ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ಹೈಕೋರ್ಟ್ ಹಿಜಾಬ್ ತೀರ್ಪು ವಿರೋಧಿಸಿ ಓವೈಸಿ 15 ಟ್ವೀಟ್

|
Google Oneindia Kannada News

ಹೈದರಾಬಾದ್, ಮಾರ್ಚ್ 15: ರಾಜ್ಯದಲ್ಲಿ ಮತ್ತು ದೇಶದ ಇತರ ಕೆಲವು ಭಾಗಗಳಲ್ಲೂ ಭಾರೀ ಸದ್ದನ್ನು ಮಾಡಿದ್ದ ಹಿಜಾಬ್ ಪ್ರಕರಣದ ವಿಚಾರದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮೂವರು ಸದಸ್ಯರ ಪೀಠ ಸುದೀರ್ಘ ವಿಚಾರಣೆ ನಡೆಸಿ, ತೀರ್ಪನ್ನು ಕಾಯ್ದಿರಿಸಿತ್ತು.

ಮಾರ್ಚ್ 15ರಂದು ನ್ಯಾಯಾಲಯ ತೀರ್ಪನ್ನು ನೀಡಿದ್ದು, ಶಾಲಾ ಸಮವಸ್ತ್ರ ಕುರಿತಂತೆ ಅಧಿಕೃತ ಆದೇಶ (G.O) ಹೊರಡಿಸುವ ಅಧಿಕಾರ ಸರಕಾರಕ್ಕಿದೆ.

Hijab Verdict; ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲHijab Verdict; ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ

ಸಮವಸ್ತ್ರ ಕಡ್ಡಾಯಗೊಳಿಸಿರುವ ಸರಕಾರದ ಆದೇಶದಿಂದ ಮೂಲಭೂತ ಹಕ್ಕು ಸಾಂವಿಧಾನದ ಉಲ್ಲಂಘನೆ ಆಗಿಲ್ಲ. ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎನ್ನುವ ತೀರ್ಪನ್ನು ನೀಡಿತ್ತು.

ಈ ಬಗ್ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದರೂ ಆಗಿರುವ ಅಸಾದುದ್ದೀನ್ ಓವೈಸಿ, "ಕರ್ನಾಟಕ ಉಚ್ಚ ನ್ಯಾಯಾಲಯದ ತೀರ್ಪನ್ನು ನಾನು ಒಪ್ಪುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಅವರ ಹದಿನೈದು ಟ್ವೀಟ್ ಈ ರೀತಿಯಿದೆ:

ಹಿಜಾಬ್ ತೀರ್ಪು: ಆರ್ಟಿಕಲ್ 30(ಎ) ಕುರಿತು ಧ್ವನಿ ಎತ್ತಿದ ಬೈಜಯಂತ್ ಪಾಂಡಹಿಜಾಬ್ ತೀರ್ಪು: ಆರ್ಟಿಕಲ್ 30(ಎ) ಕುರಿತು ಧ್ವನಿ ಎತ್ತಿದ ಬೈಜಯಂತ್ ಪಾಂಡ

1. ಹಿಜಾಬ್ ಕುರಿತ ಕರ್ನಾಟಕ ಹೈಕೋರ್ಟ್ ತೀರ್ಪನ್ನು ನಾನು ಒಪ್ಪುವುದಿಲ್ಲ. ತೀರ್ಪನ್ನು ಒಪ್ಪದಿರುವುದು ನನ್ನ ಹಕ್ಕು ಮತ್ತು ಅರ್ಜಿದಾರರು ಸರ್ವೋಚ್ಚ ನ್ಯಾಯಾಲಯದ ಮುಂದೆ ಮೇಲ್ಮನವಿ ಸಲ್ಲಿಸುತ್ತಾರೆ ಎಂದು ನಾನು ಭಾವಿಸುತ್ತೇನೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುತ್ತದೆ

2. ಇತರ ಧಾರ್ಮಿಕ ಗುಂಪುಗಳು ಮತ್ತು ಸಂಘಟನೆಗಳು ಈ ತೀರ್ಪನ್ನು ಮೇಲ್ಮನವಿ ಸಲ್ಲಿಸಿ, ಪ್ರಶ್ನಿಸುತ್ತವೆ ಎಂದು ಭಾವಿಸಿದ್ದೇನೆ. ಯಾಕೆಂದರೆ, ಈ ತೀರ್ಪು ಧರ್ಮ, ಸಂಸ್ಕೃತಿ, ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುತ್ತದೆ.

