ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಜಿ ಸಚಿವೆಯಿಂದಲೇ ಮುಖ್ಯಮಂತ್ರಿ ಸಂಬಂಧಿಕರ ಅಪಹರಣ!

|
Google Oneindia Kannada News

ಹೈದರಾಬಾದ್, ಜನವರಿ 7: ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ದೂರದ ಸಂಬಂಧಿಯ ಅಪಹರಣ ಪ್ರಕರಣದಲ್ಲಿ ಭಾಗಿಯಾದ ಆರೋಪದಲ್ಲಿ ಆಂಧ್ರಪ್ರದೇಶದ ಮಾಜಿ ಪ್ರವಾಸೋದ್ಯಮ ಸಚಿವೆ ಮತ್ತು ತೆಲುಗು ದೇಶ ಪಕ್ಷದ ನಾಯಕಿ ಭುಮಾ ಅಖಿಲಾ ಪ್ರಿಯಾ ಅವರನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಭೂ ವಿವಾದವೊಂದಕ್ಕೆ ಸಂಬಂಧಿಸಿದಂತೆ ಈ ಘಟನೆ ನಡೆದಿದೆ ಎನ್ನಲಾಗಿದೆ.

'ಅಖಿಲಾ ಪ್ರಿಯಾ ಅವರನ್ನು ಬೆಳಿಗ್ಗೆ ಅವರ ನಿವಾಸದಿಂದ ವಶಕ್ಕೆ ಪಡೆದುಕೊಂಡಿದ್ದೆವು. ಪ್ರಾಥಮಿಕ ವಿಚಾರಣೆ ಬಳಿಕ ಮಧ್ಯಾಹ್ನ ಔಪಚಾರಿಕವಾಗಿ ಬಂಧಿಸಿದ್ದೆವು. ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿ ಮಂಗಳವಾರ ಸಂಜೆ ಸಿಕಂದರಾಬಾದ್‌ನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ' ಎಂದು ಹೈದರಾಬಾದ್ ಪೊಲೀಸ್ ಆಯುಕ್ತ ಅಂಜನಿ ಕುಮಾರ್ ತಿಳಿಸಿದ್ದಾರೆ.

ಶಿರಸಿ; ಮಗಳನ್ನು ಅಪಹರಿಸಿದ ತಾಯಿ, ಪ್ರಕರಣಕ್ಕೆ ಟ್ವಿಸ್ಟ್! ಶಿರಸಿ; ಮಗಳನ್ನು ಅಪಹರಿಸಿದ ತಾಯಿ, ಪ್ರಕರಣಕ್ಕೆ ಟ್ವಿಸ್ಟ್!

ಅಖಿಲಾ ಪ್ರಿಯಾ, ಆಕೆಯ ಪತಿ ಭಾರ್ಗವ್ ರಾಮ್ ಮತ್ತು ಕರ್ನೂಲ್‌ನ ಮತ್ತೊಬ್ಬ ಹಿರಿಯ ಟಿಡಿಪಿ ಮುಖಂಡ ಎವಿ ಸುಬ್ಬಾ ರೆಡ್ಡಿ ಹಾಗೂ ಇತರರು ಈ ಅಪಹರಣ ಯೋಜನೆ ರೂಪಿಸುವಲ್ಲಿ ಭಾಗಿಯಾಗಿದ್ದರು ಎಂದು ಆರೋಪಿಸಲಾಗಿದೆ. ಮುಂದೆ ಓದಿ.

ಉಜಿರೆ ಬಾಲಕನ ಅಪಹರಣ; ಆರೋಪಿಗಳು ಬೆಳ್ತಂಗಡಿ ಪೊಲೀಸರ ವಶಕ್ಕೆಉಜಿರೆ ಬಾಲಕನ ಅಪಹರಣ; ಆರೋಪಿಗಳು ಬೆಳ್ತಂಗಡಿ ಪೊಲೀಸರ ವಶಕ್ಕೆ

ಕೆಸಿಆರ್ ದೂರದ ಸಂಬಂಧಿಕರು

ಕೆಸಿಆರ್ ದೂರದ ಸಂಬಂಧಿಕರು

ಅಪಹರಣಕ್ಕೆ ಒಳಗಾದ ಕೆ. ಪ್ರವೀಣ್ ರಾವ್, ಕೆ. ಸುನೀಲ್ ರಾವ್ ಮತ್ತು ಕೆ. ನವೀನ್ ರಾವ್ ಅವರು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ದೂರದ ಸಂಬಂಧಿ ಹಾಗೂ ಅವರ ಆಪ್ತರಾದ ಪಿ. ವೇಣುಗೋಪಾಲ್ ರಾವ್ ಅವರ ಸಮೀಪದ ಸಂಬಂಧಿಕರಾಗಿದ್ದಾರೆ. ಪ್ರವೀಣ್ ರಾವ್ ಅವರು ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ.

