ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಜಾದಿ ಕಾ ಅಮೃತ ಮಹೋತ್ಸವ; 1 ಕೋಟಿ ಬಾವುಟ ವಿತರಣೆ

|
Google Oneindia Kannada News

ಹೈದರಾಬಾದ್‌,ಆಗಸ್ಟ್‌. 1: 75ನೇ ಸ್ವಾತಂತ್ರ್ಯ ದಿನಾಚರಣೆಗೆ ಹಿನ್ನೆಲೆಯಲ್ಲಿ ತೆಲಂಗಾಣ ಸರ್ಕಾರವು ಆಗಸ್ಟ್ 8 ರಿಂದ 22 ರವರೆಗೆ ರಾಜ್ಯಾದ್ಯಂತ 'ಸ್ವತಂತ್ರ ಭಾರತ ವಜ್ರೋತ್ಸವ'ವನ್ನು ಆಚರಿಸಲು ನಿರ್ಧರಿಸಿದೆ.

ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ರಾಜ್ಯದ ಮನೆಗಳಿಗೆ 1 ಕೋಟಿ ರಾಷ್ಟ್ರಧ್ವಜಗಳನ್ನು ವಿತರಿಸಲಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ ಧ್ವಜ ತಯಾರಿಕೆಗೆ ತೆಲಂಗಾಣದ ಸಿರಿಸಿಲ್ಲಾ ನುರಿತ ಕೈ ಕಾರ್ಮಿಕರಿಗೆ (ಚೇನೇತ ಕಾರ್ಮಿಕರು) ಗುತ್ತಿಗೆ ನೀಡಲಾಗಿದೆ.

ಅಜಾದಿ ಕಾ ಅಮೃತ ಮಹೋತ್ಸವ; ಶಾಲೆ, ಮದರಸಾ ಮೇಲೆ ರಾಷ್ಟ್ರಧ್ವಜ ಹಾರಾಟಅಜಾದಿ ಕಾ ಅಮೃತ ಮಹೋತ್ಸವ; ಶಾಲೆ, ಮದರಸಾ ಮೇಲೆ ರಾಷ್ಟ್ರಧ್ವಜ ಹಾರಾಟ

ಸರ್ಕಾರದ ಮುಖ್ಯ ಕಾರ್ಯದರ್ಶಿ ಸೋಮೇಶ್ ಕುಮಾರ್ ಮಾತನಾಡಿ, "ತೆಲಂಗಾಣ ಸರ್ಕಾರವು ರಾಜ್ಯದ ಎಲ್ಲಾ ಮನೆಗಳಿಗೆ ವಿತರಿಸಲು ಒಂದು ಕೋಟಿ ರಾಷ್ಟ್ರಧ್ವಜವನ್ನು ಸಿದ್ಧಪಡಿಸಲು ತಿಳಿಸಿದೆ" ಎಂದು ಹೇಳಿದ್ದಾರೆ.

ಎಲ್ಲಾ ಗ್ರಾಮಗಳು, ಮಂಡಲಗಳು ಮತ್ತು ಪುರಸಭೆಗಳಲ್ಲಿ ಧ್ವಜಗಳನ್ನು ವಿತರಿಸುವುದನ್ನು ಖಚಿತಪಡಿಸಿಕೊಳ್ಳಲು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ರಾಷ್ಟ್ರೀಯ ಏಕೀಕರಣ ಮತ್ತು ದೇಶಭಕ್ತಿ ಕುರಿತ ಚಲನಚಿತ್ರಗಳನ್ನು ಎಲ್ಲಾ ಚಿತ್ರಮಂದಿರಗಳಲ್ಲಿ ಶಾಲಾ ಮಕ್ಕಳಿಗೆ ಉಚಿತವಾಗಿ ಪ್ರದರ್ಶಿಸಲು ಸಹ ಸೂಚನೆ ನೀಡಲಾಗಿದೆ.

