ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಟ ಪವನ್ ಕಲ್ಯಾಣ್ ಪಾರ್ಟಿ ಹೆಸರು ಬಹಿರಂಗ

By Mahesh
|
Google Oneindia Kannada News

ಹೈದರಾಬಾದ್, ಮಾ.5: ಅತ್ತ ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗ ಲೋಕಸಭೆ ಚುನಾವಣೆ 2014 ವೇಳಾಪಟ್ಟಿ ಪ್ರಕಟಿಸುತ್ತಿದ್ದಂತೆ ಇತ್ತ ಆಂಧ್ರಪ್ರದೇಶದಲ್ಲಿ ಹೊಸ ಪಕ್ಷ ಉದಯದ ಸುದ್ದಿ ಕಿಚ್ಚು ಹಬ್ಬಿಸಿದೆ. ಜನಪ್ರಿಯ ನಟ ಚಿರಂಜೀವಿ ಹೊಸ ಪಕ್ಷ ಕಟ್ಟಿ ನಂತರ ಕೇಂದ್ರ ಸಚಿವರಾಗಿ ಈಗ ಮುಖ್ಯಮಂತ್ರಿಯಾಗುವ ತವಕದಲ್ಲಿರುವ ಹೊತ್ತಿನಲ್ಲಿ ಅವರ 'ತಮ್ಮುಡು' ಪವನ್ ಕಲ್ಯಾಣ್ ಅವರ ರಾಜಕೀಯ ಪ್ರವೇಶಕ್ಕೆ ವೇದಿಕೆ ಸಿದ್ಧವಾಗಿದೆ.

ತೆಲುಗು ಚಿತ್ರರಂಗದಲ್ಲಿ ಪವರ್ ಸ್ಟಾರ್ ಎಂದು ಕರೆಸಿಕೊಳ್ಳುವ ಪವನ್ ಕಲ್ಯಾಣ್ ಅವರು ರಾಜಕೀಯ ರಂಗಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಹೊಸ ಪಕ್ಷವನ್ನು ಸದ್ಯದಲ್ಲೇ ಘೋಷಿಸುತ್ತಿದ್ದಾರೆ. ಹೊಸ ಪಕ್ಷಕ್ಕೆ ಹೆಸರನ್ನು ಹುಡುಕಲಾಗಿದೆ ಎಂದು ನಮ್ಮ ತೆಲುಗು ಬಾತ್ಮಿದಾರರು ಹೇಳುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಹೊಸ ಪಕ್ಷ ಸ್ಪರ್ಧಿಸುವುದೋ ಇಲ್ಲವೋ ಗೊತ್ತಿಲ್ಲ ಆದರೆ, ಇದು ರಾಷ್ಟ್ರೀಯ ಪಕ್ಷವೊಂದರ ಹಿಂಬಾಗಿಲ ಪ್ರವೇಶ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

Pawan Kalyan's New Political Party Name Revealed

ಸದ್ಯಕ್ಕೆ ಪವನ್ ಕಲ್ಯಾಣ್ ಅವರ ರಾಜಕೀಯ ಎಂಟ್ರಿ, ಹೊಸ ಪಕ್ಷದ ಹೆಸರು ಮುಂತಾದ ವಿವರಗಳ ಬಗ್ಗೆ ಮಾರ್ಚ್ ಎರಡನೇ ವಾರದ ತನಕ ಕಾಯಬೇಕಾಗಿದೆ. ಮಾರ್ಚ್ ಎರಡನೇ-ಮೂರನೇ ವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ವಿವರ ನೀಡುವುದಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ. ಹೊಸ ಪಕ್ಷಕ್ಕೆ ಎರಡು ಹೆಸರುಗಳನ್ನು ಫಿಕ್ಸ್ ಮಾಡಲಾಗಿದೆ ಎಂದು ಹೈದರಾಬಾದಿನ ಫಿಲಂ ನಗರ್ ಮಂದಿ ಹೇಳಿದ್ದಾರೆ.

ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ ಗಣಿಗಾರಿಕೆ ಭ್ರಷ್ಟ ಅಧಿಕಾರಿಗಳಿಗೆ ಸಿಂಹಸ್ವಪ್ನವಾಗಿರುವ ಸಿಬಿಐ ಮಾಜಿ ಜಂಟಿ ನಿರ್ದೇಶಕ ಲಕ್ಷ್ಮಿ ನಾರಾಯಣ, ಚಿತ್ರ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್, ಈನಾಡು ಸಮೂಹದ ಚೇರ್ಮನ್ ರಾಮೋಜಿ ರಾವ್ ಅವರು ಪವನ್ ಕಲ್ಯಾಣ್ ಅವರ ಬೆನ್ನ ಹಿಂದೆ ನಿಂತಿದ್ದಾರೆ. ಪವನ್ ಕಲ್ಯಾಣ್ ಹೊಸ ಪಕ್ಷಕ್ಕೆ ಪವನ್ ' ರಿಪಬ್ಲಿಕನ್ ಪಾರ್ಟಿ" ಅಥವಾ 'ಯುವ ರಾಜ್ಯಂ' ಹೆಸರಿಡಲು ಚಿಂತನೆ ನಡೆಸಲಾಗುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ಅವರು ಪಕ್ಷದ ಸಮಸ್ತ ಉಸ್ತುವಾರಿ ವಹಿಸಿಕೊಳ್ಳುವ ಸಾಧ್ಯತೆಯಿದೆ. ಹೊಸ ಪಕ್ಷದ ಮಿಕ್ಕ ವಿವರಗಳು ಮಾರ್ಚ್ 9 ಅಥವಾ 11 ರಂದು ಪ್ರಕಟಗೊಳ್ಳುವ ನಿರೀಕ್ಷೆಯಿದೆ.

ಇನ್ನೊಂದು ಮೂಲಗಳ ಪ್ರಕಾರ ಪವನ್ ಕಲ್ಯಾಣ್ ಅವರ ಪಕ್ಷಕ್ಕೆ ತೆಲುಗು ದೇಶಂ ಪಕ್ಷದ ಬಾಹ್ಯ ಬೆಂಬಲ ಸಿಗಲಿದೆಯಂತೆ. ಹೀಗಾಗಿ ಬಿಜೆಪಿ ಕೂಡಾ ಪವನ್ ಪಕ್ಷಕ್ಕೆ ಬಹುಪರಾಕ್ ಹೇಳುವ ಸಾಧ್ಯತೆ ನಿಚ್ಚಳವಾಗಿದೆ. ಅರೇ ಇದು ಹೇಗೆ ಸಾಧ್ಯ? ಅಣ್ಣ ಚಿರಂಜೀವಿ ಒಡೆದು ಹೋಗಿರುವ ರಾಜ್ಯಕ್ಕೆ ಅಧಿಪತಿಯಾಗುವ ಹೊತ್ತಿಗೆ ಸಮಗ್ರ ಆಂಧ್ರದ ಪ್ರತಿನಿಧಿಯಾಗಿ ಪವನ್ ಜನರ ಮುಂದೆ ನಿಲ್ಲಲು ತಯಾರಿ ನಡೆಸಿದ್ದಾರೆ. ಅಲ್ಲದೆ ಅಣ್ಣನ ವಿರುದ್ಧ ನಿಲ್ಲುತ್ತಾರಾ? ಎಂಬ ಪ್ರಶ್ನೆಯೂ ಎದ್ದಿದೆ. ಇದರ ಜತೆಗೆ ಲೋಕ ಸತ್ತಾ ಪಕ್ಷದ ನಾಯಕ ಜೆಪಿ ಅವರ ಬಗ್ಗೆ ಅಭಿಮಾನವುಳ್ಳ ಪವನ್ ಅವರು ಅವರ ನೆರವನ್ನು ಕೇಳುವ ಸಾಧ್ಯತೆಯಿದೆ. ಒಟ್ಟಾರೆ ಆಂಧ್ರ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಯಾಗಲಿದೆ. ಪವನ್ ಪಕ್ಷ ಪ್ರಜಾರಾಜ್ಯಂ ಹವಾ ಧೂಳಿಪಟ ಮಾಡಲಿದೆ ಎಂಬ ಮಾತುಗಳು ಕೇಳಿಬಂದಿದೆ.

English summary
Several speculations have been doing rounds about Power Star Pawan Kalyan's new political entry and his new party ever since he released a press statement saying that he would answer all questions related to his political career in the second week of March.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X