• search
 • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಶ್ವದ ಅತಿ ಉದ್ದದ ಪ್ಲಾಟ್ ಫಾರ್ಮ್ ಜನವರಿಯಲ್ಲಿ ಲೋಕಾರ್ಪಣೆ

|

ಹುಬ್ಬಳ್ಳಿ, ಅಕ್ಟೋಬರ್ 30: ಕರ್ನಾಟಕದ ಹುಬ್ಬಳ್ಳಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಶ್ವದ ಅತಿ ಉದ್ದ ರೈಲು ಪ್ಲಾಟ್ ಫಾರ್ಮ್ ಜನವರಿಯಲ್ಲಿ ಲೋಕಾರ್ಪಣೆಯಾಗಲಿದೆ. ಅಂದಾಜು 90 ಕೋಟಿ ವೆಚ್ಚದ ಯೋಜನೆ ಇದಾಗಿದೆ.

ಹುಬ್ಬಳ್ಳಿಯಲ್ಲಿರುವ ರೈಲು ನಿಲ್ದಾಣದ ಒಂದನೇ ಪ್ಲಾಟ್ ಫಾರ್ಮ್ ವಿಶ್ವದ ಅತಿ ಉದ್ದದ ರೈಲು ಪ್ಲಾಟ್ ಫಾರ್ಮ್ ಎಂಬ ಹೆಗ್ಗಳಿಕೆ ಪಡೆಯಲಿದೆ. ಪ್ರಸ್ತುತ 550 ಮೀಟರ್ ಉದ್ದ ಇರುವ ಪ್ಲಾಟ್ ಫಾರ್ಮ್ ಅನ್ನು 1400 ಮೀಟರ್‌ಗೆ ವಿಸ್ತರಣೆ ಮಾಡಲು ಯೋಜಿಸಲಾಗಿತ್ತು.

ಹುಬ್ಬಳ್ಳಿ-ವಿಜಯವಾಡ ಹಬ್ಬದ ವಿಶೇಷ ರೈಲು; ವೇಳಾಪಟ್ಟಿ

ಈಗ ನೈಋತ್ಯ ರೈಲ್ವೆ ಇದರ ಉದ್ದವನ್ನು 1,505 ಮೀಟರ್‌ಗಳಿಗೆ ವಿಸ್ತರಣೆ ಮಾಡಲಿದೆ. 2021ರ ಜನವರಿ ಅಂತ್ಯಕ್ಕೆ ಈ ಕಾಮಗಾರಿ ಪೂರ್ಣಗೊಳ್ಳಲಿದ್ದು, ಪ್ಲಾಟ್ ಫಾರ್ಮ್ ಲೋಕಾರ್ಪಣೆಯಾಗಲಿದೆ.

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಹೊಸ ಪ್ಲಾಟ್ ಫಾರ್ಮ್

ಪ್ರಸ್ತುತ ಅತಿ ಉದ್ದದ ಪ್ಲಾಟ್ ಫಾರ್ಮ್ ಉತ್ತರ ಪ್ರದೇಶದ ಗೋರಖ್‌ಪುರ್‌ನಲ್ಲಿದೆ. 1,336 ಮೀಟರ್ ಉದ್ದದ ಪ್ಲಾಟ್ ಫಾರ್ಮ್ ವಿಶ್ವದ ಅತಿ ಉದ್ದದ ರೈಲು ಪ್ಲಾಟ್ ಫಾರ್ಮ್‌ ಎಂಬ ಹೆಗ್ಗಳಿಕೆ ಹೊಂದಿದೆ.

ಹುಬ್ಬಳ್ಳಿ-ಧಾರವಾಡ ಮಂದಿಗೆ ರೈಲ್ವೆಯಿಂದ ಸಿಹಿ ಸುದ್ದಿ

2013ರಲ್ಲಿ ಗೋರಖ್‌ಪುರ್‌ ನಿಲ್ದಾಣದ ಪ್ಲಾಟ್‌ ಫಾರ್ಮ್‌ ಅನ್ನು ವಿಶ್ವದ ಅತಿ ಉದ್ದ ಪ್ಲಾಟ್ ಫಾರ್ಮ್‌ ಎಂದು ಘೋಷಣೆ ಮಾಡಲಾಯಿತು. ಹುಬ್ಬಳ್ಳಿಯ ಕಾಮಗಾರಿ ಪೂರ್ಣಗೊಂಡರೆ ಈ ಗರಿಮೆ ವಾಣಿಜ್ಯ ನಗರ ಪಾಲಾಗಲಿದೆ.

   ಮಾನವೀಯತೆಗೆ ಮನಸೋತ ಚಾಲೆಂಜಿಂಗ್ ಸ್ಟಾರ್ ದರ್ಶನ್ | Darshan | Munirathna | Oneindia Kannada

   90 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ಪ್ಲಾಟ್ ಫಾರ್ಮ್ ವಿಸ್ತರಣೆ ಕಾರ್ಯ ನಡೆಯುತ್ತಿದೆ. ಕೋವಿಡ್ ಸಂದರ್ಭದಲ್ಲಿ ಊರಿಗೆ ವಾಪಸ್ ಆಗಿದ್ದ ಕಾರ್ಮಿಕರು ಈಗ ಬಂದಿದ್ದು, ಕಾಮಗಾರಿ ಚುರುಕುಗೊಂಡಿದೆ.

   English summary
   Hubballi railway station is set to get the world's longest railway platform. 1,505 metres length and 10 metres width platform work may complete in 2021.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X