ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸದ ತೇಜಸ್ವಿ ವಿರುದ್ಧ ದೂರು ದಾಖಲಿಸಿದ ಒಸ್ಮಾನಿಯಾ ಯೂನಿವರ್ಸಿಟಿ

|
Google Oneindia Kannada News

ಹೈದರಾಬಾದ್, ನವೆಂಬರ್ 26: ಹೈದರಾಬಾದಿನ ಒಸ್ಮಾನಿಯಾ ವಿಶ್ವವಿದ್ಯಾಲವನ್ನು ಪೂರ್ವಾನುಮತಿ ಇಲ್ಲದೆ ಪ್ರವೇಶಿಸಿದ್ದಕ್ಕೆ ಸಂಸದ ತೇಜಸ್ವಿ ಸೂರ್ಯ ಅವರ ಮೇಲೆ ವಿಶ್ವವಿದ್ಯಾಲಯ ಪೊಲೀಸ್ ಪ್ರಕರಣ ದಾಖಲಿಸಿದೆ.

ಭಾರತೀಯ ದಂಡಸಂಹಿತೆ ಸೆಕ್ಷನ್ 447ರಡಿಯಲ್ಲಿ ಅಪರಾಧ ಅತಿಕ್ರಮಣ ಕೇಸನ್ನು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ನೀಡಿರುವ ದೂರಿನ ಆಧಾರದ ಮೇಲೆ ದಾಖಲಿಸಲಾಗಿದೆ.

ಪ್ರಧಾನಿ ಮೋದಿಯನ್ನು ಕರೆದುಕೊಂಡು ಬಂದು ಗೆಲ್ಲಿಸಿ: ಓವೈಸಿ ಸವಾಲುಪ್ರಧಾನಿ ಮೋದಿಯನ್ನು ಕರೆದುಕೊಂಡು ಬಂದು ಗೆಲ್ಲಿಸಿ: ಓವೈಸಿ ಸವಾಲು

ನಂತರ ತೇಜಸ್ವಿ ಸೂರ್ಯ ಕಲಾ ಕಾಲೇಜಿನಲ್ಲಿ ಭಾಷಣ ಮಾಡಿದ್ದರು.ವಿಶ್ವವಿದ್ಯಾಲಯ ರೆಜಿಸ್ಟ್ರಾರ್ ಡಾ ಸಿ ಎಚ್ ಗೋಪಾಲ್ ರೆಡ್ಡಿ, ಕಾರ್ಯಕ್ರಮ ನಡೆಸಲು ಅವರಿಗೆ ಅನುಮತಿಯಿರಲಿಲ್ಲ. ವಿಶ್ವವಿದ್ಯಾಲಯದಲ್ಲಿ ಇಂತಹ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಉಪ ಕುಲಪತಿಗಳ ಆದೇಶದ ಮೇರೆಗೆ ನಾವು ಪೊಲೀಸರಿಗೆ ದೂರು ನೀಡಿದ್ದೇವೆ ಎಂದರು.

After Hyderabad University Visit BJPs Tejasvi Surya Charged With Trespass

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆ ಸಂಬಂಧ ಪಕ್ಷದ ಪ್ರಚಾರದಲ್ಲಿ ಭಾಗವಹಿಸಲು ಹೈದರಾಬಾದ್ ಗೆ ಬಂದಿದ್ದ ಸಂಸದ ತೇಜಸ್ವಿ ಸೂರ್ಯ, ವಿಶ್ವವಿದ್ಯಾಲಯದ ಎನ್ ಸಿಸಿ ಗೇಟ್ ಬಳಿ ಹಾಕಲಾಗಿದ್ದ ತಡೆಯನ್ನು ತಮ್ಮ ಬೆಂಬಲಿಗರೊಂದಿಗೆ ಭೇದಿಸಿ ಒಳನುಗ್ಗಿದ್ದಾರೆ ಎಂದು ಆಡಳಿತ ಮಂಡಳಿ ಆರೋಪಿಸಿದೆ.

ಪಶ್ಚಿಮ ಬಂಗಾಳದ ನಂತರ ಹೈದರಾಬಾದ್ ಗೆ ಭೇಟಿ ನೀಡಿರುವ ಬಿಜೆಪಿ ಯುವ ಮೋರ್ಚಾ ರಾಷ್ಟ್ರಾಧ್ಯಕ್ಷ ತೇಜಸ್ವಿ ಸೂರ್ಯ ಅಸಾದುದ್ದೀನ್ ಓವೈಸಿ ವಿರುದ್ಧ ಗುಡುಗಿದ್ದಾರೆ.

ಹೈದರಾಬಾದ್ ನ ಸ್ಥಳೀಯ ಸಂಸ್ಥೆ ಚುನಾವಣೆಗೆ ಪ್ರಚಾರದ ಭಾಗವಾಗಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿರುವ ತೇಜಸ್ವಿ ಸೂರ್ಯ, ಓವೈಸಿಯನ್ನು ಮೊಹಮ್ಮದ್ ಅಲಿ ಜಿನ್ನಾ ಅವತಾರವೆಂದು ಹೇಳಿದ್ದು, ಓವೈಸಿಗೆ ಹಾಕುವ ಒಂದೊಂದು ಮತವೂ ಭಾರತದ ವಿರುದ್ಧವಾಗುತ್ತದೆ ಎಂದು ಮತದಾರರನ್ನು ಎಚ್ಚರಿಸಿದ್ದರು.

ಓವೈಸಿ ಸಹೋದರರ ವಿರುದ್ಧ ವಿಭಜಕ ಮತ್ತು ಕೋಮು ರಾಜಕಾರಣ ಮಾಡುತ್ತಿದ್ದಾರೆ. ಅಭಿವೃದ್ಧಿಗೆ ಅವಕಾಶ ನೀಡದೇ ರೋಹಿಂಗ್ಯ ಮುಸ್ಲಿರು ಒಳನುಗ್ಗುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದು ತೇಜಸ್ವಿ ಆರೋಪಿಸಿದ್ದರು.

English summary
BJP MP Tejasvi Surya has been charged in a police case for entering Hyderabad's Osmania University without permission earlier this week, in his campaign for the city civic polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X