ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾದಿಂದ ಹೈದ್ರಾಬಾದಿಗೆ ಬಂತು 30 ಲಕ್ಷ ಡೋಸ್ ಸ್ಪುಟ್ನಿಕ್-ವಿ ಲಸಿಕೆ

|
Google Oneindia Kannada News

ಬೆಂಗಳೂರು, ಜೂನ್ 01: ರಷ್ಯಾದಿಂದ ಮೂರನೇ ಬಾರಿ ಭಾರಿ ಪ್ರಮಾಣದ ಸ್ಪುಟ್ನಿಕ್-ವಿ ಲಸಿಕೆಯನ್ನು ಭಾರತಕ್ಕೆ ಕಳುಹಿಸಿ ಕೊಡಲಾಗಿದೆ. ಮಂಗಳವಾರ 30 ಲಕ್ಷ ಡೋಸ್ ಲಸಿಕೆಯನ್ನು ಹೊತ್ತ ವಿಶೇಷ ವಿಮಾನ ಹೈದ್ರಾಬಾದಿಗೆ ಆಗಮಿಸಿದೆ.

ರಷ್ಯಾದಿಂದ 30 ಲಕ್ಷ ಡೋಸ್ ಸ್ಪುಟ್ನಿಕ್ ವಿ ಲಸಿಕೆ ಹಾಗೂ ಬೃಹತ್ ವಸ್ತುಗಳನ್ನು ಮಂಗಳವಾರ ರವಾನಿಸಲಾಗಿದ್ದು, ಇದನ್ನು ಪ್ಯಾನೇಸಿಯಾ ಬಯೋಟೆಕ್ ನಲ್ಲಿ ತುಂಬಿಸಿಡಲು ಉದ್ದೇಶಿಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಜೂನ್ 2ನೇ ವಾರದಿಂದ ಅಪೋಲೋ ಆಸ್ಪತ್ರೆಯಲ್ಲಿ ಸ್ಪುಟ್ನಿಕ್-ವಿ ಲಸಿಕೆಜೂನ್ 2ನೇ ವಾರದಿಂದ ಅಪೋಲೋ ಆಸ್ಪತ್ರೆಯಲ್ಲಿ ಸ್ಪುಟ್ನಿಕ್-ವಿ ಲಸಿಕೆ

56.5 ಮೆಟ್ರಿಕ್ ಟನ್ ಲಸಿಕೆ ಹಾಗೂ ವೈದ್ಯಕೀಯ ಉಪಕರಣಗಳನ್ನು ಒಳಗೊಂಡಿರುವ RU-9450 ವಿಶೇಷ ವಿಮಾನ ಮಂಗಳವಾರ ಬೆಳಗ್ಗೆ 3.43ರ ಹೊತ್ತಿಗೆ ತಲುಪಿದೆ ಎಂದು ಜಿಎಂಆರ್ ಹೈದ್ರಾಬಾದ್ ಏರ್ ಕಾರ್ಗೊ ತಿಳಿಸಿದೆ. ಇದುವರೆಗೂ ಭಾರತದ ಆಮದು ಮಾಡಿಕೊಂಡ ಲಸಿಕೆ ಪ್ರಮಾಣದಲ್ಲಿ ಇದೇ ಅತಿಹೆಚ್ಚು ಎಂದು ಹೇಳಲಾಗುತ್ತಿದೆ.

ಒಂದೂವರೆ ಗಂಟೆಯಲ್ಲೇ ಲಸಿಕೆ ಶಿಫ್ಟ್

ಒಂದೂವರೆ ಗಂಟೆಯಲ್ಲೇ ಲಸಿಕೆ ಶಿಫ್ಟ್

ಹೈದ್ರಾಬಾದಿಗೆ ಸ್ಪುಟ್ನಿಕ್-ವಿ ಲಸಿಕೆ ಆಗಮಿಸಿದ ನಂತರ 90 ನಿಮಿಷಗಳಲ್ಲೇ ಎಲ್ಲ ಲಸಿಕೆ ಸಾಗಾಣಿಕೆ ಕಾರ್ಯವನ್ನು ಪೂರ್ಣಗೊಳಿಸಲಾಯಿತು ಎಂದು ಜಿಹೆಚ್ಎಸಿ ತಿಳಿಸಿದೆ. ರಷ್ಯಾದ ನೇರ ಹೂಡಿಕೆ ನಿಧಿಯ ಭಾರತೀಯ ಪಾಲುದಾರ ಸಂಸ್ಥೆ ಡಾ.ರೆಡ್ಡೀಸ್ ಪ್ರಯೋಗಾಲಯಕ್ಕೆ ಲಸಿಕೆಯನ್ನು ಕಳುಹಿಸಲಾಯಿತು.

