ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ; ವಿಶಿಷ್ಟವಾಗಿ ತಾಯಂದಿರ ದಿನ ಆಚರಿಸಿದ ಮಕ್ಕಳು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮೇ 08; ಅವರು ಹೆತ್ತ ಮಕ್ಕಳು ದೂರ ಮಾಡಿದ ನತದೃಷ್ಟ ತಾಯಂದಿರು. ಯಾರು ನಮ್ಮನ್ನು ನೋಡುವವರಿಲ್ಲ ಎಂದು ಆಶ್ರಮದಲ್ಲಿ ಬದುಕು ನಡೆಸುತ್ತಿರುವವರು. ಆದರೆ ತಾಯಂದಿರ ದಿನ ಅವರ ಕೊರಗು ದೂರ ಮಾಡಲು ಕೆಲವು ಯುವಕರು ಪಣತೊಟ್ಟರು. ಈ ಮೂಲಕ ತಾಯಂದಿರ ದಿನವನ್ನು ವಿಶೇಷವಾಗಿ ಆಚರಣೆ ಮಾಡಿದರು.

ಭಾನುವಾರ ತಾಯಂದಿರ ದಿನ. ಮಕ್ಕಳು ದೂರ ಮಾಡಿದ ತಾಯಿಂದರ ಪಾದ ಪೂಜೆ ಮಾಡಿದ ಯುವ ಪಡೆ ಅವರನ್ನು ಗೌರವಿಸಿತು. ಯುವಕರ ಕಾರ್ಯವನ್ನು ಮೆಚ್ಚಿದ ತಾಯಂದಿರು ಮನತುಂಬಿ ಆಶೀರ್ವಾದ ಮಾಡಿದರು.

ಅವರು ಮಕ್ಕಳಿದ್ದು, ಬೇಡವಾದವರು. ಅವರಿಗೆ ಅನಾಥರು ಎಂಬ ಭಾವನೆ ಬಾರದೇ ಇರಲಿ ಎಂಬ ಕಾರಣಕ್ಕೆ ಹುಬ್ಬಳ್ಳಿಯ ಮಂಜುನಾಥ ಹೆಬಸೂರು ಗೆಳೆಯರ ಬಳಗದಿಂದ‌ ಅರ್ಥಪೂರ್ಣವಾಗಿ ವಿಶ್ವ ತಾಯಂದಿರ ದಿನ ಆಚರಿಸಲಾಯಿತು.

ಅವ್ವ ಎಂದರೆ ತ್ಯಾಗ ಮತ್ತು ಪ್ರೀತಿಯ ಸ್ವರೂಪ ಅವ್ವ ಎಂದರೆ ತ್ಯಾಗ ಮತ್ತು ಪ್ರೀತಿಯ ಸ್ವರೂಪ

Youths Of Hubballi Celebrate Mothers Day In Unique Way

ನವನಗರದ ಮೈತ್ರಿ ಆಶ್ರಮದಲ್ಲಿ ಯುವಕರು ವಿಶ್ವ ತಾಯಂದಿರ ದಿನಾಚರಣೆ ಹಿನ್ನಲೆಯಲ್ಲಿ ತಾಯಂದಿರ ಪಾದ ತೊಳೆದು ಅರಿಶಿನ, ಕುಂಕುಮ ಹಚ್ಚಿ ಆರತಿ ಬೆಳಗಿದರು. ನಂತರ ಆಶೀರ್ವಾದ ಪಡೆದು ಸಿಹಿ ತಿನ್ನಿಸಿದರು.

ಅಮ್ಮಂದಿರ ದಿನ ವಿಶೇಷ: ಅವ್ವ ಅಂದ್ರೆ ಆಲದ ಮರ ಅಮ್ಮಂದಿರ ದಿನ ವಿಶೇಷ: ಅವ್ವ ಅಂದ್ರೆ ಆಲದ ಮರ

ಯುವಕರು ಪಾದಪೂಜೆ ಮಾಡಿದ ಬಳಿಕ ತಾಯಂದಿರ ಮುಖದಲ್ಲಿ ಸಂತೋಷ ಮನೆ ಮಾಡಿತು. ತಾಯಂದಿರು ಯುವಕರ ಕಾರ್ಯವನ್ನು ಮೆಚ್ಚಿ ಮನಸಾರೆ ಆಶೀರ್ವಾದ ಮಾಡಿದರು. ತಮ್ಮ ಮಕ್ಕಳು ಕೂಡ ಮಾಡದ ಕಾರ್ಯವನ್ನು ಮಂಜುನಾಥ ಗೆಳೆಯರ ಬಳಗ ಮಾಡಿದ್ದು, ಅವರಲ್ಲಿ ಸಂತಸ ಮೂಡುವಂತೆ ಮಾಡಿತು.

ಶಂಕರಗೌಡ , ಮಹಾಂತೇಶ , ಹರೀಶ್, ಗುರು ಹಿರೇಮಠ, ಹರೀಶ ಹಿರೇಮಠ, ವಿಜಯ ಸೇರಿದಂತೆ ಇನ್ನೂ ಅನೇಕ ಯುವಕರು ಈ ಕಾರ್ಯದ ಮೂಲಕ ವಿಶೇಷವಾಗಿ ತಾಯಂದಿರ ದಿನವನ್ನು ಆಚರಣೆ ಮಾಡಿದರು.

English summary
Group of youths from Hubballi celebrate mother's day in a unique way. They performed pada pooje at orphanages for woman in Navanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X