ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣದಲ್ಲಿ 23 ಮಂದಿ ಪತ್ರಕರ್ತರಿಗೆ ಕೊರೊನಾ ಸೋಂಕು ದೃಢ

|
Google Oneindia Kannada News

ಹೈದರಾಬಾದ್, ಜೂನ್ 15: ತೆಲಂಗಾಣದ 23 ಪತ್ರಕರ್ತರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕು ಹರಡಲು ಆರಂಭಿಸಿದ ದಿನದಿಂದ ಇಲ್ಲಿಯವರೆಗೆ ಒಟ್ಟು 60 ಮಂದಿಗೆ ಸೋಂಕು ತಗುಲಿದೆ.

ತೆಲಂಗಾಣ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಒಟ್ಟು 140 ಮಂದಿ ಪತ್ರಕರ್ತರ ಮಾದರಿಯನ್ನು ಪಡೆಯಲಾಗಿತ್ತು. ಅದರಲ್ಲಿ 23 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ.

ಹೈದರಾಬಾದಿನಲ್ಲಿ 50 ಸಾವಿರ ಮಂದಿ ಕೊರೊನಾ ಸೋಂಕು ಪರೀಕ್ಷೆಹೈದರಾಬಾದಿನಲ್ಲಿ 50 ಸಾವಿರ ಮಂದಿ ಕೊರೊನಾ ಸೋಂಕು ಪರೀಕ್ಷೆ

ಜೂನ್ 14 ರಂದು ತೆಲಂಗಾಣದಲ್ಲಿ 237 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ. ಒಟ್ಟು ರಾಜ್ಯದಲ್ಲಿ 4974 ಪ್ರಕರಣಗಳಿವೆ, ಅದರಲ್ಲಿ 2377 ಮಂದಿ ಗುಣಮುಖರಾಗಿದ್ದಾರೆ. 2412 ಪ್ರಕರಣಗಳು ಸಕ್ರಿಯವಾಗಿವೆ. 185 ಮಂದಿ ಇಲ್ಲಿಯವರೆಗೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

23 Journalists Test Positive For COVID-19 In Telangana

ಹೈದರಾಬಾದಿನಲ್ಲಿ 50 ಸಾವಿರ ಮಂದಿಗೆ ಕೊರೊನಾ ಸೋಂಕು ಪರೀಕ್ಷೆ ಮಾಡಿಸಲಾಗುತ್ತದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಮಾಹಿತಿ ನೀಡಿದ್ದಾರೆ. ಹೈದರಾಬಾದ್, ರಂಗಾರೆಡ್ಡಿ, ವಿಕಾರಾಬಾದ್, ಸಂಗಾರೆಡ್ಡಿ ಜಿಲ್ಲೆ ಸೇರಿ ಒಟ್ಟು 30 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ 50 ಸಾವಿರ ಮಂದಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗುತ್ತದೆ.

ಒಟ್ಟು 10 ದಿನಗಳಲ್ಲಿ ಈ ಐವತ್ತು ಸಾವಿರ ಜನರಿಗೆ ಪರೀಕ್ಷೆ ನಡೆಯಲಿದೆ. ಇನ್ನು ದೆಹಲಿಯಲ್ಲಿ ಕೊರೊನಾ ಸೋಂಕಿತರಿಗಾಗಿಯೇ 20 ಸಾವಿರ ಹಾಸಿಗೆಗಳನ್ನು ಸಿದ್ಧಪಡಿಸುವಂತೆ ಸರ್ಕಾರ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಸೂಚನೆ ನೀಡಿದೆ.

English summary
23 Journalists tested positive for COVID19 in Telangana on Sunday. So Far , 60 Journalists have Contracted the disease while one succumbed to disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X