ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಲಾಕ್ ಡೌನ್ ಸುಳಿವು; ನಗರ ಬಿಟ್ಟು ಹೊರಟ ಜನರು

|
Google Oneindia Kannada News

ಹೈದರಾಬಾದ್, ಜುಲೈ 02 : ಕೊರೊನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಲು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಹೈದರಾಬಾದ್ ನಗರದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿಗೊಳಿಸುವ ಸುಳಿವು ನೀಡಿದ್ದಾರೆ. ಇದರಿಂದಾಗಿ ಜನರು ಊರುಗಳತ್ತ ಮುಖ ಮಾಡುತ್ತಿದ್ದಾರೆ.

Recommended Video

Facebook brings a new Update to reduce sharing of Fake news | Oneindia Kannada

ಹೈದರಾಬಾದ್ ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 13,422. ಬುಧವಾರ ಒಂದೇ ದಿನ 881 ಹೊಸ ಪ್ರಕರಣ ದಾಖಲಾಗಿದೆ. ಗ್ರೇಟರ್ ಹೈದರಾಬಾದ್ ಮುನಿಸಿಪಲ್ ಕಾರ್ಪೋರೇಶನ್ (ಜಿಎಚ್ಎಂಸಿ) ವ್ಯಾಪ್ತಿಯಲ್ಲಿ ಮತ್ತೆ ಲಾಕ್ ಡೌನ್ ಜಾರಿಗೊಳ್ಳುವ ಸಾಧ್ಯತೆ ಇದೆ.

ಮತ್ತೆ 15 ದಿನ ಸಂಪೂರ್ಣ ಲಾಕ್ ಡೌನ್; ಸುಳಿವು ಕೊಟ್ಟ ಸಿಎಂ ಮತ್ತೆ 15 ದಿನ ಸಂಪೂರ್ಣ ಲಾಕ್ ಡೌನ್; ಸುಳಿವು ಕೊಟ್ಟ ಸಿಎಂ

ಜೂನ್ 28ರಂದು ಹೈದರಾಬಾದ್ ನಗರದ ಕೊರೊನಾ ಪರಿಸ್ಥಿತಿ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದ ಕೆ. ಚಂದ್ರಶೇಖರರಾವ್ ಮತ್ತೊಮ್ಮೆ ಲಾಕ್ ಡೌನ್ ಜಾರಿಗೊಳಿಸುವ ಸುಳಿವು ನೀಡಿದ್ದರು. ಅನ್ ಲಾಕ್ ಜಾರಿಗೊಂಡ ಬಳಿಕ ನಗರದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಭೆಯಲ್ಲಿ ಚರ್ಚೆ ನಡೆದಿತ್ತು.

ಹೈದರಾಬಾದ್; ಗೋಕುಲ್ ಚಾಟ್ ಮಾಲೀಕನಿಗೆ ಕೊರೊನಾ ಸೋಂಕು ಹೈದರಾಬಾದ್; ಗೋಕುಲ್ ಚಾಟ್ ಮಾಲೀಕನಿಗೆ ಕೊರೊನಾ ಸೋಂಕು

ಮತ್ತೊಮ್ಮೆ ಲಾಕ್ ಡೌನ್ ಜಾರಿಗೊಂಡರೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಜನರು ಊರುಗಳತ್ತ ಪ್ರಯಾಣ ಬೆಳೆಸುತ್ತಿದ್ದಾರೆ. ತೆಲಂಗಾಣದ ವಿವಿಧ ಜಿಲ್ಲೆ ಮತ್ತು ಆಂಧ್ರಪ್ರದೇಶದಕ್ಕೆ ಜನರು ತೆರಳುತ್ತಿದ್ದಾರೆ.