3. ನ್ಯಾಯಾಲಯದ ಪೀಠಿಕೆಯು ಒಬ್ಬ ವ್ಯಕ್ತಿಗೆ ಆಲೋಚನೆ, ಅಭಿವ್ಯಕ್ತಿ, ನಂಬಿಕೆ ಮತ್ತು ಆರಾಧನೆಯ ಸ್ವಾತಂತ್ರ್ಯವನ್ನು ಹೊಂದಿದೆ ಎಂದು ಹೇಳುತ್ತದೆ. ನನ್ನ ತಲೆಯನ್ನು ಮುಚ್ಚಿಕೊಳ್ಳುವುದು ಅತ್ಯಗತ್ಯ ಎಂಬುದು ನನ್ನ ನಂಬಿಕೆ ಮತ್ತು ಅದು ನಂಬಿಕೆಯಾಗಿದ್ದ ಪಕ್ಷದಲ್ಲಿ ಮತ್ತು ನಾನು ಅದನ್ನು ಸೂಕ್ತವೆಂದು ಭಾವಿಸಿದಂತೆ ಅದನ್ನು ವ್ಯಕ್ತಪಡಿಸಲು ನನಗೆ ಹಕ್ಕಿದೆ. ಧರ್ಮನಿಷ್ಠ ಮುಸಲ್ಮಾನರಿಗೆ ಹಿಜಾಬ್ ಕೂಡ ಒಂದು ಆರಾಧನೆ.

4. ಅಗತ್ಯವಾದ ಧಾರ್ಮಿಕ ಆಚರಣೆಯನ್ನು ಪರಿಶೀಲಿಸುವ ಸಮಯ ಇದು. ಒಬ್ಬ ಧರ್ಮನಿಷ್ಠ ವ್ಯಕ್ತಿಗೆ, ಎಲ್ಲವೂ ಅತ್ಯಗತ್ಯ, ಶ್ರದ್ಧಾವಂತ ಹಿಂದೂ ಬ್ರಾಹ್ಮಣರಿಗೆ, ಜನಿವಾರವು ಅತ್ಯಗತ್ಯ ಆದರೆ ಬ್ರಾಹ್ಮಣೇತರರಿಗೆ ಅದು ಇಲ್ಲದಿರಬಹುದು. ನ್ಯಾಯಾಧೀಶರು ಅಗತ್ಯವನ್ನು ನಿರ್ಧರಿಸಬಹುದೇ?

 ಹೆಡ್ ಸ್ಕಾರ್ಫ್ ಯಾರಿಗೂ ಹಾನಿ ಮಾಡುವುದಿಲ್ಲ

ಹೆಡ್ ಸ್ಕಾರ್ಫ್ ಯಾರಿಗೂ ಹಾನಿ ಮಾಡುವುದಿಲ್ಲ

5. ಒಂದೇ ಧರ್ಮದ ಇತರರು ಕೂಡಾ ಅಗತ್ಯವನ್ನು ನಿರ್ಧರಿಸುವ ಹಕ್ಕನ್ನು ಹೊಂದಿಲ್ಲ. ಇದು ವ್ಯಕ್ತಿ ಮತ್ತು ದೇವರ ನಡುವೆ ಇದೆ. ಇಂತಹ ಪೂಜಾ ಕಾರ್ಯಗಳು ಇತರರಿಗೆ ಹಾನಿಯಾದರೆ ಮಾತ್ರ ಧಾರ್ಮಿಕ ಹಕ್ಕುಗಳಲ್ಲಿ ರಾಜ್ಯವು ಹಸ್ತಕ್ಷೇಪ ಮಾಡಲು ಅವಕಾಶ ನೀಡಬೇಕು. ಹೆಡ್ ಸ್ಕಾರ್ಫ್ ಯಾರಿಗೂ ಹಾನಿ ಮಾಡುವುದಿಲ್ಲ.

6. ಹಿಜಾಬ್ ಧರಿಸುವುದನ್ನು ನಿಷೇಧಿಸುವುದರಿಂದ ಧಾರ್ಮಿಕ ಭಾವನೆಯ ಮುಸ್ಲಿಂ ಮಹಿಳೆಯರು ಮತ್ತು ಅವರ ಕುಟುಂಬಗಳಿಗೆ ಖಂಡಿತವಾಗಿಯೂ ತೊಂದರೆಯಾಗುತ್ತದೆ. ಯಾಕೆಂದರೆ, ಇದಿಲ್ಲದೇ, ಶಿಕ್ಷಣ ಸಂಸ್ಥೆಯನ್ನು ಪ್ರವೇಶಿಸುವುದು ತೊಂದರೆಯಾಗುತ್ತದೆ.

