• search
  • Live TV
ಹೈದರಾಬಾದ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಡ್ರಗ್ ಕೇಸ್: ನಟ ರವಿತೇಜ ಸೇರಿ ಸೆಲೆಬ್ರಿಟಿಗಳಿಗೆ ಕ್ಲೀನ್ ಚಿಟ್

|

ಹೈದರಾಬಾದ್, ಮೇ 15: 2017ರ ಡ್ರಗ್ಸ್ ಕೇಸಿನಲ್ಲಿ ತೆಲುಗಿನ ಸ್ಟಾರ್ ನಟ ರವಿತೇಜ ಸೇರಿದಂತೆ ಎಲ್ಲಾ ಸೆಲೆಬ್ರಿಟಿಗಳಿಗೆ ಕ್ಲೀನ್ ಚಿಟ್ ಸಿಕ್ಕಿದೆ.

2017ರಲ್ಲಿ ಡ್ರಗ್​ಕೇಸಿಗೆ ಸಂಬಂಧಿಸಿದಂತೆ ಸರಿ ಸುಮಾರು 64ಕ್ಕೂ ಅಧಿಕ ಚಿತ್ರರಂಗ ಕಲಾವಿದರನ್ನು ವಿಚಾರಣೆಗೊಳಪಡಿಸಲಾಗಿತ್ತು. ಈ ಪ್ರಕರಣದಲ್ಲಿ ವಿಚಾರಣೆ ಎದುರಿಸಿದವರ ಪೈಕಿ ರವಿತೇಜಾ,ಪಿ ಸುಬ್ಬರಾಜ್, ಧರ್ಮರಾವ್, ಮುಮೈತ್ ಖಾನ್, ಚಾರ್ಮಿ ಕೌರ್, ನವದೀಪ್ ಹಾಗೂ ನಿರ್ದೇಶಕ ಪೂರಿ ಜಗನ್ನಾಥ್​ಪ್ರಮುಖರು.

ಈಗ ಡ್ರಗ್ ಕೇಸ್ ತನಿಖೆ ನಡೆಸಿದ ವಿಶೇಷ ತನಿಖಾ ದಳ(ಎಸ್ ಐಟಿ)ದಿಂದ ಚಿತ್ರರಂಗದ ಕಲಾವಿದರಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಈ ಡ್ರಗ್ಸ್ ದಂಧೆಯ ಪ್ರಮುಖ ಆರೋಪಿ ಕಲ್ವಿನ್ ಮ್ಯಾಸ್ಕರೆನ್ಹಸ್ ನೀಡಿರುವ ಮಾಹಿತಿಯಂತೆ ಚಿತ್ರರಂಗದ ಅನೇಕ ಮಂದಿ ಈತನ ಗ್ರಾಹಕರಾಗಿದ್ದಾರೆ. ಈ ಪ್ರಕರಣದಲ್ಲಿ ರವಿತೇಜ ಅವರು ಭಾಗಿಯಾಗಿಲ್ಲದಿದ್ದರೂ ಅವರ ಸೋದರ ಭರತ್ ಹಾಗೂ ಪೂರಿ ಜಗನ್ನಾಥ್ ಗ್ಯಾಂಗಿಗೆ ಆಪ್ತರಾಗಿರುವ ಕಾರಣ, ವಿಚಾರಣೆಗೆ ಹಾಜರಾಗಿದ್ದರು.

ನಟ ರವಿತೇಜ ಸಹೋದರ ಭರತ್ ರಾಜು ಜೂನ್ 25,2017ರಂದು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಭರತ್ ರಾಜು ಶವ ಪರೀಕ್ಷೆ, ಅವರ ಮೊಬೈಲ್ ನಲ್ಲಿದ್ದ ಡೀಲರ್ ಗಳ ಸಂಖ್ಯೆಗಳನ್ನು ಪರಿಶೀಲಿಸಿದ ಪೊಲೀಸರಿಗೆ ಡ್ರಗ್ಸ್ ಮಾಫಿಯಾದ ಸುಳಿವು ಸಿಕ್ಕಿತ್ತು.

ರವಿತೇಜ ಸಹೋದರ ಭರತ್ ರಾಜು ಬದುಕಿದ್ದಾಗ ಹಿಂದೊಮ್ಮೆ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿದ್ದರು. ನಂತರ ವಿಚಾರಣೆ ಬಳಿಕ ಬಿಡುಗಡೆಯಾಗಿದ್ದರು. ಆ ಸಮಯದಲ್ಲಿ ಭರತ್ ಕೈವಾಡ ಇರುವುದರ ಬಗ್ಗೆ ಪುರಾವೆ ಸಿಕ್ಕಿರಲಿಲ್ಲ.

English summary
2017 Drug Scandal Case : Many Tollywood celebrities were interrogated by the Special Investigation Unit in a drug case back in 2017. Now, all the celebrities including Ravi Teja have been given a clean chit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X