ಐಟಿ ಅಧಿಕಾರಿಗಳ ಸೋಗು

ಐಟಿ ಅಧಿಕಾರಿಗಳ ಸೋಗು

ಸಹೋದರರಾದ ಸುನೀಲ್ ರಾವ್ ಮತ್ತು ನವೀನ್ ರಾವ್ ಅವರೊಂದಿಗೆ ಪ್ರವೀಣ್ ರಾವ್ ನೆಲೆಸಿದ್ದ ಬೊವೆನ್‌ಪಲ್ಲಿಯ ಮನೋವಿಕಾಸ ನಗರದಲ್ಲಿ ಇರುವ ಕೃಷ್ಣ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ ಮನೆಗೆ ರಾತ್ರಿ 7.30ರ ಸುಮಾರಿಗೆ ನುಗ್ಗಿದ್ದ ಹತ್ತು ಮಂದಿ, ಅವರನ್ನು ಅಪಹರಿಸಿದ್ದರು. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಎಂದು ತಮ್ಮ ಗುರುತಿನ ಚೀಟಿ ಕೂಡ ಅಪಹರಣಕಾರರು ತೋರಿಸಿದ್ದರು.

ಬೆಡ್‌ರೂಂನಲ್ಲಿ ಕೂಡಿಹಾಕಿದರು

ಬೆಡ್‌ರೂಂನಲ್ಲಿ ಕೂಡಿಹಾಕಿದರು

ಕುಟುಂಬದ ಇತರರನ್ನು ಬೆಡ್‌ರೂಂನಲ್ಲಿ ಕೂರುವಂತೆ ಸೂಚಿಸಿ, ಈ ಮೂವರನ್ನು ಹಾಲ್‌ಗೆ ಕರೆದೊಯ್ದಿದ್ದರು. ಅಲ್ಲಿಂದ ವಾಹನದಲ್ಲಿ ಬಲವಂತವಾಗಿ ಎಳೆದುಕೊಂಡು ಹೋಗಿದ್ದರು. ಸುಮಾರು ಒಂದು ಗಂಟೆ ಒಳಗೆ ಕುಳಿತಿದ್ದ ಕುಟುಂಬದವರು ಹೊರಗೆ ಬಂದು ನೋಡಿದಾಗ ಅಲ್ಲಿ ಯಾರೂ ಇರಲಿಲ್ಲ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು.

Recommended Video

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ರೌಡಿಶೀಟರ್ ಮೇಲೆ ಶೂಟೌಟ್ | Oneindia Kannada
ದಾಖಲೆಗಳಿಗೆ ಸಹಿ ಹಾಕಿಸಿ ಬಿಟ್ಟರು

ದಾಖಲೆಗಳಿಗೆ ಸಹಿ ಹಾಕಿಸಿ ಬಿಟ್ಟರು

ಅಪಹರಣಕಾರರು ಫಾರ್ಮ್‌ಹೌಸ್ ಒಂದರಲ್ಲಿ ಮೂವರು ಸಹೋದರರಿಂದ ಕೆಲವು ದಾಖಲೆಗಳಿಗೆ ಸಹಿ ಹಾಕಿಸಿಕೊಂಡು, ನಸುಕಿನ 3.30ರ ಸುಮಾರಿಗೆ ಕೋಕಪೇಟ್-ನರಸಿಂಗಿ ಪ್ರದೇಶದಲ್ಲಿ ಬಿಟ್ಟು ತೆರಳಿದ್ದರು. ಹಫೀಜ್‌ಪೇಟೆಯಲ್ಲಿ 50 ಎಕರೆ ಭೂಮಿಗೆ ಸಂಬಂಧಿಸಿದಂತೆ ಆರೋಪಿಗಳು ಮತ್ತು ತಮ್ಮ ಕುಟುಂಬದ ನಡುವೆ ವಿವಾದ ಉಂಟಾಗಿತ್ತು ಎಂದು ಪ್ರವೀಣ್ ರಾವ್ ಅವರ ಮತ್ತೊಬ್ಬ ಸಹೋದರ ಪ್ರತಾಪ್ ರಾವ್ ತಿಳಿಸಿದ್ದಾರೆ.

English summary
Hyderabad police arrested Andhra Pradesh ex minister Akhila Priya, her husband and others in a kidnap case of Telangana CM K Chandrasekhar Rao's relatives.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X