ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರಿನ ಸೀಟಿನ ಅಡಿಯಲ್ಲಿ ಸಾಗಿಸುತ್ತಿದ್ದ 5.8 ಕೋಟಿ ರುಪಾಯಿ ಪೊಲೀಸರ ವಶಕ್ಕೆ

|
Google Oneindia Kannada News

ಹೈದರಾಬಾದ್, ಡಿಸೆಂಬರ್ 4: ಇಲ್ಲಿನ ಪೊಲೀಸರು 5.8 ಕೋಟಿ ರುಪಾಯಿಯನ್ನು ತೆಲಂಗಾಣದ ಪೆಂಬರ್ತಿ ಚೆಕ್ ಪೊಸ್ಟ್ ಬಳಿ ವಶಪಡಿಸಿಕೊಳ್ಳಲಾಗಿದೆ. ಈ ಮೂಲಕ ಇನ್ನೇನು ವಿಧಾನಸಭೆ ಚುನಾವಣೆ ನಡೆಯುವ ರಾಜ್ಯದಲ್ಲಿ ವಶಪಡಿಸಿಕೊಳ್ಳಲಾದ ಕಪ್ಪು ಹಣದ ಮೊತ್ತವು 118 ಕೋಟಿ ತಲುಪಿದೆ. ಇನ್ನು 5.8 ಕೋಟಿ ರುಪಾಯಿ ಹೊಂದಿದ್ದ ಆರೋಪದಲ್ಲಿ ಕೆ. ಕುಮಾರ್ ಜೈನ್, ರಾಮ್ ಹಾಗೂ ಪ್ರಶಾಂತ್ ಎಂಬುವರನ್ನು ಬಂಧಿಸಲಾಗಿದೆ.

ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತೆ ಅಧಿಕಾರಕ್ಕೆ! ಎನ್ ಡಿಟಿವಿ ವಿಶ್ಲೇಷಣೆ ತೆಲಂಗಾಣದಲ್ಲಿ ಟಿಆರ್ ಎಸ್ ಮತ್ತೆ ಅಧಿಕಾರಕ್ಕೆ! ಎನ್ ಡಿಟಿವಿ ವಿಶ್ಲೇಷಣೆ

ಪೊಲೀಸ್ ಕಮಿಷನರ್ ವಿ.ರವೀಂದ್ರ ಮಾಹಿತಿ ನೀಡಿ, ಸ್ವಿಫ್ಟ್ ಡಿಜೈರ್ ಕಾರಿನ ಸೀಟಿನ ಅಡಿಯಲ್ಲಿ ನಗದು ಇಟ್ಟುಕೊಂಡು ತೆರಳುತ್ತಿದ್ದರು. ನಾಮ ನಾಗೇಶ್ವರ್ ರಾವ್, ವದ್ದಿರಾಜು ರವಿಚಂದ್ರ ಹಾಗೂ ಕೊಂಡ ಮುರಳಿ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಿದ್ದು, ಅವರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದರು. ಕೀರ್ತಿ ಕುಮಾರ್ ಎಂಬಾತ ಆ ಹಣ ಕಳುಹಿಸುತ್ತಿದ್ದ. ಆತನ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

ಸೋನಿಯಾ ಗಾಂಧಿ ಅವರ ಕಾಲಿಗೆ ಬಿದ್ದಿದ್ದರು ಕೆಸಿಆರ್: ಮೋದಿ ಸೋನಿಯಾ ಗಾಂಧಿ ಅವರ ಕಾಲಿಗೆ ಬಿದ್ದಿದ್ದರು ಕೆಸಿಆರ್: ಮೋದಿ

ಡಿಸೆಂಬರ್ ಏಳನೇ ತಾರೀಕು ತೆಲಂಗಾಣ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಟಿಆರ್ ಎಸ್, ಬಿಜೆಪಿ ಹಾಗೂ ಕಾಂಗ್ರೆಸ್-ಟಿಡಿಪಿ ಮಿತ್ರ ಕೂಟ ಚುನಾವಣೆಯಲ್ಲಿ ಸೆಣಸುತ್ತಿವೆ. ಮತದಾರರಿಗೆ ಹಂಚುವ ಸಲುವಾಗಿ ಹಣ ಸಾಗಣೆ ನಡೆಯುತ್ತಿತ್ತು ಎನ್ನಲಾಗಿದೆ.

6 crore hawala cash seized from car in Telangana, 3 days before the Polls

ಕಳೆದ ತಿಂಗಳು ಅಂದರೆ ನವೆಂಬರ್ ಏಳನೇ ತಾರೀಕು ಹೈದರಾಬಾದ್ ನ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿ, 7.51 ಕೋಟಿ ರುಪಾಯಿ ತನಕ ನಗದು ವಶಪಡಿಸಿಕೊಳ್ಳಲಾಗಿತ್ತು. ನಾಲ್ವರು ಹವಾಲಾ ಏಜೆಂಟರನ್ನು ವಶಕ್ಕೆ ಪಡೆಯಲಾಗಿತ್ತು. ಇದರಲ್ಲಿ ಶೆಲ್ ಕಂಪನಿಗಳು ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗಿತ್ತು.

ಡಿ.ಕೆ.ಶಿವಕುಮಾರ್, ರಾಮುಲು ಮತ್ತೆ ಮುಖಾಮುಖಿ, ಈ ಬಾರಿ ಗೆಲುವು ಯಾರಿಗೆ? ಡಿ.ಕೆ.ಶಿವಕುಮಾರ್, ರಾಮುಲು ಮತ್ತೆ ಮುಖಾಮುಖಿ, ಈ ಬಾರಿ ಗೆಲುವು ಯಾರಿಗೆ?

ಹೈದರಾಬಾದ್ ನಿಂದ ವಾರಂಗಲ್ ಗೆ ಕಾರಿನಲ್ಲಿ ಆರು ಕೋಟಿ ರುಪಾಯಿ ದಾಖಲೆರಹಿತ ಮೊತ್ತವನ್ನು ತೆಗೆದುಕೊಂಡು ಹೋಗುವಾಗ ವಶಕ್ಕೆ ಪಡೆಯಲಾಗಿತ್ತು. ಮತ್ತೊಂದು ಪ್ರಕರಣದಲ್ಲಿ ನೆನ್ನೆಲದಿಂದ ಮಂಚಿರ್ಯಾಲ್ ಗೆ ಆಟೋದಲ್ಲಿ ಸಾಗಿಸುತ್ತಿದ್ದ ಐವತ್ತು ಲಕ್ಷ ರುಪಾಯಿ ವಶಕ್ಕೆ ಪಡೆಯಲಾಗಿತ್ತು.

English summary
Police seized Rs. 5.8 crore from a car near Pembarthy checkpost in Telangana today, taking the total amount of black money recovered ahead of the state assembly polls to Rs. 118 crore. Three people -- identified as K Kumar Jain, Ram and Prashanth -- were arrested in this connection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X