ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೈದರಾಬಾದ್‌ನ ಐಟಿ ಕಾರಿಡಾರ್‌ಗೆ ನಿರಂತರ ವಿದ್ಯುತ್ ಸಂಪರ್ಕ

|
Google Oneindia Kannada News

ಹೈದರಾಬಾದ್, ಜುಲೈ 19: ದಿನದ 24 ಗಂಟೆಯೂ ವಿದ್ಯುತ್ ಪಡೆಯುವ ತೆಲಂಗಾಣದ ಮೊದಲ ಪ್ರದೇಶ ಎನ್ನುವ ಖ್ಯಾತಿಗೆ ಹೈದರಾಬಾದ್‌ನ ಐಟಿ ಕಾರಿಡಾರ್ ಪಾತ್ರವಾಗಿದೆ.

ತೆಲಂಗಾಣ ಸ್ಟೇಟ್ ಸದರ್ನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ ಜತೆಗೆ ಇನ್ನೂ ಎರಡು ಸ್ವಿಚಿಂಗ್ ಕೇಂದ್ರಗಳನ್ನು ತೆರೆಯಲು ನಿರ್ದರಿಸಿದೆ. ಇತ್ತೀಚೆಗಷ್ಟೇ ಮಾಧಾಪುರದಲ್ಲಿ ಕೇಂದ್ರವನ್ನು ತೆರೆಯಲಾಗಿತ್ತು.

ಐಟಿ ಕಂಪನಿಯು ಆಂತರಿಕ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿರುವ ಕಾರಣ, ತಡೆರಹಿತ ವಿದ್ಯುತ್ ಸರಬರಾಜು ಮಾಡಲು ಟಿಎಸ್‌ಎಸ್‌ಪಿಡಿಸಿಎಲ್ ಈ 33 ಕೆವಿ ಸ್ವಿಚಂಗ್ ಕೇಂದ್ರಗಳನ್ನು ಸ್ಥಾಪಿಸುವ ಪ್ರಕ್ರಿಯೆಯಲ್ಲಿದೆ.

24×7 Electricity For Hyderabad’s IT Corridor

8 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸಲಾದ ಮಾಧಾಪುರ ಸ್ವಿಚ್ಚಿಂಗ್ ಸ್ಟೇಷನ್ ರಾಜ್ಯದ ಮೊದಲನೆಯದಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎರಡು ಹೆಚ್ಚುವರಿ ಸ್ವಿಚಿಂಗ್ ಕೇಂದ್ರಗಳು ಐಐಟಿ-ಹೈದರಾಬಾದ್ ಹಾಗೂ ನಾನಾಕ್ರಮ್‌ಗುಡದಲ್ಲಿ ಬರಲಿವೆ. ಎರಡು ಸ್ವಿಚಿಂಗ್ ಕೇಂದ್ರಗಳ ಸ್ಥಾಪನೆಗೆ ಸಂಬಂಧಿಸಿದ ಕಾರ್ಯಗಳು ಪ್ರಗತಿಯಲ್ಲಿದೆ. ತಿಂಗಳಲ್ಲಿ ಉದ್ಘಾಟನೆ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

ಸ್ವಿಚಿಂಗ್ ಕೇಂದ್ರಗಳ ಅವಶ್ಯಕತೆಯನ್ನು ವಿವರವಾಗಿ ವಿರಿಸಿದ ಅಧಿಕಾರಿಗಳು, ನಿರಂತರ ವಿದ್ಯುತ್ ಸರಬರಾಜು ರಾಜ್ಯದ ಖ್ಯಾತಿಯನ್ನು ಹೆಚ್ಚಿಸುವುದಲ್ಲದೇ ಐಟಿ ಕಂಪನಿಗಳಲ್ಲಿ ಉತ್ಪಾದಕತೆಯನ್ನು ಹೆಚ್ಚಿಸುತ್ತದೆ.

ಇದು ಐಟಿ ಕಂಪನಿಗಳಿಗೆ ಯಾವುದೇ ಅಡೆತಡೆಗಳಿಲ್ಲದೆ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.

ಒಂದೊಮ್ಮೆ ಯಾವುದೇ ಐಟಿ ಸಂಸ್ಥೆಗಳು ವಿದ್ಯುತ್ ಸಮಸ್ಯೆ ಎದುರಿಸಿದರೆ ಆ ಪ್ರದೇಶದಲ್ಲಿ ಸಂಪೂರ್ಣವಾಗಿ ವಿದ್ಯುತ್ ಸರಬರಾಜನ್ನು ನಿಲ್ಲಿಸಬೇಕಾಗಿತ್ತು ಆದರೆ ಸ್ವಿಚಿಂಗ್ ಕೇಂದ್ರಗಳಿರುವ ಕಾರಣ ಇಡೀ ಪ್ರದೇಶಕ್ಕೆ ವಿದ್ಯುತ್ ಸರಬರಾಜು ನಿಲ್ಲಿಸುವ ಅಗತ್ಯ ಬರುವುದಿಲ್ಲ, ವಿದ್ಯುತ್ ಸಮಸ್ಯೆ ಇರುವ ಕಟ್ಟಡದಲ್ಲಿ ಮಾತ್ರ ವಿದ್ಯುತ್ ಕಡಿತಗೊಳಿಸಬಹುದಾಗಿದೆ.

ಎಲ್ಲಾ ಐಟಿ ಕಂಪನಿಗಳು ಟಿಎಸ್‌ಎಸ್‌ಪಿಡಿಸಿಎಲ್ ನಿರ್ಧಾರವನ್ನು ಸ್ವಾಗತಿಸಿವೆ. ಇದು ಐಟಿ ಕಾರಿಡಾರ್‌ನ 1200 ಸಣ್ಣ ಹಾಗೂ ಮಧ್ಯಮ ಕಂಪನಿಗಳಿಗೆ ಸಹಕಾರಿಯಾಗಲಿವೆ ಎಂದು ಹೇಳಿದೆ.

English summary
The IT corridor in Cyberabad will be the first area in Telangana State to enjoy 24×7 uninterrupted power supply, in the true sense, with the Telangana State Southern Power Distribution Company Limited (TSSPDCL) deciding to open two more switching stations in addition to the recently inaugurated station in Madhapur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X