ಪ್ರಾಥಮಿಕ ಹಂತದಲ್ಲಿ ವೈದ್ಯರಿಗೆ ಸ್ಪುಟ್ನಿಕ್-ವಿ

ಪ್ರಾಥಮಿಕ ಹಂತದಲ್ಲಿ ವೈದ್ಯರಿಗೆ ಸ್ಪುಟ್ನಿಕ್-ವಿ

ಮೊದಲ ಹಂತದಲ್ಲಿ 1.5 ಲಕ್ಷ ಡೋಸ್ rAd26 ಎಂಬ ಅಂಶವನ್ನು ಮೇ 1ರಂದು ರಷ್ಯಾದಿಂದ ಕಳುಹಿಸಲಾಗಿದೆ. ಎರಡನೇ ಹಂತದಲ್ಲಿ ಮೇ 16ರಂದು 60,000 ಡೋಸ್ rAD5 ಅಂಶವನ್ನು ಕಳುಹಿಸಿ ಕೊಡುವುದಾಗಿ ರಷ್ಯಾ ತಿಳಿಸಿದೆ. ಮೇ 14ರಂದು ಸ್ಪುಟ್ನಿಕ್-ವಿ ಲಸಿಕೆಯನ್ನು ಪ್ರಾಥಮಿಕವಾಗಿ ಆರೋಗ್ಯ ಸಿಬ್ಬಂದಿ ಮೇಲೆ ಪ್ರಯೋಗಿಸುವ ಮೂಲಕ ಚಾಲನೆ ನೀಡುವುದಾಗಿ ಡಾ. ರೆಡ್ಡೀಸ್ ಪ್ರಯೋಗಾಲಯವು ಸ್ಪಷ್ಟಪಡಿಸಿದೆ. ಇನ್ನು, ಲಸಿಕೆ ಚಾಲನೆ ನೀಡುವ ಸಂದರ್ಭದಲ್ಲಿ ತನ್ನ ಸಹಭಾಗಿತ್ವದ ಅಪೋಲೋ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಗೆ ಮೊದಲು ಲಸಿಕೆಯನ್ನು ನೀಡುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.

ಒಂದು ಡೋಸ್ ಸ್ಪುಟ್ನಿಕ್-ವಿ ಲಸಿಕೆಗೆ 1,195 ರೂ.

ಒಂದು ಡೋಸ್ ಸ್ಪುಟ್ನಿಕ್-ವಿ ಲಸಿಕೆಗೆ 1,195 ರೂ.

ಮಾಸ್ಕೋ, ರಷ್ಯಾದಲ್ಲಿ ಗಮಲೇಯ ನ್ಯಾಷನಲ್ ರಿಸರ್ಚ್ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್-ವಿ ಲಸಿಕೆಗೆ ಬೆಲೆಯನ್ನು ನಿಗದಿಗೊಳಿಸಲಾಗಿದೆ. ಒಂದು ಡೋಸ್ ಲಸಿಕೆಗೆ 1,195 ರೂಪಾಯಿ ತೆಗೆದುಕೊಳ್ಳಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಒಂದು ಡೋಸ್ ಸ್ಪುಟ್ನಿಕ್-ವಿ ಲಸಿಕೆಗೆ 995 ರೂಪಾಯಿ ಹಾಗೂ ಲಸಿಕೆ ವಿತರಣೆಗೆ 200 ರೂಪಾಯಿ ಸೇವಾ ಶುಲ್ಕ ವಿಧಿಸಲಾಗುತ್ತದೆ. ಒಟ್ಟಾರೆ ಒಂದು ಡೋಸ್ ಲಸಿಕೆಗೆ 1,195 ರೂಪಾಯಿ ಪಾವತಿಸಬೇಕಾಗುತ್ತದೆ.

ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆಯು ಎಲ್ಲಿ ಸಿಗುತ್ತದೆ?

ಭಾರತದಲ್ಲಿ ಸ್ಪುಟ್ನಿಕ್-ವಿ ಲಸಿಕೆಯು ಎಲ್ಲಿ ಸಿಗುತ್ತದೆ?

ದೇಶದಲ್ಲಿ ಜೂನ್ ಎರಡನೇ ವಾರದಿಂದ ಅಪೋಲೋ ಗ್ರೂಪ್ ಆಫ್ ಹಾಸ್ಪಿಟಲ್ ಕೇಂದ್ರಗಳಲ್ಲಿ ವಿತರಿಸುವುದಾಗಿ ಸಂಸ್ಥೆಯು ಘೋಷಿಸಿದೆ. ಅಪೋಲೋ ಆಸ್ಪತ್ರೆಯ 80 ಕೇಂದ್ರಗಳಲ್ಲಿ 10 ಲಕ್ಷ ಜನರಿಗೆ ಸ್ಪುಟ್ನಿಕ್-ವಿ ಲಸಿಕೆಯನ್ನು ವಿತರಿಸುವ ಗುರಿ ಹೊಂದಲಾಗಿದೆ. ಮೊದಲ ಶ್ರೇಣಿ ಕಾರ್ಮಿಕರು, ಕಾರ್ಪೋರೇಟ್ ಉದ್ಯೋಗಿಗಳು ಮತ್ತು ಆದ್ಯತೆ ವಲಯವನ್ನು ಗುರುತಿಸಿ ಲಸಿಕೆ ವಿತರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಮೊದಲ 10 ಲಕ್ಷ ಜನರಿಗೆ ಲಸಿಕೆ ನೀಡುವುದಕ್ಕೆ 3 ವಾರಗಳನ್ನು ತೆಗೆದುಕೊಳ್ಳಲಾಗುವುದು. ಜೂನ್ ತಿಂಗಳಿನಲ್ಲಿ ಪ್ರತಿವಾರ 10 ಲಕ್ಷ ಜನರಿಗೆ ಲಸಿಕೆ ನೀಡಲಾಗುವುದು. ಜುಲೈ ವೇಳೆಗೆ ಈ ಸಂಖ್ಯೆಯನ್ನು ಇಮ್ಮಡಿಕೊಳಿಸಲಾಗುವುದು. ಸಪ್ಟೆಂಬರ್ ತಿಂಗಳ ವೇಳೆಗೆ 2 ಕೋಟಿ ಫಲಾನುಭವಿಗಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದು ಅಪೋಲೋ ಗ್ರೂಪ್ ಆಫ್ ಹಾಸ್ಪಿಟಲ್ ನ ಎಕ್ಸಿಕ್ಯೂಟಿವ್ ವೈಸ್-ಚೇರ್ ಮನ್ ಶೋಭನಾ ಕಾಮಿನೇನಿ ತಿಳಿಸಿದ್ದಾರೆ.

English summary
30 Lakh Dose Russian Sputnik-V Vaccine Landed At Hyderabad Airport On Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X