ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜನವರಿ 15ರಿಂದ ಹೈದರಾಬಾದ್‌, ಅಮೆರಿಕ ನಡುವೆ ನೇರ ವಿಮಾನ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 10: ಹೈದರಾಬಾದ್ ಹಾಗೂ ಅಮೆರಿಕ ನಡುವೆ ಜನವರಿ 15ರಿಂದ ವಿಮಾನ ಸೇವೆ ಆರಂಭಗೊಳ್ಳಲಿದೆ.

ಏರ್‌ ಇಂಡಿಯಾ ವಿಮಾನವು ಹೈದರಾಬಾದ್ ಹಾಗೂ ಅಮೆರಿಕ ನಡುವೆ ಹಾರಾಟ ನಡೆಸಲಿದೆ. ಜನವರಿಯಿಂದ ಏರ್‌ ಇಂಡಿಯಾ ಬೆಂಗಳೂರು ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ನಡುವೆಯೂ ನೇರ ವಿಮಾನ ಸೇವೆ ನೀಡಲಿದೆ.

ಸಿಲಿಕಾನ್ ವ್ಯಾಲಿ-ಸಿಲಿಕಾನ್ ಸಿಟಿ ನಡುವೆ ನೇರ ವಿಮಾನಸಿಲಿಕಾನ್ ವ್ಯಾಲಿ-ಸಿಲಿಕಾನ್ ಸಿಟಿ ನಡುವೆ ನೇರ ವಿಮಾನ

ಹೈದರಾಬಾದ್‌ನಿಂದ ಚಿಕಾಗೋಗೆ ವಿಮಾನ ಸಂಚರಿಸಲಿದೆ. ಹೈದರಾಬಾದ್‌ ಅಮೆರಿಕ ನಡುವೆ ವರ್ಷಕ್ಕೆ 7 ಲಕ್ಷಕ್ಕೂ ಹೆಚ್ಚು ಮಂದಿ ಪ್ರಯಾಣಿಸಲಿದ್ದಾರೆ. ಹೈದರಾಬಾದ್‌ಗೆ ವಿಜಯವಾಡ, ವಿಶಾಖಪಟ್ಟಣಂ, ನಾಗ್ಪುರ, ರಾಜಮುಂಡ್ರಿ, ಭೋಪಾಲ್, ಹಾಗೂ ತಿರುಪತಿ ಹತ್ತಿದ ಸ್ಥಳಗಳಾಗಿದ್ದು, ಪ್ರತಿ ವರ್ಷ ಹೆಚ್ಚುವರಿಯಾಗಿ 220,000 ಮಂದಿ ಪ್ರಯಾಣಿಸುವ ಸಾಧ್ಯತೆ ಇದೆ.

Air Indias Direct Flight From Hyderabad To Chicago From 15 January

ಬೆಂಗಳೂರು ಹಾಗೂ ಅಮೆರಿಕ ನಡುವೆ ಏರ್ ಇಂಡಿಯಾ ನೇರ ವಿಮಾನ ಸಂಪರ್ಕವನ್ನು ಕಲ್ಪಿಸಲಿದೆ. 2021ರ ಜನವರಿ 11ರಿಂದ ಈ ವಿಮಾನ ಸೇವೆ ಆರಂಭವಾಗಲಿದೆ.

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರು ನಡುವೆ ಏರ್ ಇಂಡಿಯಾ ತಡೆ ರಹಿತ ನೇರ ವಿಮಾನ ಸೇವೆಯನ್ನು ಆರಂಭ ಮಾಡುವುದಾಗಿ ಘೋಷಣೆ ಮಾಡಿದೆ. ಬೆಂಗಳೂರಿನ ಐಟಿ ಉದ್ಯಮಕ್ಕೆ ಇದು ಸಹಕಾರಿಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಡಿಸೆಂಬರ್ 10ರಿಂದ ಮೈಸೂರು-ಮಂಗಳೂರು ವಿಮಾನ ಸೇವೆ ಸ್ಯಾನ್ ಫ್ರಾನ್ಸಿಸ್ಕೋ ರಾಜ್ಯದ ಸಿಲಿಕಾನ್ ವ್ಯಾಲಿ ಮತ್ತು ಸಾಫ್ಟ್‌ವೇರ್‌ ರಫ್ತಿನಲ್ಲಿ ಭಾರತದಲ್ಲಿಯೇ ಮುಂಚೂಣಿಯಲ್ಲಿರುವ ಬೆಂಗಳೂರು ನಗರದ ನಡುವೆ ನೇರ ವಿಮಾನ ಸೇವೆ ಆರಂಭವಾಗಲಿದೆ.

ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್ನೋಡಿ ಭಾರತದ ಮೊದಲ ವರ್ಟಿಕಲ್ ಫಾರೆಸ್ಟ್ ಟವರ್

ವಾರದಲ್ಲಿ ಮೂರು ದಿನಗಳ ಕಾಲ ಈ ವಿಮಾನ ಹಾರಾಟ ನಡೆಸಲಿದೆ. ಇದರಿಂದಾಗಿ ಕರ್ನಾಟಕದಲ್ಲಿನ ಐಟಿ ಉದ್ಯಮದ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ಸಿಕ್ಕಂತೆ ಆಗಲಿದೆ. ಸ್ಟಾರ್ಟ್‌ ಅಪ್ ಕ್ಷೇತ್ರದಲ್ಲಿಯೂ ಬೆಂಗಳೂರು ಬೆಳವಣಿಗೆ ಹೊಂದುತ್ತಿದ್ದು, ನೇರ ವಿಮಾನ ಸೇವೆಯಿಂದ ಕಂಪನಿಗಳು ನೇರವಾಗಿ ಸಿಲಿಕಾನ್ ಸಿಟಿ ಜೊತೆ ಸಂಪರ್ಕ ಸಾಧಿಸಲು ಸಹಾಯಕವಾಗಲಿದೆ.

English summary
Hyderabad is all set to get non-stop connectivity with the United States as Air India will launch its direct flight from the city to Chicago on January 15.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X