ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಯ ಜುಮ್ಲಾ ಜೀವಿಗಳೇ ಧಮ್ ಬಿರಿಯಾನಿ, ಇರಾನಿ ಟೀ ಸವಿಯಲು ಮರೆಯಬೇಡಿ

|
Google Oneindia Kannada News

ಹೈದರಾಬಾದ್‌, ಜು.2: ಹೈದರಾಬಾದ್‌ನಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ತೆಲಂಗಾಣ ರಾಜ್ಯದ ಐಟಿ ಸಚಿವ ಕೆಟಿ ರಾಮರಾವ್ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿಗರು ಹೈದರಾಬಾದ್‌ ವಾಸ್ತವ್ಯದ ಸಮಯದಲ್ಲಿ ವಿಶ್ವಪ್ರಸಿದ್ಧ ಹೈದರಾಬಾದಿ ದಮ್ ಬಿರಿಯಾನಿ ಮತ್ತು ಇರಾನಿ ಚಹಾವನ್ನು ಸವಿಯುವಂತೆ ಹೇಳಿದ್ದಾರೆ. ರಾಜ್ಯದ ಆಡಳಿತ ಪಕ್ಷ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾರ್ಯಾಧ್ಯಕ್ಷರೂ ಆಗಿರುವ ಕೆ.ಟಿ. ರಾಮರಾವ್, ಟಿ ಹಬ್ 2.0, ಕಾಳೇಶ್ವರಂ ಯೋಜನೆ, ಪೊಲೀಸ್ ಕಮಾಂಡ್ ಕಂಟ್ರೋಲ್ ಕಟ್ಟಡ ಮತ್ತು ಯಾದಾದ್ರಿ ದೇವಸ್ಥಾನ ಸೇರಿದಂತೆ ರಾಜ್ಯ ಸರ್ಕಾರದ ಕೆಲವು ಪ್ರಮುಖ ಐಕಾನಿಕ್ ಯೋಜನೆಯ ಚಿತ್ರಗಳನ್ನು ಹಂಚಿಕೊಂಡು ತಮ್ಮ ಸಾಧನೆಯನ್ನು ಬಿಜೆಪಿ ಮುಂದೆ ತೋರಿಸಿದ್ದಾರೆ.

ಬಿಜೆಪಿ ನಾಯಕರು ಆ ಸ್ಥಳಗಳಿಗೆ ಭೇಟಿ ನೀಡಿ, ಟಿಪ್ಪಣಿಗಳನ್ನು ತೆಗೆದುಕೊಂಡು ಆಯಾ ರಾಜ್ಯಗಳಲ್ಲಿ ಜಾರಿಗೆ ತರಲು ಪ್ರಯತ್ನಿಸುವಂತೆ ಅವರು ಸೂಚಿಸಿದ್ದಾರೆ. "ಹೈದರಾಬಾದ್‌ನ ಸುಂದರ ನಗರಕ್ಕೆ ತನ್ನ ಕಾರ್ಯಕಾರಿ ಮಂಡಳಿ ಸಭೆಗಾಗಿ ಎಲ್ಲಾ ಜುಮ್ಲಾ ಜೀವಿಗಳಿಗೆ, ವಾಟ್ಸಪ್‌ ವಿಶ್ವವಿದ್ಯಾಲಯಕ್ಕೆ ಸ್ವಾಗತ. ನಮ್ಮ ದಮ್ ಬಿರಿಯಾನಿ ಮತ್ತು ಇರಾನಿ ಚಾಯ್ ಅನ್ನು ಸವಿಸಲು ಮರೆಯಬೇಡಿ. ತೆಲಂಗಾಣದ ಪವರ್‌ಹೌಸ್ ದಯವಿಟ್ಟು ಭೇಟಿ ನೀಡಿ, ಟಿಪ್ಪಣಿಗಳನ್ನು ತೆಗೆದುಕೊಳ್ಳಿ ಮತ್ತು ನಿಮ್ಮ ರಾಜ್ಯಗಳಲ್ಲಿ ಜಾರಿಗೆ ತರಲು ಪ್ರಯತ್ನಿಸಿ ಎಂದು ಕೆ.ಟಿ. ರಾವ್ ಟ್ವೀಟ್ ಮಾಡಿದ್ದಾರೆ.

ಈಗ ತೆಲಂಗಾಣದಲ್ಲೂ ರಾಜಕೀಯ ಬಿಕ್ಕಟ್ಟನ ಆತಂಕಈಗ ತೆಲಂಗಾಣದಲ್ಲೂ ರಾಜಕೀಯ ಬಿಕ್ಕಟ್ಟನ ಆತಂಕ

 ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವಿಕೆ

ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುವಿಕೆ

ಇಂದಿನಿಂದ ಹೈದರಾಬಾದ್‌ನಲ್ಲಿ ಬಿಜೆಪಿ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆಯುತ್ತಿದೆ. ಪಕ್ಷದ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮಂಡಳಿಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಪ್ರಮುಖರು ಭಾಗವಹಿಸುತ್ತಿದ್ದಾರೆ. ಐದು ವರ್ಷಗಳ ನಂತರ ರಾಷ್ಟ್ರ ರಾಜಧಾನಿಯ ಹೊರಗೆ ಬಿಜೆಪಿಯ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಮೊದಲ ಭೌತಿಕ ಸಭೆ ಇದಾಗಿದೆ.

