವಾಮಿಗೆ ಆರತಿ ಬೆಳಗಿ ಪೂಜೆ ಸಲ್ಲಿಸುತ್ತಾರೆ.

English summary
In yet another horror incident within few hours after Patna stampede took place, a boy was killed and nearly 60 persons were injured in a stampede at the celebration of the annual ‘Banni Utsavam'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more