7. ಸಮವಸ್ತ್ರವು ಏಕರೂಪತೆಯನ್ನು ಖಚಿತಪಡಿಸುತ್ತದೆ ಎನ್ನುವುದು ಹೇಗೆ? ಶ್ರೀಮಂತ/ಬಡ ಕುಟುಂಬದಿಂದ ಬಂದವರು ಯಾರೆಂದು ಮಕ್ಕಳಿಗೆ ತಿಳಿಯುವುದಿಲ್ಲವೇ? ಜಾತಿಯ ಹೆಸರುಗಳು ಕುಟುಂಬದ ಹಿನ್ನೆಲೆಯನ್ನು ಸೂಚಿಸುವುದಲ್ಲವೇ?

8. ಶಿಕ್ಷಕರು ತಾರತಮ್ಯ ಮಾಡುವುದನ್ನು ತಡೆಯಲು ಸಮವಸ್ತ್ರದಿಂದ ಸಾಧ್ಯ ಎನ್ನುವುದು ತಪ್ಪು ವಾದ. ಪೊಲೀಸ್ ಮತ್ತು ಸೇನೆಯ ಸಮವಸ್ತ್ರಗಳಲ್ಲಿ ಇದನ್ನು ಸಮಂಜಸವಾಗಿ ಮಾಡಿರುವುದನ್ನು ಒಪ್ಪಿಕೊಳ್ಳೋಣ.

 ಪೊಲೀಸ್ ಸಮವಸ್ತ್ರದ ನಿಯಮಗಳನ್ನು ಬದಲಿಸಿತ್ತು

ಪೊಲೀಸ್ ಸಮವಸ್ತ್ರದ ನಿಯಮಗಳನ್ನು ಬದಲಿಸಿತ್ತು

9. ಐರ್ಲೆಂಡ್ ಸರ್ಕಾರವು ಹಿಜಾಬ್ ಮತ್ತು ಸಿಖ್ ಪೇಟಕ್ಕೆ ಅನುಮತಿ ನೀಡುವ ಸಲುವಾಗಿ, ಪೊಲೀಸ್ ಸಮವಸ್ತ್ರದ ನಿಯಮಗಳನ್ನು ಬದಲಿಸಿತ್ತು ಮತ್ತು ಮೋದಿ ಸರ್ಕಾರ ಅದನ್ನು ಸ್ವಾಗತಿಸಿತ್ತು. ಹಾಗಾದರೆ ಇಲ್ಲೊಂದು ಮತ್ತು ಅಲ್ಲೊಂದು ಏಕೆ ಎರಡು ಮಾನದಂಡಗಳು?

10. ಹಿಜಾಬ್ - ಮೊದಲನೆಯದಾಗಿ, ಅಸ್ತಿತ್ವದಲ್ಲಿಲ್ಲದ ಸಮಸ್ಯೆಯನ್ನು ಸರ್ಕಾರವು ಸೃಷ್ಟಿಸಿತು. ಮಕ್ಕಳು ಹಿಜಾಬ್, ಬಳೆ ಇತ್ಯಾದಿ ಧರಿಸಿ ಶಾಲೆಗೆ ಹೋಗುತ್ತಿದ್ದರು. ಎರಡನೆಯದಾಗಿ, ಹಿಂಸಾಚಾರವನ್ನು ಪ್ರಚೋದಿಸಲಾಯಿತು ಮತ್ತು ಕೇಸರಿ ಪೇಟಗಳೊಂದಿಗೆ ಪ್ರತಿಭಟನೆಗಳನ್ನು ನಡೆಸಲಾಯಿತು.

11. ಕೇಸರಿ ಪೇಟಗಳ ಅಗತ್ಯವಿದೆಯೇ ಅಥವಾ ಹಿಜಾಬ್‌ಗೆ ಕೌಂಟರ್ ನೀಡುವ ಸಲುವಾಗಿಯೇ? ಮಾಧ್ಯಮಗಳು, ಪೊಲೀಸರು ಮತ್ತು ಇತರರು ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಕಿರುಕುಳ ನೀಡುವುದನ್ನು ನೋಡಿದ್ದೇವೆ. ಮಕ್ಕಳು ಪರೀಕ್ಷೆ ಬರೆಯುವುದನ್ನು ಸಹ ನಿಷೇಧಿಸಲಾಗಿದೆ. ಇದು ನಾಗರಿಕ ಹಕ್ಕುಗಳ ಉಲ್ಲಂಘನೆ.

