ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಧ್ರದಲ್ಲಿ ಟ್ಯೂಷನ್ ಟೀಚರಿಂದ 14 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು

|
Google Oneindia Kannada News

ಹೈದರಾಬಾದ್, ಅಕ್ಟೋಬರ್ 03: ಆಂಧ್ರಪ್ರದೇಶದಲ್ಲಿ ಟ್ಯೂಷನ್ ಟೀಚರಿಂದ 14 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ.

ಒಂದೆಡೆ ಶಾಲಾ, ಕಾಲೇಜುಗಳು ಆರಂಭವಾದರೆ ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದೆ ಹೀಗಾಗಿ ಇಷ್ಟು ಬೇಗ ಶಾಲೆಗಳನ್ನು ತೆರೆಯುವುದು ಬೇಡ ಎಂಬ ಕೂಗು ದೇಶದೆಲ್ಲೆಡೆ ಕೇಳಿಬರುತ್ತಿದೆ.

ಆದರೆ ಸಾಕಷ್ಟು ರಾಜ್ಯಗಳಲ್ಲಿ ಬ್ಯಾಚ್ ಮಾಡಿ ಮೂರು ದಿನ ಒಂದು ಬ್ಯಾಚ್ ಮತ್ತೆ ಮೂರು ದಿನ ಮತ್ತೊಂದು ಬ್ಯಾಚ್ ಶಾಲೆಗೆ ಬರುವಂತೆ ಸೂಚಿಸಿದೆ. ಅಷ್ಟೇ ಅಲ್ಲದೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನಮ್ಮ ಅಭ್ಯಂತರವಿಲ್ಲ ಎನ್ನುವ ಸರ್ಟಿಫಿಕೇಟ್‌ನ್ನು ಕೂಡ ನೀಡಬೇಕಾಗುತ್ತದೆ.

ಭಾರತದಲ್ಲಿ 79,476 ಹೊಸ ಕೊರೊನಾ ಕೇಸ್: 1 ಲಕ್ಷ ದಾಟಿದ ಸಾವುಭಾರತದಲ್ಲಿ 79,476 ಹೊಸ ಕೊರೊನಾ ಕೇಸ್: 1 ಲಕ್ಷ ದಾಟಿದ ಸಾವು

ಟ್ಯೂಷನ್‌ನಲ್ಲೇ ಹೀಗಾದಾಗ ಇನ್ನು ಶಾಲೆಗೆ ಮಕ್ಕಳನ್ನು ಕಳುಹಿಸುವ ಬಗ್ಗೆ ಯೋಚಿಸುತ್ತಿರುವ ಪೋಷಕರು ಮತ್ತೊಮ್ಮೆ ಆಲೋಚಿಸಬೇಕಾಗಿದೆ.

ಸಾಕಷ್ಟು ಖಾಸಗಿ ಕಾಲೇಜುಗಳು, ಶಾಲೆಗಳ ಶಿಕ್ಷಕರಿಗೆ ವೇತನವಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಶಿಕ್ಷಣ ಸಂಸ್ಥೆಗಳು ಒಂದು ಅವರನ್ನು ಕೆಲಸದಿಂದ ತೆಗೆದು ಹಾಕಲಿ ಅಥವಾ ಅವರಿಗೆ ಸಂಬಳವನ್ನು ನೀಡಬೇಕು.ಆಂಧ್ರಪ್ರದೇಶದಲ್ಲಿ 7 ಲಕ್ಷ ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ.

ಗುಂಟೂರಿನಲ್ಲಿ ನಡೆದ ಘಟನೆ

ಗುಂಟೂರಿನಲ್ಲಿ ನಡೆದ ಘಟನೆ

ಆಂಧ್ರಪ್ರದೇಶದ ಗುಂಟೂರಿನಲ್ಲಿ ಟ್ಯೂಷನ್‌ಗೆ ತೆರಳಿದ್ದ ಸುಮಾರು 14 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ, ಎಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಎಲ್ಲಾ ಮಕ್ಕಳು 12 ವರ್ಷದೊಳಗಿನವರು

