ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬುಲೆಟ್ ಗೆ ಚಿನ್ನದ ಲೇಪನ ಮಾಡಿಸಿದ ಧಾರವಾಡದ ಬೈಕ್ ಪ್ರೇಮಿ!

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಮಾರ್ಚ್ 19: ಕೆಲವೊಬ್ಬರಿಗೆ ಬೈಕ್ ಕ್ರೇಜ್ ಹೆಚ್ಚಾಗಿರುತ್ತದೆ. ಬೈಕ್ ಪ್ರೇಮಿಗಳಲ್ಲಿಯೇ ಮಾದರಿಯಾಗಿರುವ ವ್ಯಕ್ತಿಯೊಬ್ಬ ತನ್ನ ಬುಲೆಟ್ ಬೈಕಿಗೆ ಚಿನ್ನದ ಲೇಪನ ಮಾಡಿಸಿದ್ದಾರೆ.

ಜಾವಾ ಮೋಟರ್ ಸೈಕಲ್ ಮೈಸೂರಿನಲ್ಲಿ ರಾಜ್ಯದ 5ನೇ ಶೋರೂಂ ಆರಂಭಜಾವಾ ಮೋಟರ್ ಸೈಕಲ್ ಮೈಸೂರಿನಲ್ಲಿ ರಾಜ್ಯದ 5ನೇ ಶೋರೂಂ ಆರಂಭ

ಧಾರವಾಡ ತಾಲೂಕಿನ ಹಿರೇಮಲ್ಲಿಗವಾಡ ಗ್ರಾಮದ ಬಸಪ್ಪ ಕಲ್ಲೂರ ಎಂಬುವ ವ್ಯಕ್ತಿಯೇ ತನ್ನ ಬೈಕ್ ಗೆ ಚಿನ್ನದ ಲೇಪನ ಮಾಡಿಸಿದವರು. ಹಳ್ಳಿಯವರಾಗಿದ್ದರೂ ಇವರಿಗೆ ಬುಲೆಟ್ ಹಾಗೂ ರಾಯಲ್ ಎನ್ ಫೀಲ್ಡ್ ಕ್ರೇಜ್ ಎಲ್ಲರಿಗಿಂತ ತುಸು ಹೆಚ್ಚು. ಇವರು ಕಳೆದ 4 ವರ್ಷಗಳ ಹಿಂದೆ 1984 ಮಾಡೆಲ್ ನ 550 ಸಿಸಿ ರಾಯಲ್ ಎನ್ ಫೀಲ್ಡ್ ಖರೀದಿ ಮಾಡಿದ್ದರು. ಅದಕ್ಕೆ ಈಗ ಬರೋಬ್ಬರಿ 9 ಲಕ್ಷ ರೂ. ಖರ್ಚು ಮಾಡಿದ್ದಾರೆ. ಇದಕ್ಕೆ ರೂ. 2 ಲಕ್ಷ ಮೊತ್ತದ ಚಿನ್ನದ ಲೇಪನ ಮಾಡಿಸಿದ್ದಾರೆ.

Young man made a gold coating on the Royal enfield bike

ಈ ರಾಯಲ್ ರಾಯಲ್ ಎಎನ್ ಫೀಲ್ಡ್ ಇಷ್ಟು ದುಬಾರಿ ಆಗಲು ಕಾರಣ 2 ಲಕ್ಷ ಚಿನ್ನದ ಲೇಪನ, 1.5 ಲಕ್ಷ ಎಂಜಿನ್ ರಿಪೇರಿ, ಎನ್ ಫೀಲ್ಡ್ ಗೆ ಹಿತ್ತಾಳೆಯ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಈ ಬೈಕ್ ಡಬ್ ಡಬ್ ಎಂದು ರಸ್ತೆ ಮೇಲೆ ಹೊರಟರೆ ಎಲ್ಲರ ಚಿತ್ತ ಈ ರಾಯಲ್‍ನತ್ತನೇ ಇರುತ್ತದೆ.

Young man made a gold coating on the Royal enfield bike

ಈಗ ಧಾರವಾಡ ಜಿಲ್ಲೆಯಲ್ಲಿ ಬಸಪ್ಪನ ಬೈಕ್ ಬಂದರೆ ಸಾಕು ಬಾಯಿ ಮೇಲೆ ಬೆರಳಿಟ್ಟು ನೋಡುತ್ತಾರೆ. ಕಳೆದ ವರ್ಷ ಈ ರಾಯಲ್ ಎನ್ ಫೀಲ್ಡ್ ಮಾಲೀಕ ತಮ್ಮ ಹೊಲ ಮಾರಿ ಎನ್ ಫೀಲ್ಡ್ ಖರೀದಿ ಮಾಡಿದ್ದರು.

English summary
Young man made a gold coating on the Royal enfield bike. His name is Basappa Kalluru. He is from Hiremalligawada village in Dharwad Taluk.Now bike worth is Rs 9 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X