• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸ್ಮಗಲ್ಲಿಂಗ್ ಲೋಕದ ಲೇಡಿ ಡಾನ್ ಸಂಗೀತಾ ಅಂದರ್!

By Mahesh
|

ಹೈದರಾಬಾದ್, ಮಾರ್ಚ್ 30: ಮಾಜಿ ಗಗನಸಖಿ, ಮಾಡೆಲ್, ರಕ್ತಚಂದನ ಸ್ಮಗಲ್ಲಿಂಗ್ ಲೋಕದ ಲೇಡಿ 'ಡಾನ್' ಸಂಗೀತಾ ಚಟರ್ಚಿಗೆ 14 ನ್ಯಾಯಾಂಗ ಬಂಧನ ವಿಧಿಸಿ, ಗುರುವಾರದಂದು ಆಂಧ್ರಪ್ರದೇಶದ ಕೋರ್ಟ್ ಆದೇಶ ಹೊರಡಿಸಿದೆ.

ರಕ್ತಚಂದನ ಅಕ್ರಮ ಸಾಗಾಣಿಕೆಯಲ್ಲಿ ತೊಡಗಿದ ಆರೋಪ ಹೊತ್ತಿರುವ ಸಂಗೀತಾ ಚಟರ್ಜಿ ಅವರನ್ನು ಮಂಗಳವಾರ ತಡರಾತ್ರಿ, ಕೋಲ್ಕತ್ತಾದಲ್ಲಿ ಬಂಧಿಸಲಾಗಿತ್ತು. ಬುಧವಾರದಂದು ಹೈದರಾಬಾದಿಗೆ ಕರೆತರಲಾಗಿತ್ತು. ಗುರುವಾರದಂದು ಚಿತ್ತೂರಿನ ಪಕಲಾ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆಕೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

26 ವರ್ಷ ವಯಸ್ಸಿನ ಸಂಗೀತಾ ಅವರನ್ನು ಚಿತ್ತೂರಿನ ಸಬ್ ಜೈಲಿನಲ್ಲಿರಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡಬೇಕೆಂದು ಚಿತ್ತೂರು ಪೊಲೀಸರು, ಕೋರ್ಟಿನಲ್ಲಿ ಅರ್ಜಿ ಹಾಕಿದ್ದಾರೆ. [ಆಂಧ್ರ -ತಮಿಳುನಾಡು ಸಂಬಂಧಕ್ಕೆ ಬೆಂಕಿ ಹಚ್ಚಿದ ರಕ್ತ ಚಂದನ]

ಸಂಗೀತಾ ಅವರ ಪತಿ ಲಕ್ಷ್ಮಣ್ ಕುಖ್ಯಾತ ರಕ್ತಚಂದನ ಸ್ಮಗ್ಲರ್ ಆಗಿದ್ದಾರೆ. 2014 ರಲ್ಲಿ ಬಂಧಿಸಲ್ಪಟ್ಟ ಲಕ್ಷ್ಮಣ್ ಜಾಮೀನಿನ ಮೇಲೆ ಹೊರ ಬಂದಿದ್ದರು. 2016 ರಲ್ಲಿ ಪೊಲೀಸರು ಮತ್ತೊಮ್ಮೆ ಬಂಧಿಸಿ ಜೈಲಿಗೆ ತಳ್ಳಿದ್ದಾರೆ.

ಸ್ಮಗಲಿಂಗ್ ನಿಭಾಯಿಸಿದ್ದ ಸಂಗೀತಾ

ಸ್ಮಗಲಿಂಗ್ ನಿಭಾಯಿಸಿದ್ದ ಸಂಗೀತಾ

ಲಕ್ಷ್ಮಣ್ ಅನುಪಸ್ಥಿತಿಯಲ್ಲಿ ದಂಧೆಯನ್ನು ನಿಭಾಯಿಸುತ್ತಿದ್ದ ಸಂಗೀತಾರನ್ನು ಕೂಡಾ 2016ರಲ್ಲಿ ಬಂಧಿಸಲಾಗಿತ್ತು. ಆದರೆ, ಜಾಮೀನಿನ ಮೇಲೆ ಹೊರ ಬಂದ ಸಂಗೀತಾ ನಂತರ ತಲೆ ಮರೆಸಿಕೊಂಡಿದ್ದರು. ಅನೇಕ ಬಾರಿ ವಾರೆಂಟ್ ಜಾರಿಗೊಂಡರೂ ಕೋರ್ಟಿಗೆ ಹಾಜರಾಗಿರಲಿಲ್ಲ. 10ನೇ ತರಗತಿ ತನಕ ಓದಿದ್ದ ಸಂಗೀತಾ ನಂತರ ಹೇಗೋ ಗಗನಸಖಿಯಾದರು. ಮಾಡೆಲಿಂಗ್, ಸಿನಿಮಾ ರಂಗಕ್ಕೂ ಎಂಟ್ರಿ ಕೊಟ್ಟರು. ಕೋಲ್ಕತ್ತಾದಲ್ಲಿ ಲಕ್ಷ್ಮಣ್ ಭೇಟಿಯಾಗಿ ಕೆಟ್ಟರು.