 ಆವೋ-ಧೇಖೋ-ಸೀಖೋ

ಆವೋ-ಧೇಖೋ-ಸೀಖೋ

ಶುಕ್ರವಾರ ಪತ್ರಿಕಾ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ಪುತ್ರ ಕೆ.ಟಿ.ಆರ್, ತೆಲಂಗಾಣ ಮಾದರಿ ಅಭಿವೃದ್ಧಿ, ಅದರ ನೀತಿಗಳು, ಡಬಲ್ ಇಂಜಿನ್‌ನಿಂದ ತೊಂದರೆ ಅನುಭವಿಸುತ್ತಿರುವ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಜಾರಿಗೆ ತರಬಹುದಾದ ಯೋಜನೆಗಳನ್ನು ಪ್ರಧಾನಿ ಮೋದಿ ಅಧ್ಯಯನ ಮಾಡಬೇಕು ಎಂದು ಹೇಳಿದ್ದಾರೆ. ತೆಲಂಗಾಣದಿಂದ ಕಲಿಯಿರಿ. 'ಆವೋ-ಧೇಖೋ-ಸೀಖೋ' ಎಂದು ಅವರು ಮೋದಿಗೆ ಹೇಳಿದರು.

 ತೆಲಂಗಾಣದ ಮೇಲೆ ಬಿಜೆಪಿ ಕಣ್ಣು

ತೆಲಂಗಾಣದ ಮೇಲೆ ಬಿಜೆಪಿ ಕಣ್ಣು

ಎರಡು ದಿನಗಳ ಸಮಾವೇಶವು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ದಕ್ಷಿಣ ರಾಜ್ಯದಲ್ಲಿ ಬಿಜೆಪಿಯ ಮೂರನೇ ಸಮಾವೇಶವಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ತೆಲಂಗಾಣದಲ್ಲಿ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆದ್ದಿತ್ತು. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರವನ್ನು ಪದಚ್ಯುತಗೊಳಿಸಿದ ನಂತರ ವಾಯುವ್ಯ ಪ್ರದೇಶದಲ್ಲಿ ತನ್ನ ಸ್ಥಾನವನ್ನು ಬಲಪಡಿಸಿದ ನಂತರ, ಬಿಜೆಪಿಯು ದಕ್ಷಿಣದ ರಾಜ್ಯಗಳ ಮೇಲೆ ವಿಶೇಷವಾಗಿ ತೆಲಂಗಾಣದ ಮೇಲೆ ಕಣ್ಣಿಟ್ಟಿದೆ.

ಬಿಜೆಪಿಯನ್ನು ಗೇಲಿ ಮಾಡಲು ಬಳಕೆ

ವಾಟ್ದಪ್‌ ವಿಶ್ವವಿದ್ಯಾನಿಲಯ ಎಂಬುದು ವದಂತಿಗಳನ್ನು ಹರಡಲು ಅಥವಾ ಸಂದೇಶ ಕಳುಹಿಸುವ ವೇದಿಕೆಯಲ್ಲಿ ನಕಲಿ ವಿಷಯದ ಪ್ರಸಾರಕ್ಕಾಗಿ ಹೊರಹೊಮ್ಮಿದ ಪದವಾಗಿದ್ದರೂ, ಈ ಪದವನ್ನು ಬಿಜೆಪಿಯನ್ನು ಗೇಲಿ ಮಾಡಲು ವಿರೋಧ ಪಕ್ಷಗಳು ಹೆಚ್ಚಾಗಿ ಬಳಸುತ್ತವೆ. ಸಿಎಂ ಕೆ. ಚಂದ್ರಶೇಖರ್ ರಾವ್ ಮತ್ತು ತೆಲಂಗಾಣ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಜೂನ್‌ 6ರಂದು ಕಿಡಿಕಾರಿದ್ದಾಗ ಟಿಆರ್‌ಎಸ್ ಕಾರ್ಯಾಧ್ಯಕ್ಷ ಕೆಟಿ ರಾಮರಾವ್ ನಡ್ಡಾ ಅವರನ್ನು 'ಸುಳ್ಳುಗಾರ' ಮತ್ತು ಬಿಜೆಪಿಯನ್ನು 'ಬಕ್ವಾಸ್ ಜುಮ್ಲಾ ಪಕ್ಷ' ಎಂದು ಕರೆದಿದ್ದರು.

Recommended Video

Jaspreet Bumrah ಟೀಮ್ ಇಂಡಿಯಾ ಮುನ್ನಡೆಸುತ್ತಿರುವ ಮೊದಲ ಬೌಲರ್ ಅಲ್ಲ | Oneindia Kannada

English summary
Telangana State IT Minister KT Rama Rao has lashed out at the BJP in the background of the BJP's national executive meeting being held in Hyderabad.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X