• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೈದರಾಬಾದಿನಲ್ಲಿ ಭೀಕರ ಅಪಘಾತ: ಆರು ಮಂದಿ ಸ್ಥಳದಲ್ಲೇ ಸಾವು

|

ಹೈದರಾಬಾದ್,ಡಿಸೆಂಬರ್ 02: ಬೋರ್‌ವೆಲ್ ಕೊರೆಯುವ ಲಾರಿಗೆ ಇನ್ನೋವಾ ಕಾರ್‌ ಒಂದು ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಮೃತಪಟ್ಟಿರುವ ಘಟನೆ ಹೈದರಾಬಾದಿನಲ್ಲಿ ಬುಧವಾರ ನಡೆದಿದೆ.

ನಾಲ್ವರು ಮಹಿಳೆಯರು ಹಾಗೂ ಮಗು ಸೇರಿದಂತೆ ಆರು ಮಂದಿ ಮೃತಪಟ್ಟಿರುವ ಘಟನೆ ಹೈದರಾಬಾದ್ ಸಮೀಪದ ಚೆವೆಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾರು ಮತ್ತು ಲಾರಿ ನಡುವೆ ಅಪಘಾತ: ಮಾಗಡಿ ರಸ್ತೆ ಪೊಲೀಸ್ ಸಿಬ್ಬಂದಿಗೆ ಗಾಯ

ಮೃತರನ್ನು 46 ವರ್ಷದ ಮೊಹಮ್ಮದ್ ಆಸಿಫ್ ಖಾನ್, ಬಹದ್ದೂರ್ಪುರದ ನಿವಾಸಿಯಾಗಿದ್ದ ವೆಲ್ಡರ್, ಅವರ ಪತ್ನಿ ಫೌಸಿಯಾ ಬೇಗಂ(40) ಮಗಳು ಮೆಹಕ್ ಸಾನಿಯಾ(18), ನಾಜಿಯಾ ಬೇಗಂ(30), ಕಲಾಪಥರ್ ನಿವಾಸಿ, ಹರ್ಸಿಯಾ ಬೇಗಂ(28), ಮತ್ತು ಅವರ ನಾಲ್ಕು ವರ್ಷದ ಮಗಳು ಆಶಾ ನಿವಾಸಿ ಎಂದು ಗುರುತಿಸಲಾಗಿದೆ.

ಅತಿಯಾದ ವೇಗ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶವಗಳನ್ನು ಚೆವೆಲ್ಲಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಮೃತರು ನಗರದಿಂದ ಕರ್ನಾಟಕದ ಗುರ್ಮಿಟಕಲ್‌ಗೆ ಇನ್ನೋವಾದಲ್ಲಿ ತೆರಳುತ್ತಿದ್ದರು. ಕಾರು ಕಂದವಾಡ ಗೇಟ್ ತಲುಪುತ್ತಿದ್ದಂತೆ ಭಾರೀ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ಅಪಘಾತದಲ್ಲಿ, ಕಾರು ಸಂಪೂರ್ಣವಾಗಿ ಹಾನಿಯಾಗಿದ್ದು, ಆರು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ಮೂವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
As many as six people including four women and a child died in a road accident when their Innova collided with a speeding heavy vehicle used to sink borewells in the Chevella police limits on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X