ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್: 2 ವಾರದಲ್ಲಿ 79 ಸರ್ಕಾರಿ ವೈದ್ಯರಿಗೆ ಕೊರೊನಾ ಸೋಂಕು

|
Google Oneindia Kannada News

ಹೈದರಾಬಾದ್, ಜೂನ್ 8: ಕೇವಲ ಎರಡೇ ವಾರಗಳಲ್ಲಿ 79 ಸರ್ಕಾರಿ ವೈದ್ಯರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

Recommended Video

ನಿಜಕ್ಕೂ ಈ ಸಂದರ್ಭ ಯಾವ ಹೆಣ್ಣಿಗೂ ಬೇಡ | Meghana Raj

ಈ ಕುರಿತು ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ. ನಿಜಾಮ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್‌ನಲ್ಲಿ ನಾಲ್ಕು ಮಂದಿ ವೈದ್ಯರು ಹಾಗೂ ಮೂವರು ಪ್ಯಾರಾಮೆಡಿಕ್ಸ್‌ಗೆ ಕೊರೊನಾ ಸೋಂಕು ತಗುಲಿದೆ.

ವೈದ್ಯರು ಸರ್ಕಾರಿ ಸೇವೆಯತ್ತ ಹೆಚ್ಚಿನ ಆಸಕ್ತಿ ತೋರಲಿ: ಬಿ.ಸಿ.ಪಾಟೀಲ್ವೈದ್ಯರು ಸರ್ಕಾರಿ ಸೇವೆಯತ್ತ ಹೆಚ್ಚಿನ ಆಸಕ್ತಿ ತೋರಲಿ: ಬಿ.ಸಿ.ಪಾಟೀಲ್

ಒಸ್ಮೇನಿಯಾ ಮೆಡಿಕಲ್ ಕಾಲೇಜಿನ 49 ವೈದ್ಯರು, ನಿಮ್ಸ್‌ನ 26 ವೈದ್ಯರು, ಗಾಂಧಿ ಮೆಡಿಕಲ್ ಕಾಲೇಜಿನ ನಾಲ್ವರು ವೈದ್ಯರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಪ್ರಯೋಗಾಲಯಗಳ ಸಿಬ್ಬಂದಿ, ನರ್ಸ್‌ಗಳು, ಪ್ಯಾರಾಮೆಡಿಕ್ಸ್‌ಗಳಿಗೆ ಕೊರೊನಾ ಸೋಂಕು ತಗುಲಿದೆ.

79 Government Doctors Test Positive For Covid-19 In Two Weeks

ಇನ್ನು ಖಾಸಗಿ ಆಸ್ಪತ್ರೆಯ ವೈದ್ಯರಿಗೂ ಕೂಡ ಸೋಂಕು ತಗುಲಿದ್ದು, ಅವರು ಚಿಕಿತ್ಸೆ ನೀಡುತ್ತಿದ್ದ ಆಸ್ಪತ್ರೆಯಲ್ಲೇ ವೈದ್ಯರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ನಿಮ್ಸ್ ರೆಸಿಡೆಂಟ್ ಡಾಕ್ಟರ್ಸ್‌ ಅಸೋಸಿಯೇಷನ್ ಅಧ್ಯಕ್ಷ ಡಾ. ಜಿ. ಶ್ರೀನಿವಾಸ್ ತಿಳಿಸಿದ್ದಾರೆ.

ಪರೀಕ್ಷೆ ಮೂಲಕವೇ ರೋಗವನ್ನು ಪತ್ತೆಹಚ್ಚಬಹುದು ಅಥವಾ ಗುಣಪಡಿಸಲು ಸಾಧ್ಯ. ತೆಲಂಗಾಣದಲ್ಲಿ 3496 ಕೊರೊನಾ ಸೋಂಕಿತ ಪ್ರಕಟರಣಗಳಿವೆ.1710 ಮಂದಿ ಗುಣಮುಖರಾಗಿದ್ದಾರೆ. 123 ಮಂದಿ ಮೃತಪಟ್ಟಿದ್ದಾರೆ.

English summary
In the last two weeks, 79 government doctors have tested positive for COVID in Hyderabad, said a Resident Doctors Association.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X