ಈ ಬಗ್ಗೆ ಧ್ವಜ ನೇಯ್ಗೆಯ ನುರಿತ ಕೆಲಸಗಾರರೊಬ್ಬರು ಮಾತನಾಡಿ, "ಸರ್ಕಾರದ ಈ ಆದೇಶವು ಪಟ್ಟಣದ ಹಲವಾರು ಜನರಿಗೆ ಕೆಲಸ ನೀಡಿದೆ. ಹರ್ ಘರ್ ತಿರಂಗದ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವದಂದು ಭಾರತವು 75 ವರ್ಷಗಳ ಸ್ವಾತಂತ್ರ್ಯವನ್ನು ಆಚರಿಸುತ್ತಿದೆ. ನಾವು ಸಿರ್ಸಿಲ್ಲಾದಲ್ಲಿ ರಾಷ್ಟ್ರಧ್ವಜದ ತಯಾರಿಕೆಯ ಗುತ್ತಿಗೆವನ್ನು ಪಡೆದುಕೊಂಡಿದ್ದೇವೆ. ನಾವು ಇಲ್ಲಿ ಕತ್ತರಿಸುವುದು ಮತ್ತು ಹೊಲಿಗೆ ಮಾಡುವ ಕೆಲಸವನ್ನು ಮಾಡುತ್ತೇವೆ. ಇದು ಕತ್ತರಿಸುವ ಮತ್ತು ಹೊಲಿಗೆ ಮಾಡುವ ಸುಮಾರು 100 ಜನರಿಗೆ ಕೆಲಸ ಸಿಕ್ಕಿದೆ. ಸಿರ್ಸಿಲ್ಲಾದಲ್ಲಿ ಅನೇಕ ಜನರು ಕಟಿಂಗ್ ಮತ್ತು ಹೊಲಿಗೆ ಕೆಲಸ ಮಾಡುತ್ತಿದ್ದಾರೆ" ಎಂದರು.

ಬಾವುಟ ತಯಾರಿಕೆಯಲ್ಲಿ ಸುಮಾರು 5,000 ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸುಮಾರು 5 ಲಕ್ಷ ರಾಷ್ಟ್ರಧ್ವಜಗಳನ್ನು ಈವರೆಗೆ ತಯಾರಿಸಲಾಗಿದೆ. ದಿನಗೂಲಿಯಾಗಿ ಸಿಗುವ ಕೂಲಿಗಿಂತ ಇಲ್ಲಿ ಹೆಚ್ಚಿನ ಕೂಲಿ ನೀಡಲಾಗುತ್ತಿದೆ ಎಂದು ಮಹಿಳಾ ಕಾರ್ಮಿಕರೊಬ್ಬರು ತಿಳಿಸಿದರು. ಕಷ್ಟಪಟ್ಟು ಕೆಲಸ ಮಾಡಿದರೂ ಈಗ ಸಿಗುತ್ತಿರುವಷ್ಟು ಹಣ ಸಿಗುತ್ತಿರಲಿಲ್ಲ. ನಮಗೆ ಸುಮಾರು ಈಗ 270 ರೂಪಾಯಿ ಸಿಗುತ್ತಿದ್ದು, ಇದರಿಂದ ಸಾಕಷ್ಟು ಮಂದಿಗೆ ಉದ್ಯೋಗಾವಕಾಶ ಸಿಕ್ಕಿದೆ. ಮಹಿಳೆಯರು ಎಲ್ಲರೂ ಖುಷಿಯಿಂದ ದುಡಿಯುತ್ತಿದ್ದಾರೆ ಎಂದರು.

 150ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಕ್ರಮ

150ಕ್ಕೂ ಹೆಚ್ಚು ದೇಶಗಳಲ್ಲಿ ಕಾರ್ಯಕ್ರಮ

ಆಜಾದಿ ಕಾ ಅಮೃತ್ ಮಹೋತ್ಸವದ ಉಪಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12 ರಂದು ಭಾರತದ ಸ್ವಾತಂತ್ರ್ಯದ 75 ಅದ್ಭುತ ವರ್ಷಗಳನ್ನು ಆಚರಿಸಲು ಕರೆ ನೀಡಿದ್ದಾರೆ. 28 ರಾಜ್ಯಗಳು, 8 ಕೇಂದ್ರಾಡಳಿತ ಪ್ರದೇಶಗಳು ಮತ್ತು 150ಕ್ಕೂ ಹೆಚ್ಚು ದೇಶಗಳಲ್ಲಿ 50,000ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಯಶಸ್ವಿಯಾಗಿ ನಡೆಸಲಾಗಿದೆ. ದೇಶದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಉಪಕ್ರಮವು ವ್ಯಾಪ್ತಿ ಮತ್ತು ಭಾಗವಹಿಸುವಿಕೆಯ ದೃಷ್ಟಿಯಿಂದ ಇದುವರೆಗೆ ಆಯೋಜಿಸಲಾದ ಅತಿದೊಡ್ಡ ಕಾರ್ಯಕ್ರಮಗಳಲ್ಲಿ ಒಂದಾಗಿದೆ.

