ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಹದಂಥಾ ಮಳೆಗೆ ಸಿಲುಕಿ ತೆಲಂಗಾಣದಲ್ಲಿ 30 ಮಂದಿ ಸಾವು

|
Google Oneindia Kannada News

ಹೈದರಾಬಾದ್,ಅಕ್ಟೋಬರ್ 15: ಪ್ರವಾಹದಂಥಾ ಮಳೆಗೆ ಸಿಲುಕಿ ಹೈದರಾಬಾದ್‌ನಲ್ಲಿ 15 ಮಂದಿ ಸೇರಿ ಒಟ್ಟು ತೆಲಂಗಾಣದಲ್ಲಿ 30 ಮಂದಿ ಮೃತಪಟ್ಟಿದ್ದಾರೆ.

ರಸ್ತೆಗಳು ನದಿಯಂತಾಗಿದ್ದವು, ಕಾರುಗಳು ಮುಳುಗಿದ್ದವು, ಮನೆಗಳಿಗೆ ನೀರು ನುಗ್ಗಿತ್ತು. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಎರಡು ತಿಂಗಳ ಮಗು ಮೃತಪಟ್ಟಿದೆ. ಇನ್ನು ಕಾಂಪೌಂಡ್ ಗೋಡೆ ಕುಸಿದು 9 ಮಂದಿ ಸಾವನ್ನಪ್ಪಿದ್ದರು.

ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್: ಗಾಳಿ ಸಹಿತ ಧಾರಾಕಾರ ಮಳೆ ಕರ್ನಾಟಕದ 6 ಜಿಲ್ಲೆಗಳಿಗೆ ರೆಡ್ ಅಲರ್ಟ್: ಗಾಳಿ ಸಹಿತ ಧಾರಾಕಾರ ಮಳೆ

ಪ್ರಧಾನಿ ನರೇಂದ್ರ ಮೋದಿಯವರು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಹಾಗೂ ಆಂಧ್ರದ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿಯವರ ಜೊತೆ ಮಾತುಕತೆ ನಡೆಸಿ, ಸರ್ಕಾದಿಂದಾಗುವ ಎಲ್ಲಾ ಸಹಾಯವನ್ನು ಮಾಡುವುದಾಗಿ ಭರವಸೆ ನೀಡಿದರು.

30 Rain-Related Deaths In Telangana

ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡಿ, ತೆಲಂಗಾಣ ಹಾಗೂ ಆಂಧ್ರಪ್ರದೇಶದ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಸಹಾಯ ಮಾಡಲಿದೆ.

ಎಲ್ಲೆಲ್ಲೂ ನೀರು, ಉಕ್ಕಿ ಹರಿಯುತ್ತಿರುವ ನದಿಗಳು ತರಗೆಲೆಗಳಂತೆ ಕೊಚ್ಚಿ ಹೋದ ವಾಹನಗಳು, ಜನರ ಹಾಹಾಕಾರ ಇದು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಬಹುತೇಕ ಪ್ರದೇಶಗಳಲ್ಲಿ ಬುಧವಾರ ಕಂಡುಬಂದ ಜಲಪ್ರಳಯದ ಚಿತ್ರಣ.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಪ್ರಭಾವದಿಂದ ತೆಲುಗು ಸೀಮೆಗಳು ದಾಖಲೆ ಮಳೆಗೆ ಸಾಕ್ಷಿಯಾಗಿವೆ. ರಾಜಧಾನಿ ಹೈದರಾಬಾದ್‌ನಲ್ಲಿಪರಿಸ್ಥಿತಿ ಅತ್ಯಂತ ಗಂಭೀರವಾಗಿದೆ. ಮನೆಗಳು, ತಗ್ಗು ಪ್ರದೇಶಗಳು, ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು, ಕೊರೊನಾ ಭೀತಿಯ ನಡುವೆ ಜನರು ಪ್ರವಾಹದಿಂದಲೂ ಪ್ರಾಣಾಂತಕಕ್ಕೆ ಗುರಿಯಾಗಿದ್ದಾರೆ.

English summary
Thirty people have died after heavy rains wrought havoc across Telangana on Wednesday - leaving roads looking like rivers, cars completely submerged and carried along by powerful currents, and buildings almost entirely flooded.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X