ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ಖಾತೆ ಸ್ತಂಭನ: ಜಿಎಸ್ಟಿ ಅಧಿಕಾರಿಗಳಿಗೆ ನೋಟಿಸ್ ಕೊಟ್ಟ ನಟ ಮಹೇಶ್ ಬಾಬು

|
Google Oneindia Kannada News

ಹೈದರಾಬಾದ್, ಡಿಸೆಂಬರ್ 29: ತೆಲುಗಿನ ಸೂಪರ್ ಸ್ಟಾರ್ ಮಹೇಶ್ ಬಾಬು ಅವರಿಗೆ ಸೇರಿದ ಬ್ಯಾಂಕ್ ಖಾತೆಯನ್ನು ಸ್ತಂಭನಗೊಳಿಸಲಾಗಿದ್ದು, ಖಾತೆ ಸದ್ಯ ತೆರಿಗೆ ಇಲಾಖೆ ಹಿಡಿತದಲ್ಲಿದೆ. ಯಾವುದೇ ನೋಟಿಸ್ ನೀಡದೆ ಬ್ಯಾಂಕ್ ಖಾತೆ ವಶಕ್ಕೆ ಪಡೆದ ಜಿಎಸ್ಟಿ ಅಧಿಕಾರಿಗಳ ವಿರುದ್ಧ ತಿರುಗಿಬಿದ್ದಿರುವ ನಟ ಮಹೇಶ್, ತೆರಿಗೆ ಇಲಾಖೆ ಕ್ರಮವನ್ನು ಪ್ರಶ್ನಿಸಿ ಲೀಗಲ್ ನೋಟಿಸ್ ಕಳಿಸಿದ್ದಾರೆ.

2007-08ರ ಆರ್ಥಿಕ ವರ್ಷದಲ್ಲಿ ಕೆಲವು ಉತ್ಪನ್ನಗಳ ಬ್ರ್ಯಾಂಡ್ ರಾಯಭಾರಿಯಾಗಿದ್ದ ಮಹೇಶ್ ಬಾಬು ಅವರು ಪ್ರಚಾರದ ಜಾಹೀರಾತಿಗಾಗಿ ಗಳಿಸಿದ ಮೊತ್ತಕ್ಕೆ ಸೇವಾ ತೆರಿಗೆ ಪಾವತಿಸಿಲ್ಲ ಎಂದು ಹೈದರಾಬಾದಿನ ಜಿಎಸ್ಟಿ ಆಯುಕ್ತರು ಹೇಳಿದ್ದಾರೆ.

Actor Mahesh Babus Bank Accounts Frozen Over Tax Dues

ಮಹೇಶ್ ಬಾಬು ಅವರು ಒಟ್ಟು 18.5 ಲಕ್ಷ ರು ಪಾವತಿ ಮಾಡಿಲ್ಲ, ಒಟ್ಟಾರೆ, ತೆರಿಗೆ, ಬಡ್ಡಿ ಎಲ್ಲವೂ ಸೇರಿ ಸುಮಾರು 73.5 ಲಕ್ಷ ರು ಬಾಕಿ ಪಾವತಿ ಉಳಿಸಿಕೊಂಡಿದ್ದರು. ಹೀಗಾಗಿ, ಅವರಿಗೆ ಸೇರಿರುವ ಆಕ್ಸಿಸ್ ಬ್ಯಾಂಕ್ ಹಾಗೂ ಐಸಿಐಸಿಐ ಬ್ಯಾಂಕ್ ಗಳನ್ನು ಸ್ತಂಭನಗೊಳಿಸಲಾಗಿದೆ ಎಂದು ಜಿಎಸ್ಟಿ ಅಧಿಕಾರಿಗಳು ಹೇಳಿದ್ದಾರೆ.

ಬ್ಯಾಂಕ್ ಖಾತೆ ವಶಕ್ಕೆ ಪಡೆಯಲಾಗಿದ್ದು, ಬಾಕಿ ಮೊತ್ತ ಪಡೆಯುವ ಪ್ರಕ್ರಿಯೆ ಆರಂಭವಾಗಿದೆ. ಆಕ್ಸಿಸ್ ಬ್ಯಾಂಕಿನಿಂದ 42 ಲಕ್ಷ ರು ಪಡೆಯಲಾಗಿದೆ. ಬಾಕಿ ಮೊತ್ತ ಪಾವತಿಸದಿದ್ದರೆ, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಹಿಂದೆ, ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಭೂ ಹಗರಣವೊಂದಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನ ಸ್ಟಾರ್ ಗಳಾದ ಮಹೇಶ್ ಬಾಬು ಹಾಗೂ ರಾಮಚರಣ್ ತೇಜ ಅವರನ್ನು ಸಿಬಿಐ ವಿಚಾರಣೆ ನಡೆಸಿತ್ತು.

ಎಮ್ಮಾರ್ ಎಂಜಿಎಫ್ ನಿರ್ಮಾಣದ ದೊಡ್ಡ ವಿಲ್ಲಾಗಳನ್ನು ಅತಿ ಕಡಿಮೆ ಬೆಲೆಗೆ ಕೊಂಡುಕೊಂಡ ಆರೋಪ ಈ ನಟರ ಮೇಲಿತ್ತು.

English summary
Goods and Services Tax department on Thursday said it has attached the bank accounts of Telugu superstar Mahesh Babu to recover service tax dues from him. According to a press release issued by the Hyderabad GST Commissionarate, Mahesh Babu has not paid the Service Tax during 2007-08
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X