ಮನ್ ಕೀ ಬಾತ್; ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಮೋದಿ ಕರೆಮನ್ ಕೀ ಬಾತ್; ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಮೋದಿ ಕರೆ

 ಧ್ವಜ ಸಂಹಿತೆಗೆ ತಿದ್ದುಪಡಿ

ಧ್ವಜ ಸಂಹಿತೆಗೆ ತಿದ್ದುಪಡಿ

ತ್ರಿವರ್ಣ ಧ್ವಜವನ್ನು ಮನೆಗಳು ಅಥವಾ ಕಟ್ಟಡಗಳ ಮೇಲೆ ಹಗಲು, ರಾತ್ರಿ ಪ್ರದರ್ಶಿಸಲು ಅನುಮತಿಸಲು ಸರ್ಕಾರವು ಭಾರತದ ಧ್ವಜ ಸಂಹಿತೆಯನ್ನು ತಿದ್ದುಪಡಿ ಮಾಡಿದೆ. ಯಾವುದೇ ನಾಗರಿಕ, ಖಾಸಗಿ ಸಂಸ್ಥೆ ಅಥವಾ ಶಿಕ್ಷಣ ಸಂಸ್ಥೆಯು ಎಲ್ಲಾ ದಿನಗಳು ಮತ್ತು ಸಂದರ್ಭಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬಹುದು ಅಥವಾ ಪ್ರದರ್ಶಿಸಬಹುದು. ಧ್ವಜ ಪ್ರದರ್ಶನದ ಸಮಯಕ್ಕೆ ಯಾವುದೇ ನಿರ್ಬಂಧವಿಲ್ಲ. ಕೈಯಿಂದ ಮಾಡಿದ ಧ್ವಜಗಳ ಜೊತೆಗೆ ಯಂತ್ರ- ನಿರ್ಮಿತ ಧ್ವಜಗಳನ್ನು ಅನುಮತಿಸಲಾಗಿದೆ.

 ಯಂತ್ರದಿಂದ ತಯಾರಿಸಿದ ಧ್ವಜಗಳಿಗೂ ಅನುಮತಿ

ಯಂತ್ರದಿಂದ ತಯಾರಿಸಿದ ಧ್ವಜಗಳಿಗೂ ಅನುಮತಿ

ಭಾರತದ ಧ್ವಜ ಸಂಹಿತೆಯನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ತಿದ್ದುಪಡಿ ಮಾಡಲಾಗಿದ್ದು, ಹತ್ತಿ, ಉಣ್ಣೆ, ರೇಷ್ಮೆ ಮತ್ತು ಖಾದಿಯನ್ನು ಹೊರತುಪಡಿಸಿ ಕೈಯಿಂದ ನೂಲುವ, ಕೈಯಿಂದ ನೇಯ್ದ ಮತ್ತು ಯಂತ್ರದಿಂದ ತಯಾರಿಸಿದ ಧ್ವಜಗಳನ್ನು ಹಾಗೂ ಪಾಲಿಸ್ಟಾರ್ ಅನ್ನು ಬಳಸಲು ಅನುಮತಿಸಲಾಗಿದೆ.

 ತಮ್ಮ ಪ್ರೊಫೆಲ್‌ನಲ್ಲಿ ಧ್ವಜ ಚಿತ್ರ ಬಳಸಲು ಕರೆ

ತಮ್ಮ ಪ್ರೊಫೆಲ್‌ನಲ್ಲಿ ಧ್ವಜ ಚಿತ್ರ ಬಳಸಲು ಕರೆ

ಏತನ್ಮಧ್ಯೆ, ಆಗಸ್ಟ್ 13ರಿಂದ15 ರವರೆಗೆ 'ಹರ್ ಘರ್ ತಿರಂಗ' ಆಂದೋಲನಯನ್ನು ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಹೇಳಿದ್ದಾರೆ. ಆಗಸ್ಟ್ 2 ಮತ್ತು ಆಗಸ್ಟ್ 15ರ ನಡುವೆ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತಿರಂಗ ಧ್ವಜವನ್ನು ತಮ್ಮ ಪ್ರೊಫೈಲ್ ಚಿತ್ರವಾಗಿ ಬಳಸಬೇಕೆಂದು ದೇಶದ ನಾಗರಿಕರನ್ನು ಪ್ರಧಾನಿ ಒತ್ತಾಯಿಸಿದ್ದಾರೆ.

Recommended Video

ಬದ್ಧವೈರಿ ಪಾಕಿಸ್ತಾನದ ವಿರುದ್ಧ ಸೋತ್ರೆ ಕಾಮನ್ವೆಲ್ತ್ ಗೇಮ್ ನಿಂದ ಭಾರತ ಔಟ್ | *Cricket | OneIndia Kannada

English summary
In the wake of the 75th Independence Day celebrations, the Telangana government has decided to celebrate 'Swatantra Bharat Vajrotsava' across the state from August 8 to 22.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X