ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಸಿರಾಟದ ಸಮಸ್ಯೆಯಿಂದ ವಿಮಾನದಲ್ಲೇ ಅಸುನೀಗಿದ ಬೆಂಗಳೂರಿನ ಹಸುಗೂಸು

|
Google Oneindia Kannada News

ಹೈದರಾಬಾದ್, ಆಗಸ್ಟ್ 01: ನಾಲ್ಕು ತಿಂಗಳ ಹಸುಗೂಸೊಂದು ಉಸಿರಾಟದ ಸಮಸ್ಯೆಯಿಂದ ಇಂಡಿಗೋ ವಿಮಾನದಲ್ಲಿ ಮೃತವಾದ ಘಟನೆ ಜು.31ರಂದು ನಡೆದಿದೆ.

ಬೆಂಗಳೂರಿನಿಂದ ಬಿಹಾರದ ಪಾಟ್ನಾಕ್ಕೆ ಹೊರಟಿದ್ದ ವಿಮಾನದಲ್ಲಿದ್ದ ನಾಲ್ಕು ತಿಂಗಳ ಗಂಡುಮಗು ಮಗು ಇದ್ದಕ್ಕಿದ್ದಂತೆ ಉಸಿರಾಟದ ಸಮಸ್ಯೆಯಿಂದಾಗಿ ಅಳುವುದಕ್ಕೆ ಆರಂಭಿಸಿತ್ತು.

ಮಿಗ್ -21 ವಿಮಾನ ಪತನ, ಪೈಲೆಟ್ ಸಾವು ಮಿಗ್ -21 ವಿಮಾನ ಪತನ, ಪೈಲೆಟ್ ಸಾವು

ನಂತರ ಇದ್ದಕ್ಕಿದ್ದಂತೆ ಅಳು ನಿಲ್ಲಿಸಿದ್ದ ಮಗು, ಯಾವುದೇ ರೀತಿಯ ಚಲನವಲನ ಮಾಡದೆ ಇರುವುದನ್ನು ಕಂಡು ಆತಂಕಗೊಂಡ ಪಾಲಕರು ತುರ್ತು ಚಿಕಿತ್ಸೆಗೆ ಮನವಿ ಮಾಡಿಕೊಂಡಿದ್ದರು. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಹೈದರಾಬಾದಿನಲ್ಲಿಯೇ ವಿಮಾನವನ್ನು ಇಳಿಸಿ, ಮಗುವನ್ನು ಆಸ್ಪತ್ರೆಗೆ ರವಾನಿಸಲಾಯಿತು. ಆದರೆ ಆಸ್ಪತ್ರೆಗೆ ತೆರಳುವ ಮೊದಲೇ ಮಗು ಮೃತವಾಗಿತ್ತು ಎಂದು ವೈದ್ಯರು ಘೋಷಿಸಿದರು.

4 month baby dies after developing breathing problem on IndiGo flight

ಮಗುವಿನ ಸಾವಿಗೆ ಇಂಡಿಗೋ ವಿಮಾನಯಾನ ಸಿಬ್ಬಂದಿ, ಅಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಇಂಡಿಗೋ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಮುನ್ನೆಚ್ಚರಿಕೆ ವಹಿಸಿದರೂ, ಮಗುವಿಗೆ ವಿಕಿತ್ಸೆ ಕೊಡಿಸಲು ಸಕಲ ಪ್ರಯತ್ನ ಮಾಡಿದ್ದರೂ ನಮ್ಮ ದುರಾದೃಷ್ಟಕ್ಕೆ ಮಗುವನ್ನು ಬದುಕಿಸಿಕೊಳ್ಳುವುದಕ್ಕೆ ಸಾಧ್ಯವಾಗಲಿಲ್ಲ ಎಂದು ಇಂಡಿಗೋ ವಿಮಾನಯಾನ ಸಂಸ್ಥೆಯ ಮೇಲಧಿಕಾರಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

English summary
A 4 month baby died on IndiGo flight after developing breathing problem. Baby was travelling to Bihar's Patna from Bengaluru with his parents. IndiGo said the crew of the flight 6E 897 decided to divert the plane to Hyderabad and requested for an ambulance and a doctor at the airport.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X