ಭಾರತದ 6 ರಾಜ್ಯಗಳಲ್ಲಿ ನೆಟ್ವರ್ಕ್

ಭಾರತದ 6 ರಾಜ್ಯಗಳಲ್ಲಿ ನೆಟ್ವರ್ಕ್

ಮಣಿಪುರ ಮೂಲದ ಲಕ್ಷ್ಮಣ್, ಆಂಧ್ರದ ಕಡಪ, ಚಿತ್ತೂರು, ಕರ್ನೂಲ್ ಗಳಲ್ಲಿ ರಕ್ತಚಂದನ ಸ್ಮಗ್ಲಿಂಗ್ ನಡೆಸುತ್ತಿದ್ದ. ಭಾರತದ 6 ರಾಜ್ಯಗಳು, ಚೀನಾ ಹಾಗೂ ಜಪಾನ್ ಗೆ ವಹಿವಾಟು ವಿಸ್ತರಿಸಿದ್ದ. 2014ರಲ್ಲಿ ನೇಪಾಳದಲ್ಲಿ ಸೆರೆಸಿಕ್ಕ ಬಳಿಕ ಜೈಲುವಾಸ, ಕೋರ್ಟ್ ವಿಚಾರಣೆಯಲ್ಲಿ ತೊಡಗಿ ಸ್ಮಗ್ಲಿಂಗ್ ವ್ಯವಹಾರ ಕುಂಠಿತವಾಯಿತು.

ಸಂಗೀತಾ ಮೇಲೆ ಹಲವು ಕೇಸ್

ಸಂಗೀತಾ ಮೇಲೆ ಹಲವು ಕೇಸ್

ಲಕ್ಷ್ಮಣ್ ಜತೆ ಸೇರಿದ ಸಂಗೀತಾ ಮೇಲೆ ಹವಾಲ ಹಣ ರವಾನೆ, ಅಕ್ರಮ ಶಸ್ತ್ರಾಸ್ತ್ರ ಬಳಕೆ ಸೇರಿದಂತೆ ಅನೇಕ ಪ್ರಕರಣಗಳಿದ್ದು, ಜಾಮೀನು ರಹಿತ ವಾರೆಂಟ್ ಹೊರಡಿಸಲಾಗಿತ್ತು. ಈ ಸಂಬಂಧ ಹುಡುಕಾಟ ನಡೆಸಿದ್ದ ಪೊಲೀಸರಿಗೆ ಕೊನೆಗೂ ಕೋಲ್ಕತ್ತಾದಲ್ಲಿ ಸಂಗೀತಾ ಸಿಕ್ಕಿದ್ದಾರೆ.ಈಗ ಜಾಲದಲ್ಲಿರುವ ಇನ್ನಷ್ಟು ದೊಡ್ಡ ಮಿಕಗಳನ್ನು ಬಲೆಗೆ ಕೆಡವಿಕೊಳ್ಳಲು ಚಿತ್ತೂರು ಪೊಲೀಸರು ಸಿದ್ಧರಾಗುತ್ತಿದ್ದಾರೆ. ಆದರೆ, ಸಂಗೀತಾ ವಿಚಾರಣೆ ನಡೆಸಲು ಕೋರ್ಟ್ ಅನುಮತಿ ಸಿಕ್ಕಿಲ್ಲ.