12. ಒಂದು ಧರ್ಮವನ್ನು ಗುರಿಯಾಗಿಸಿ ಮತ್ತದರ ಆಚರಣೆಯನ್ನು ನಿಷೇಧಿಸಲಾಗಿದೆ. ಆರ್ಟಿಕಲ್ 15ರ ಪ್ರಕಾರ, ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಮಾಡುವಂತಿಲ್ಲ. ಈ ತೀರ್ಪು ಇದರ ಉಲ್ಲಂಘನೆಯಲ್ಲವೇ? ಕರ್ನಾಟಕ ನ್ಯಾಯಾಲಯ, ಮಕ್ಕಳು ಶಿಕ್ಷಣ ಮತ್ತು ಅಲ್ಲಾನ ಆಜ್ಞೆಗಳ ನಡುವೆ, ಯಾವುದಾದರೂ ಒಂದನ್ನು ಆಯ್ಕೆ ಮಾಡಲು ಒತ್ತಾಯಿಸಿದಂತಿದೆ.

 ಹಿಜಾಬ್ ಧರಿಸಿ ಬರುವ ಮಹಿಳೆಯರಿಗೆ ತೊಂದರೆ ಕೊಡುವುದಿಲ್ಲ ಎಂದು ಭಾವಿಸಿದ್ದೇನೆ

ಹಿಜಾಬ್ ಧರಿಸಿ ಬರುವ ಮಹಿಳೆಯರಿಗೆ ತೊಂದರೆ ಕೊಡುವುದಿಲ್ಲ ಎಂದು ಭಾವಿಸಿದ್ದೇನೆ

13. ಮುಸ್ಲಿಮರಿಗೆ ಶಿಕ್ಷಣ ಪಡೆಯುವುದು ಅಲ್ಲಾಹನ ಆಜ್ಞೆ ಮತ್ತು ಅವನ ಕಟ್ಟುಪಾಡುಗಳನ್ನು ಅನುಸರಿಸ ಬೇಕಾಗುತ್ತದೆ. ಈಗ ಧಾರ್ಮಿಕ ನಂಬಿಕೆಯ ವಿಚಾರದಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂದು ಸರ್ಕಾರ ಹುಡುಗಿಯರಿಗೇ ಆಯ್ಕೆ ಮಾಡಲು ಒತ್ತಾಯಿಸುತ್ತಿದೆ. ಇದುವರೆಗೆ ನ್ಯಾಯಾಂಗವು, ಗಡ್ಡ ಬಿಟ್ಟುಕೊಳ್ಳುವುದು ಅಗತ್ಯವಿಲ್ಲ ಎಂದಿತ್ತು, ಈ ಸಾಲಿಗೆ ಈಗ ಹಿಜಾಬ್.

14. ನ್ಯಾಯಾಲಯದ ಈ ತೀರ್ಪು ಹಿಜಾಬ್ ಧರಿಸಿ ಬರುವ ಮಹಿಳೆಯರಿಗೆ ತೊಂದರೆ ಕೊಡುವುದಿಲ್ಲ ಎಂದು ಭಾವಿಸಿದ್ದೇನೆ. ಬ್ಯಾಂಕ್‌, ಆಸ್ಪತ್ರೆಗಳು, ಸಾರ್ವಜನಿಕ ಸಾರಿಗೆಗಳಲ್ಲಿ ಹಿಜಾಬ್ ಧರಿಸಿದ ಮಹಿಳೆಯರಿಗೆ ತೊಂದರೆಯಾದರೆ ಈ ತೀರ್ಪಿನಿಂದ ಬಹಳ ನಿರಾಶೆ ಪಡುವಂತಾಗುತ್ತದೆ.

15. ನ್ಯಾಯಾಲಯದ ಪೂರ್ಣ ಆದೇಶದ ಪ್ರತಿ ಲಭ್ಯವಾದಾಗ ಈ ಬಗ್ಗೆ ಇನ್ನಷ್ಟು ಜನರು ಪ್ರತಿಕ್ರಿಯೆಯನ್ನು ನೀಡಬಹುದು. ಸದ್ಯಕ್ಕೆ, ಇದು ನ್ಯಾಯಾಲಯದ ಆದೇಶದ ಪ್ರತಿಕ್ರಿಯೆಯಾಗಿದೆ.

English summary
AIMIM Leader And MP Asaduddin Owaisi Series Of Tweet On Karnataka High Court Verdict on Hijab. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X