ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು-ಕಡಪ ನಡುವೆ ಏರ್‌ ಪೆಗಾಸಸ್ ವಿಮಾನ ಸೇವೆ

|
Google Oneindia Kannada News

ಹೈದರಾಬಾದ್, ಜೂ. 02 : ಏರ್‌ ಪೆಗಾಸಸ್ ಬೆಂಗಳೂರು-ಕಡಪ ನಡುವೆ ವಿಮಾನ ಹಾರಾಟ ನಡೆಸಲು ಸಿದ್ಧವಾಗಿದೆ. ಜೂನ್ 7ರಿಂದ ಕಡಪ ಮತ್ತು ಬೆಂಗಳೂರು ನಡುವೆ ವಿಮಾನದಲ್ಲಿ ಸಂಚರಿಸಬಹುದಾಗಿದೆ. ಕೆಲವು ದಿನಗಳ ಹಿಂದೆ ಸಂಸ್ಥೆ ಬೆಂಗಳೂರು-ಹುಬ್ಬಳ್ಳಿ ನಡುವೆ ಸಂಚಾರ ಆರಂಭಿಸಿತ್ತು.

ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಡಪಕ್ಕೆ ಮೊದಲ ವಿಮಾನ ಜೂನ್ 7ರ ಬೆಳಗ್ಗೆ 10.40ಕ್ಕೆ ಹೊರಡಲಿದೆ. ಕಡಪ ಕ್ಷಿಪ್ರಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಆದ್ದರಿಂದ ವಿಮಾನಯಾನ ಸೇವೆ ಆರಂಭಿಸಲಾಗುತ್ತಿದೆ ಎಂದು ಏರ್‌ ಪೆಗಾಸಸ್ ತಿಳಿಸಿದೆ. [ಬೆಂಗಳೂರು-ಹುಬ್ಬಳ್ಳಿ ನಡುವೆ ವಿಮಾನ ಸಂಚಾರ]

air pegasus

ವೇಳಾಪಟ್ಟಿ : ಏರ್‌ ಪೆಗಾಸಸ್ ವಿಮಾನ ಪ್ರತಿದಿನ ಬೆಳಗ್ಗೆ 10.40ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದು 11.30ಕ್ಕೆ ಕಡಪ ತಲುಪಲಿದೆ. 11.50ಕ್ಕೆ ಕಡಪದಿಂದ ಹೊರಡುವ ವಿಮಾನ 12.35ಕ್ಕೆ ಬೆಂಗಳೂರನ್ನು ತಲುಪಲಿದೆ. [ಟಿಕೆಟ್ ಬುಕ್ ಮಾಡಲು ವಿಳಾಸ]

2015ರ ಏಪ್ರಿಲ್‌ನಲ್ಲಿ ಏರ್‌ ಪೆಗಾಸಸ್ ಬೆಂಗಳೂರು-ಹುಬ್ಬಳ್ಳಿ ಮತ್ತು ಬೆಂಗಳೂರು-ತಿರುವನಂತಪುರದ ನಡುವೆ ವಿಮಾನ ಸಂಚಾರವನ್ನು ಆರಂಭಿಸಿತ್ತು. 1,600 ರೂ. ದರದಲ್ಲಿ ಬೆಂಗಳೂರು-ಹುಬ್ಬಳ್ಳಿ ನಡುವೆ ಪ್ರಯಾಣಿಸಬಹುದಾಗಿದೆ.

ಮುಂದಿನ ದಿನಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರಿಯ ವಿಮಾನ ನಿಲ್ದಾಣದಿಂದ ಬೆಳಗಾವಿ, ಕೊಚ್ಚಿ, ಚೆನ್ನೈ, ರಾಜಮಂಡ್ರಿ, ಪುದುಚೇರಿ ಮುಂತಾದ ನಗರಗಳಿಗೆ ವಿಮಾನ ಸೇವೆ ಆರಂಭಿಸಲಾಗುತ್ತದೆ ಎಂದು ಏರ್‌ ಪೆಗಾಸಸ್ ತಿಳಿಸಿದೆ.

English summary
Air Pegasus is launching its flight services from Bengaluru to Kadapa in Andhra Pradesh from June 7, 2015. The flight will depart from Bengaluru at 10.40 am and reach Kadapa at 11.30 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X