ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೆಲಂಗಾಣ: ಕೊರೊನಾ ಲಸಿಕೆಯ 2 ಡೋಸ್ ಬಳಿಕವೂ 15 ಮಂದಿಗೆ ಸೋಂಕು

|
Google Oneindia Kannada News

ಹೈದರಾಬಾದ್, ಏಪ್ರಿಲ್ 3: ಎರಡು ಕೊರೊನಾ ಲಸಿಕೆಯ ಡೋಸ್ ಪಡೆದ ಬಳಿಕವೂ 15 ಮಂದಿಗೆ ಕೊರೊನಾ ಸೋಂಕು ತಗುಲಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದಲ್ಲಿ ಕೋವಿಡ್-19 ಸೋಂಕಿಗೆ ಸಂಪೂರ್ಣವಾಗಿ ಲಸಿಕೆ ಪಡೆದ ನಂತರವೂ 15 ಮಂದಿಗೆ ಸೋಂಕು ತಗುಲಿದೆ.

ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ, ಕನಿಷ್ಠ 15 ಮಂದಿಗೆ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದ ನಂತರ ಕೂಡ ಸೋಂಕು ತಗುಲಿದೆ. ಹಾಗೆಂದು ಇದಕ್ಕೆ ಆತಂಕಪಡುವ ಅಗತ್ಯವಿಲ್ಲ, ಇದು ಸಾಮಾನ್ಯವಾದ ಲಸಿಕೆ ಪಡೆದುಕೊಂಡ ನಂತರ ಬರುವ ಅನಾರೋಗ್ಯವಾಗಿದೆ ಎಂದು ಸಾರ್ವಜನಿಕ ಆರೋಗ್ಯದ ನಿರ್ದೇಶಕ ಡಾ ಜಿ ಶ್ರೀನಿವಾಸ ರಾವ್ ತಿಳಿಸಿದ್ದಾರೆ.

ದೇಶದಲ್ಲಿ ಆರು ತಿಂಗಳಲ್ಲಿಯೇ ಗರಿಷ್ಠ ದೈನಂದಿನ ಕೋವಿಡ್ ಪ್ರಕರಣ ದಾಖಲುದೇಶದಲ್ಲಿ ಆರು ತಿಂಗಳಲ್ಲಿಯೇ ಗರಿಷ್ಠ ದೈನಂದಿನ ಕೋವಿಡ್ ಪ್ರಕರಣ ದಾಖಲು

ಕೋವಿಡ್ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದ ಮೇಲೆ ಕೂಡ ಸೋಂಕು ಬಂದಿದೆ. ಆದರೆ ಎಲ್ಲಾ ರೋಗಿಗಳಲ್ಲಿ ಸೋಂಕಿನ ತೀವ್ರತೆ ಸಣ್ಣ ಮಟ್ಟದಿಂದ ಮಧ್ಯಮ ಮಟ್ಟದವರೆಗೆ ಇದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

15 People Contract Covid Despite Taking Both Doses Of Vaccine In Telangana

ಭಾರತದಲ್ಲಿ ಸಿಗುವ ಲಸಿಕೆಗಳು ಶೇ. 100ರಷ್ಟು ಸಾಮರ್ಥ್ಯವನ್ನು ಹೊಂದಿಲ್ಲ, ಅದರರ್ಥ ಜನಸಂಖ್ಯೆಯ ಸಣ್ಣ ಪ್ರಮಾಣ ಮತ್ತೆ ಕೊರೊನಾ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ, ಹಾಗೆಂದು ಅಸಡ್ಡೆಮಾಡಿ ಕೊರೋನಾ ಲಸಿಕೆ ಹಾಕಿಸಿಕೊಳ್ಳದೆ ಇರಬೇಡಿ ಎಂದು ಡಾ ಶ್ರೀನಿವಾಸ್ ರಾವ್ ಹೇಳುತ್ತಾರೆ.

ಭಾರತದಲ್ಲಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್ ಎರಡೂ ಲಸಿಕೆಗಳು ನಾಗರಿಕರ ದೇಹದಲ್ಲಿ ಶೇಕಡಾ 71ರಿಂದ ಶೇಕಡಾ 81ರಷ್ಟು ಕೆಲಸ ಮಾಡುತ್ತದೆ. ಉಳಿತ ಶೇಕಡಾ 20ರಿಂದ ಶೇಕಡಾ 30ರಷ್ಟು ಮಂದಿ ಲಸಿಕೆ ಪಡೆದ ನಂತರವೂ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದೆ.

ದೇಶದಲ್ಲಿ ಶನಿವಾರ ದಾಖಲಾದ ದೈನಂದಿನ ಕೋವಿಡ್-19 ಪ್ರಕರಣ ಕಳೆದ ಆರು ತಿಂಗಳಲ್ಲಿಯೇ ಅತ್ಯಧಿಕವಾಗಿದೆ. ಸೆಪ್ಟೆಂಬರ್ 20ರಂದು ದೇಶದಲ್ಲಿ 92,605 ಕೋವಿಡ್ ಪ್ರಕರಣಗಳು ದಾಖಲಾಗಿದ್ದವು.

ಅದರ ಬಳಿಕ ಶನಿವಾರ ದಾಖಲಾದ 89,129 ಪ್ರಕರಣಗಳು ಅತ್ಯಧಿಕವೆನಿಸಿದೆ. ಕಳೆದ ಕೆಲವು ದಿನಗಳಿಂದ ಗಣನೀಯ ಪ್ರಮಾಣದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗುತ್ತಿದ್ದು, ಕಳೆದ ವರ್ಷ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ದಾಖಲಾದ ಪ್ರಕರಣಗಳನ್ನೂ ಮೀರಿಸುವ ಭೀತಿ ಉಂಟಾಗಿದೆ.

English summary
There have been at least 15 cases of Covid-19 infection amongst fully vaccinated individuals in Telangana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X