ವೈರಲ್ ಆದ ಕೊರೊನಾ ಸೋಂಕಿತನ ಕೊನೆ ಕ್ಷಣದ ವಿಡಿಯೋ ವೈರಲ್ ಆದ ಕೊರೊನಾ ಸೋಂಕಿತನ ಕೊನೆ ಕ್ಷಣದ ವಿಡಿಯೋ

ಆಂಧ್ರಪ್ರದೇಶ ಹೋಗಲು ಪಾಸ್ ಬೇಕು

ಆಂಧ್ರಪ್ರದೇಶ ಹೋಗಲು ಪಾಸ್ ಬೇಕು

ಹಲವು ಜನರು ಹೈದರಾಬಾದ್ ನಗರ ಬಿಟ್ಟು ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ತೆಲಂಗಾಣದ ವಿವಿಧ ರಾಜ್ಯಕ್ಕೆ ಸಂಚಾರ ನಡೆಸಬಹುದು. ಆದರೆ, ಆಂಧ್ರಪ್ರದೇಶಕ್ಕೆ ಹೋಗಲು ಪಾಸು ಪಡೆಯುವುದು ಅಗತ್ಯವಾಗಿದೆ.

ಹೆದ್ದಾರಿಯಲ್ಲಿ ವಾಹನ ದಟ್ಟಣೆ

ಹೆದ್ದಾರಿಯಲ್ಲಿ ವಾಹನ ದಟ್ಟಣೆ

ಬುಧವಾರ ವಿಜಯವಾಡ-ಹೈದರಾಬಾದ್ ರಾಷ್ಟ್ರೀ ಹೆದ್ದಾರಿಯಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಆಂಧ್ರಪ್ರದೇಶಕ್ಕೆ ಬರುವ ವಾಹನಗಳಲ್ಲಿರುವ ಜನರ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ಆದ್ದರಿಂದ, ಸಂಚಾರ ದಟ್ಟಣೆ ಕಡಿಮೆಯಾಗಲು ಗಂಟೆಗಳ ಕಾಲ ಬೇಕಾಯಿತು.

ಎಲ್ಲರೂ ಪಾಸು ಪಡೆಯಬೇಕು

ಎಲ್ಲರೂ ಪಾಸು ಪಡೆಯಬೇಕು

ಕೇಂದ್ರ ಗೃಹ ಇಲಾಖೆ ಜೂನ್ 1ರಿಂದ ಅಂತರರಾಜ್ಯ ಸಂಚಾರಕ್ಕೆ ಪಾಸುಗಳ ಅಗತ್ಯವಿಲ್ಲ ಎಂದು ಹೇಳಿತ್ತು. ಆದರೆ, ಆಂಧ್ರಪ್ರದೇಶ ಸರ್ಕಾರ ಜುಲೈ 1ರಿಂದ ಎಲ್ಲಾ ರಾಜ್ಯಗಳಿಂದ ಆಂಧ್ರಕ್ಕೆ ಬರುವವರಿಗೆ ಪಾಸು ಕಡ್ಡಾಯಗೊಳಿಸಿದೆ.

ರಾತ್ರಿ ಕರ್ಫ್ಯೂ ಜಾರಿಯಾಗಿದೆ

ರಾತ್ರಿ ಕರ್ಫ್ಯೂ ಜಾರಿಯಾಗಿದೆ

ಹೈದರಾಬಾದ್ ನಗರಲ್ಲಿ ರಾತ್ರಿ 10 ರಿಂದ ಬೆಳಗ್ಗೆ 5ರ ತನಕ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ. ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಮತ್ತೊಂದು ಲಾಕ್ ಡೌನ್‌ಗೆ ಸಿದ್ದವಾಗುವಂತೆ ಸೂಚನೆ ಕೊಟ್ಟಿದ್ದು, ಜನರು ನಗರ ಬಿಡಲು ಕಾರಣವಾಗಿದೆ.

English summary
Telangana chief minister K. Chandrasekhar Rao hinted 15 days of full lock down in Hyderabad city. People started to leave for their native.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X