ಎಲ್ಲಾ ಮಕ್ಕಳು 12 ವರ್ಷದೊಳಗಿನವರು

ಎಲ್ಲಾ ವಿದ್ಯಾರ್ಥಿಗಳು 12 ವರ್ಷ ಒಳಗಿನವರಾಗಿದ್ದಾರೆ. ಈ ವಿದ್ಯಾರ್ಥಿಗಳು ತೆರಳುತ್ತಿದ್ದ ಟ್ಯೂಷನ್ ಟೀಚರ್ ಇಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಹಾಗೆಯೇ ಕೆಲವು ಮಕ್ಕಳ ಪೋಷಕರಿಗೂ ಕೂಡ ಪಾಸಿಟಿವ್ ಬಂದಿದೆ.

ಓರ್ವ ವ್ಯಕ್ತಿ ಕೊರೊನಾದಿಂದ ಸಾವು

ಓರ್ವ ವ್ಯಕ್ತಿ ಕೊರೊನಾದಿಂದ ಸಾವು

ಸೆಪ್ಟೆಂಬರ್ 25 ರಂದು ಓರ್ವ ವ್ಯಕ್ತಿ ಕೊರೊನಾಗೆ ತುತ್ತಾಗಿ ಗುಂಟೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಅಲ್ಲಿಯವರೆಗೆ ಆ ಪ್ರದೇಶದಲ್ಲಿ ಒಂದೂ ಪ್ರಕರಣವಿರಲಿಲ್ಲ, ಗ್ರೀನ್ ಜೋನ್‌ ಆಗಿತ್ತು. ಒಟ್ಟು 250 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದರಲ್ಲಿ 39 ಮಂದಿಗೆ ಸೋಂಕು ತಗುಲಿರುವುದು ತಿಳಿದುಬಂದಿದೆ. 8-12 ವರ್ಷದೊಳಗಿನ 14 ಮಕ್ಕಳಿಗೆ ಸೋಂಕು ತಗುಲಿದೆ ಎಂದು ಡಾ. ಸೇಶುಕುಮಾರ್ ತಿಳಿಸಿದ್ದಾರೆ.

Recommended Video

BY Vijayendra ಅವರಿಗೆ ಕೊರೊನ ಸೋಂಕು , ಟ್ವಿಟ್ಟರ್ ನಲ್ಲಿ ಹೇಳಿದ್ದೇನು | Oneindia Kannada
ಕೊವಿಡ್ 19 ನಿಯಮವನ್ನು ಉಲ್ಲಂಘಿಸಿದ್ದಾರೆ

ಕೊವಿಡ್ 19 ನಿಯಮವನ್ನು ಉಲ್ಲಂಘಿಸಿದ್ದಾರೆ

ಈ ಟೀಚರ್‌ಗಳು ಕೊರೊನಾ ನಿಯಮ ಉಲ್ಲಂಘಿಸಿ ವಿದ್ಯಾರ್ಥಿಗಳಿಗೆ ಟ್ಯೂಷನ್ ತೆಗೆದುಕೊಳ್ಳುತ್ತಿದ್ದರು.ನರಸರಾವ್‌ಪೇಟೆಯಲ್ಲಿ ಇವರು ಇಂಗ್ಲಿಷ್ ಲೆಕ್ಚರರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಪತ್ನಿ ಗರ್ಭಿಣಿಯಾಗಿದ್ದು, ಹೆರಿಗೆಗೂ ಮುನ್ನ ಕೊರೊನಾ ಪಾಸಿಟಿವ್ ಬಂದಿತ್ತು.

ಅವರು ಕೊರೊನಾ ನಿಯಮ ಉಲ್ಲಂಘಿಸಿ ಟ್ಯೂಷನ್ ಮಾಡಬಾರದಿದ್ದು ಹೀಗಾಗಿ ಅವರಿಗೆ ನೋಟಿಸ್ ನೀಡಿರುವುದಾಗಿ ಮಂಡಲ್ ಶಿಕ್ಷಣ ಅಧಿಕಾರಿ ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.

English summary
At least 14 children in Andhra Pradesh's Guntur district have contracted coronavirus allegedly from a tuition teacher in the district, officials said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X