ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಿಂದ ಬಂದವರಿಗೆ ಕೊರೊನಾ ಸೋಂಕು; ತೆಲಂಗಾಣದಲ್ಲಿ ಆತಂಕ

|
Google Oneindia Kannada News

ತೆಲಂಗಾಣ, ಮೇ 30 : ವಿದೇಶದಿಂದ ವಾಪಸ್ ಆದ 64 ಜನರಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ ಎಂದು ತೆಲಂಗಾಣದ ಆರೋಗ್ಯ ಇಲಾಖೆ ಹೇಳಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,425.

ತೆಲಂಗಾಣ ರಾಜ್ಯದಲ್ಲಿ ಶುಕ್ರವಾರ ಒಂದೇ ದಿನ 169 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿತ್ತು. ಇದುವರೆಗೂ ಒಂದೇ ದಿನದಲ್ಲಿ ದಾಖಲಾದ ಹೆಚ್ಚು ಪ್ರಕರಣ ಇದಾಗಿದೆ.

ತೆಲಂಗಾಣ; 20 ದಿನದಲ್ಲಿ 1,500 ಹಾಸಿಗೆಯ ಆಸ್ಪತ್ರೆ ಸಿದ್ಧ ತೆಲಂಗಾಣ; 20 ದಿನದಲ್ಲಿ 1,500 ಹಾಸಿಗೆಯ ಆಸ್ಪತ್ರೆ ಸಿದ್ಧ

100 ಜನ ಸ್ಥಳೀಯರು, 64 ಜನ ವಿದೇಶದಿಂದ ಆಗಮಿಸಿದವರು, 5 ಜನ ವಲಸೆ ಕಾರ್ಮಿಕರಿಗೆ ಸೋಂಕು ತಗುಲಿದೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಹೈದರಾಬಾದ್ ನಗರವೊಂದರಲ್ಲಿಯೇ 82 ಪ್ರಕರಣ ದಾಖಲಾಗಿದೆ.

ತೆಲಂಗಾಣ: ಕೊರೊನಾ ಸೋಂಕಿತರ ಪೈಕಿ ಶೇ.85 ರಷ್ಟು ಮಂದಿಗೆ ನಿಜಾಮುದ್ದೀನ್ ನಂಟು ತೆಲಂಗಾಣ: ಕೊರೊನಾ ಸೋಂಕಿತರ ಪೈಕಿ ಶೇ.85 ರಷ್ಟು ಮಂದಿಗೆ ನಿಜಾಮುದ್ದೀನ್ ನಂಟು

64 Foreign Returnees Tested Positive For Covid 19 Telangana

ತೆಲಂಗಾಣ ಸರ್ಕಾರ ಕಳೆದ ಒಂದು ವಾರದಿಂದ ಕೋವಿಡ್ - 19 ಸಂಖ್ಯೆಗಳನ್ನು ನೀಡುವ ಮಾದರಿಯಲ್ಲಿ ಬದಲಾವಣೆ ಮಾಡಿದೆ. ಈಗ ರಾಜ್ಯದ ಒಟ್ಟು ಪ್ರಕರಣಗಳ ಸಂಖ್ಯೆಯನ್ನು ಮಾತ್ರ ನೀಡಲಾಗುತ್ತಿದೆ.

ತೆಲಂಗಾಣ: ಶಾಸಕರು, ನೌಕರರ ಅರ್ಧಕರ್ಧ ವೇತನಕ್ಕೆ ಬಿತ್ತು ಕತ್ತರಿ ತೆಲಂಗಾಣ: ಶಾಸಕರು, ನೌಕರರ ಅರ್ಧಕರ್ಧ ವೇತನಕ್ಕೆ ಬಿತ್ತು ಕತ್ತರಿ

ಇದುವರೆಗೂ ರಾಜ್ಯದಲ್ಲಿ 2008 ಸ್ಥಳೀಯರು, 417 ವಲಸೆ ಕಾರ್ಮಿಕರು ಮತ್ತು ವಿದೇಶದಿಂದ ವಾಪಸ್ ಆದವರಿಗೆ ಸೋಂಕು ತಗುಲಿದೆ. ಇದುವರೆಗೂ ರಾಜ್ಯದಲ್ಲಿ 1,381 ಜನರು ಕೋವಿಡ್ - 19 ಸೋಂಕಿನಿಂದ ಗುಣಮುಖರಾಗಿದ್ದಾರೆ.

ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 71. ಹೈದರಾಬಾದ್ ನಗರದಲ್ಲಿಯೇ 23 ಜನರು ಮೃತಪಟ್ಟಿದ್ದಾರೆ. ಮೇ 31ರ ತನಕ ರಾಜ್ಯದಲ್ಲಿ 4ನೇ ಹಂತದ ಲಾಕ್ ಡೌನ್ ಜಾರಿಯಲ್ಲಿ ಇರುತ್ತದೆ, ಲಾಕ್ ಡೌನ್ ವಿಸ್ತರಣೆ ಬಗ್ಗೆ ರಾಜ್ಯ ಸರ್ಕಾರ ಇನ್ನೂ ತೀರ್ಮಾನ ಕೈಗೊಂಡಿಲ್ಲ.

English summary
Telangana reported 169 Coronavirus case on one day. 64 foreign returnees tested positive said health department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X