ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರ‍್ಯಾಗಿಂಗ್: ಆಂಧ್ರದ ಐಟಿ ವಿವಿಯ 54 ವಿದ್ಯಾರ್ಥಿಗಳು ಅಮಾನತು

By ವಿಕಾಸ್ ನಂಜಪ್ಪ
|
Google Oneindia Kannada News

ನುಜ್ವಿಡ್, ಸೆಪ್ಟೆಂಬರ್ 19: ರ‍್ಯಾಗಿಂಗ್ ಪ್ರಕರಣವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೊದಲ ಬಾರಿಗೆ ಕಠಿಣ ಕ್ರಮವನ್ನು ಜರುಗಿಸಲಾಗಿದೆ. ಆಂಧ್ರ ಪ್ರದೇಶದ ನುಜ್ವಿಡ್ ನಲ್ಲಿರುವ ರಾಜೀವ್ ಯುನಿವರ್ಸಿಟಿ ಆಫ್ ನಾಲೆಡ್ಜ್ ಆ್ಯಂಡ್ ಟೆಕ್ನಾಲಜೀಸ್ ನ 54 ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದೆ.

ಆಗಸ್ಟ್ 24ರಂದು ನಡೆದಿದ್ದ ಸಾಮೂಹಿಕ ರ‍್ಯಾಗಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಅಮಾನತು ಶಿಕ್ಷೆಯನ್ನು ಪ್ರಕಟಿಸಲಾಗಿದೆ. ಅಮಾನತುಗೊಂಡವರು ಮೂರು ಮತ್ತು ನಾಲ್ಕನೇ ವರ್ಷದ ಸಾಫ್ಟ್ ವೇರ್ ಎಂಜಿನಿಯರ್ ವಿದ್ಯಾರ್ಥಿಗಳಾಗಿದ್ದಾರೆ.

54 students of IT university in Andhra suspended for ragging

ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಸರಣಿ ದೈಹಿಕ ಶಿಕ್ಷೆ ನೀಡಿದ್ದರು. ಕೋಣೆಯೊಂದರಲ್ಲಿ ಕಿರಿಯ ವಿದ್ಯಾರ್ಥಿಗಳನ್ನು ಕೂಡಿ ಹಾಕಿ ದೈಹಿಕ ಶಿಕ್ಷೆ ನೀಡುತ್ತಿದ್ದರು. ಇದರ ಬಗ್ಗೆ ದೂರು ನೀಡಿದರೆ ಇನ್ನೂ ಹೆಚ್ಚಿನ ದೈಹಿಕ ಶಿಕ್ಷೆಯನ್ನು ನೀಡುತ್ತಿದ್ದರು. ಪರಿಣಾಮ ಆಗಸ್ಟ್ 24ರಂದು ಹಲವು ವಿದ್ಯಾರ್ಥಿಗಳು ಆಸ್ಪತ್ರೆಗೂ ದಾಖಲಾದಾಗ ಪ್ರಕರಣ ಬೆಳಕಿಗೆ ಬಂದಿತ್ತು.

ಇದರ ತನಿಖೆ ನಡೆಸಿದ ವಿವಿಯ ಶಿಸ್ತು ಸಮಿತಿ ವಿದ್ಯಾರ್ಥಿಗಳಿಗೆ ಅಮಾನತು ಶಿಕ್ಷೆ ಪ್ರಕಟಿಸಿತ್ತು. ಇದನ್ನು ಒಪ್ಪಿಕೊಂಡು ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳನ್ನು ಅಮಾನತು ಮಾಡಿದೆ.

ಅಮಾನತು ಮಾಡಿದ 54 ವಿದ್ಯಾರ್ಥಿಗಳಲ್ಲಿ 15 ವಿದ್ಯಾರ್ಥಿಗಳಿಗೆ ಒಂದು ವರ್ಷದವರೆಗೆ ತರಗತಿ ಹಾಜರಾಗದಂತೆ ಸೂಚಿಸಲಾಗಿದೆ. 6 ವಿದ್ಯಾರ್ಥಿಗಳಿಗೆ ಒಂದು ವರ್ಷ ಕಾಲ ಪರೀಕ್ಷೆ ಬರೆಯದಂತೆ ಆದೇಶ ನೀಡಲಾಗಿದೆ. ಉಳಿದವರಿಗೆ ಸ್ವಲ್ಪ ದಿನಗಳ ಅಮಾನತು ಶಿಕ್ಷೆ ನೀಡಲಾಗಿದೆ.

English summary
In one of the biggest crackdown on ragging, 54 students of an IT university in Andhra Pradesh have been suspended. The decision to suspend the students was taken after a probe confirmed the mass ragging on August 24 at the Rajiv University of Knowledge Technologies at Nuzvid in Krishna district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X