ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುಪತಿ ದೇವಾಲಯದಲ್ಲಿ ವಜ್ರ ಖಚಿತ 3 ಕಿರೀಟ ಕಳ್ಳತನ

|
Google Oneindia Kannada News

ಹೈದರಾಬಾದ್, ಫೆಬ್ರವರಿ 03 : ತಿರುಪತಿಯ ಶ್ರೀ ಗೋವಿಂದರಾಜಸ್ವಾಮಿ ದೇವಾಲಯದಲ್ಲಿ ಮೂರು ವಜ್ರ ಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿವೆ. ತಿರುಪತಿ ಈಸ್ಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಾಗಿದೆ.

ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಅಧೀನಕ್ಕೆ ಈ ದೇವಾಲಯ ಬರುತ್ತದೆ. ಶನಿವಾರ ಸಂಜೆ 5.45ಕ್ಕೆ ಅರ್ಚಕರು ದೇವಾಲಯದ ಬಾಗಿಲು ತೆರೆದಾಗ ಕಿರೀಟಗಳು ನಾಪತ್ತೆಯಾದ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭಬೆಂಗಳೂರು ವಿಮಾನ ನಿಲ್ದಾಣದಿಂದ ತಿರುಪತಿಗೆ ಫ್ಲೈ ಬಸ್ ಆರಂಭ

ದೇವಾಲಯದ ಪೂಜಾ ಕಾರ್ಯಗಳು ಹಾಗೂ ಭಕ್ತರ ದರ್ಶನದ ಬಳಿಕ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ಹಾಕಲಾಗಿತ್ತು. 45 ನಿಮಿಷಗಳ ಬಳಿಕ ಮತ್ತೆ ಪೂಜೆಗಾಗಿ ದೇವಾಲಯದ ಬಾಗಿಲು ತೆರೆದಾಗ ಮೂರು ಕಿರೀಟಗಳು ನಾಪತ್ತೆಯಾಗಿರುವುದು ತಿಳಿದಿದೆ.

ತಿರುಪತಿ ಹುಂಡಿ ಕಾಣಿಕೆ ಸಂಗ್ರಹ 3 ಕೋಟಿಯಿಂದ 73 ಲಕ್ಷಕ್ಕೆ ಇಳಿಕೆ!ತಿರುಪತಿ ಹುಂಡಿ ಕಾಣಿಕೆ ಸಂಗ್ರಹ 3 ಕೋಟಿಯಿಂದ 73 ಲಕ್ಷಕ್ಕೆ ಇಳಿಕೆ!

Tirupati

ಉತ್ಸವದ ಸಂದರ್ಭದಲ್ಲಿ ಬಳಕೆ ಮಾಡುತ್ತಿದ್ದ ಮೂರು ವಜ್ರ ಖಚಿತ ಚಿನ್ನದ ಕಿರೀಟಗಳು ನಾಪತ್ತೆಯಾಗಿವೆ. ದೇವಾಲಯದ ಸಿಸಿಟವಿಯಲ್ಲಿ ಕಳ್ಳತನದ ದೃಶ್ಯ ಸೆರೆಯಾಗಿರುವ ಸಾಧ್ಯತೆ ಇದೆ. ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.

ತಿರುಪತಿ ದೇವಾಲಯದ ಕೆಲ ಆದಾಯಕ್ಕೆ ಜಿಎಸ್ ಟಿಯಿಂದ ವಿನಾಯಿತಿತಿರುಪತಿ ದೇವಾಲಯದ ಕೆಲ ಆದಾಯಕ್ಕೆ ಜಿಎಸ್ ಟಿಯಿಂದ ವಿನಾಯಿತಿ

ಮೂರು ಕಿರೀಟಗಳು ಸೇರಿ 1 ಕೆಜಿ 300 ಗ್ರಾಂ ತೂಕವಿದ್ದವು ಎಂದು ತಿಳಿದುಬಂದಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣದ ತನಿಖೆಗಾಗಿ 6 ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ.

English summary
Three crowns of Sri Govindaraja Swamy temple in Tirupati went missing on Saturday evening. Tirumala Tirupati Devasthanams (TTD) said that temple priests noticed it around 5.45 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X