ನಟಿ ನೀತುಗೂ ನಂಟಿದೆ

ನಟಿ ನೀತುಗೂ ನಂಟಿದೆ

ರಕ್ತ ಚಂದನ ಮಾಫಿಯಾ ಕಿಂಗ್ ಪಿನ್ ಮಸ್ತಾನ್ ವಾಲಿ ಜೊತೆ ನಟಿ ನೀತು ಅಗರವಾಲ್ ಗೆ ಅಕ್ರಮ ಸಂಬಂಧ ಇರುವ ಬಗ್ಗೆ ಅನೇಕ ಬಾರಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅದರೆ, ಸೂಕ್ತ ಸಾಕ್ಷಿಗಳು ಸಿಕ್ಕಿರಲಿಲ್ಲ. ನೀತುಗಾಗಿ 35 ಲಕ್ಷ ರು ಮೌಲ್ಯದ ಒಂದು ಫ್ಲಾಟ್ ಕೂಡಾ ನೀಡಿದ್ದ ಎಂಬ ಮಾಹಿತಿ ಇದೆ. ಪ್ರೇಮ ಪ್ರಣಯಂ ಎಂಬ ತೆಲುಗು ಚಿತ್ರದಲ್ಲಿ ನೀತು ನಟಿಸಿದ್ದರು.ಇದಕ್ಕೆ ಮಸ್ತಾನ್ ವಾಲಿಯೇ ಹಣ ಹೂಡಿದ್ದ.

ಕಿಂಗ್ ಪಿನ್ ಮಸ್ತಾನ್ ವಾಲಿ

ಕಿಂಗ್ ಪಿನ್ ಮಸ್ತಾನ್ ವಾಲಿ

ನಿಂಬೆಹಣ್ಣು ಮಾರಾಟಗಾರನಾಗಿ ಆಂಧ್ರಪ್ರದೇಶದಲ್ಲಿ ಜೀವನೋಪಾಯ ಕಂಡು ಕೊಂಡಿದ್ದ ಮಸ್ತಾನ್ ಗೆ ಒಮ್ಮೆ ತಿರುಪತಿ ಬಳಿ ಸ್ಮಗ್ಲರ್ ಗಳ ಗುಂಪು ಪರಿಚಯವಾಗುತ್ತದೆ. ನಂತದ ದಂಧೆಗಿಳಿದು ಕೋಟಿಗಟ್ಟಲೇ ಹಣ ಬಾಚುತ್ತಾನೆ. ವೈಎಸ್ಸಾರ್ ಪಕ್ಷದ ಸಂಪರ್ಕ ಸಾಧಿಸಿ ಸಂಸದನಾಗಲು ಯತ್ನಿಸಿ ವಿಫಲನಾಗಿದ್ದ. ಕರ್ನೂಲ್ ಜಿಲ್ಲೆಯಲ್ಲಿ ಬಂಧಿತನಾಗಿದ್ದ ಮಸ್ತಾನ್ ನಂತರ ಜಾಮೀನು ಪಡೆದು ಹೊರಬಂದವನು ಸದ್ಯ ತಲೆಮರೆಸಿಕೊಂಡಿದ್ದಾನೆ.

ಭಾರಿ ಬೆಲೆ ಸ್ಮಗಲಿಂಗ್ ಗೆ ದಾರಿ

ಭಾರಿ ಬೆಲೆ ಸ್ಮಗಲಿಂಗ್ ಗೆ ದಾರಿ

ವಿದೇಶದಲ್ಲಿ ರಕ್ತಚಂದನದ ಬೆಲೆ ಪ್ರತಿ ಟನ್ನಿಗೆ 25 ಲಕ್ಷದಿಂದ 1 ಕೋಟಿ ರು ತನಕ ರೇಟ್ ಇದೆ. ಕಳೆದ ವರ್ಷ ರಕ್ತಚಂದನದ ಜಾಗತಿಕ ಹರಾಜಿನಲ್ಲಿ ಆಂಧ್ರಪ್ರದೇಶಕ್ಕೆ 1,000 ಕೋಟಿ ರು ಆದಾಯ ಬಂದಿತ್ತು. ಆಂಧ್ರದ ರಾಯಲಸೀಮೆ, ಕರ್ನಾಟಕ, ತಮಿಳುನಾಡಿನ ಗಡಿಭಾಗದ ಕಾಡಿನಲ್ಲಿ ಕಂಡು ಬರುವ ಈ ಮರಕ್ಕೆ ಚೀನಾ, ಜಪಾನ್ ನಲ್ಲಿ ಭಾರಿ ಬೇಡಿಕೆ ಇದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A court in Andhra Pradesh on Wednesday sent to jail former air hostess and model Sangeeta Chatterjee for her alleged involvement in red sanders smuggling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more