ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

GHMC ಚುನಾವಣೆ: ಕೊವಿಡ್ ಭೀತಿಯಿಂದಾಗಿ ಕೇವಲ ಶೇ.35ರಷ್ಟು ಮತದಾನ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 1: ರಾಷ್ಟ್ರರಾಜಕಾರಣಿಗಳ ಪ್ರಚಾರದಿಂದ ಸುದ್ದಿಯಾಗಿದ್ದ ಹೈದರಾಬಾದ್ ಮಹಾನಗರಪಾಲಿಕೆ ಚುನಾವಣೆಯಲ್ಲಿ ಕೇವಲ ಶೇ.35ರಷ್ಟು ಮತದಾನವಾಗಿದೆ.

ಮಂಗಳವಾರ ಮತದಾನ ಪ್ರಕ್ರಿಯೆಯಲ್ಲಿ 74 ಲಕ್ಷ ಮಂದಿ ಮತ ಚಲಾಯಿಸಿದ್ದಾರೆ, ಆದರೆ 69 ಕ್ಷೇತ್ರದಲ್ಲಿ ಮರು ಮತದಾನಕ್ಕೆ ಸೂಚಿಸಲಾಗಿದೆ. ಮತದಾನ ಚೀಟಿಯಲ್ಲಿ ಸಿಪಿಐ ಬದಲು ಸಿಪಿಐಎಂ ಚಿಹ್ನೆ ಮುದ್ರಣ ಮಾಡಿದ್ದರಿಂದ 69 ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶಿಸಲಾಗಿದೆ.

ಮತದಾನದ ನಡುವೆ ಬಿಜೆಪಿ ಅಧ್ಯಕ್ಷರ ಹತ್ಯೆ ಯತ್ನದ ಗಾಳಿಸುದ್ದಿ!ಮತದಾನದ ನಡುವೆ ಬಿಜೆಪಿ ಅಧ್ಯಕ್ಷರ ಹತ್ಯೆ ಯತ್ನದ ಗಾಳಿಸುದ್ದಿ!

ಡಿಸೆಂಬರ್ 3ರಂದು ಮರು ಮತದಾನ ನಡೆಯಲಿದೆ. ಇವಿಎಂ ಬದಲು ಮತಚೀಟಿಯಲ್ಲೇ 74.44 ಲಕ್ಷ ಮಂದಿ ಈಗ ಮತದಾನ ಮಾಡಿದ್ದಾರೆ.

After High Decibel Campaigning, 35 Percent Voter Turnout For GHMC Polls

ಕೇಂದ್ರ ಸಚಿವ ಕಿಶನ್ ರೆಡ್ಡಿ, ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮಾರಾವ್, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ , ಚಿತ್ರನಟ ಹಾಗೂ ರಾಜಕಾರಣಿ ಚಿರಂಜೀವಿ ಸೇರಿ ಮಂಗಳವಾರ ಮತ ಚಲಾಯಿಸಿದರು.

ಟಿಆರ್ಎಸ್ , ಬಿಜೆಪಿ , ಕಾಂಗ್ರೆಸ್ ಸೇರಿ ಇತರೆ ಪಕ್ಷಗಳಿಂದ 1122 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಕೊರೊನಾ ಸೋಂಕಿತರ ಮತದಾನಕ್ಕಾಗಿಯೇ ವಿಶೇಷ ಮತದಾನ ವ್ಯವಸ್ಥೆ ಮಾಡಲಾಗಿತ್ತು.

ಕೊವಿಡ್ ಭೀತಿಯಿಂದ ಸಾಕಷ್ಟು ಮಂದಿ ಮತದಾನಕ್ಕೆ ಆಗಮಿಸಿಲ್ಲ, ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿಯೇ ಚುನಾವಣೆಯನ್ನು ಮೊದಲೇ ನಡೆಸಿದೆ, ಫೆಬ್ರವರಿಯಲ್ಲಿ ನಡೆಸಬಹುದಾಗಿತ್ತು ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ತೆಲಂಗಾಣ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಮುಖ್ಯಮಂತ್ರ ಯೋಗಿ ಆದಿತ್ಯನಾಥ್ ಸೇರಿ ಸಾಕಷ್ಟು ಮುಂಚೂಣಿ ನಾಯಕರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಗ್ರೇಟರ್ ಹೈದರಾಬಾದ್ ಚುನಾವಣೆ: ಅಮಿತ್ ಶಾ, ನಡ್ಡಾಗೆ ಸಿಕ್ಕ ಸ್ಪಷ್ಟ ಮುನ್ಸೂಚನೆಗ್ರೇಟರ್ ಹೈದರಾಬಾದ್ ಚುನಾವಣೆ: ಅಮಿತ್ ಶಾ, ನಡ್ಡಾಗೆ ಸಿಕ್ಕ ಸ್ಪಷ್ಟ ಮುನ್ಸೂಚನೆ

ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರ, ಆರೋಪ-ಪ್ರತ್ಯಾರೋಪ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಗೆ ಏನು ಮಾಡಲಿದೆ ಎಂದೆಲ್ಲ ಪ್ರಚಾರದ ವೇಳೆ ಹೇಳಿಕೊಂಡಿದ್ದರು.

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ತೆಲಂಗಾಣ ಸಚಿವ ಹಾಗೂ ಟಿಆರ್ ಎಸ್ ನಾಯಕ ಕೆ ಟಿ ರಾಮ ರಾವ್ ಮೊದಲಾದವರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ.

English summary
A high-decibel, no holds barred campaign involving a battery of BJP leaders such as Amit Shah versus the ruling TRS for the Greater Hyderabad Municipal Corporation (GHMC) election was followed by a low turnout polling on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X