ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಪೊಲೀಸರಿಗೆ ಅವಾಜ್ ಹಾಕಿದ ಮಹಿಳಾ ಪೇದೆ; ಬೈಕ್ ಕೆಳಗಿಳಿಸಿದ ಪೊಲೀಸರು

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ, ಸೆಪ್ಟೆಂಬರ್ 18: ರೈಲ್ವೆ ಮಹಿಳಾ ಪೊಲೀಸ್ ಪೇದೆ (ಆರ್ ಪಿಎಫ್)ಯೊಬ್ಬರು ಟ್ರಾಫಿಕ್ ‌ಪೊಲೀಸರಿಗೆ ಅವಾಜ್ ಹಾಕಿದ ಘಟನೆ ನೆಹರೂ ಕ್ರೀಡಾಂಗಣದ ಪಕ್ಕದ ಅಂಜತಾ ಹೊಟೇಲ್ ಬಳಿ ನಡೆದಿದೆ.

ಹೆಲ್ಮೆಟ್ ಇಲ್ಲ ಅಂದ್ರೂ ಈ ವ್ಯಕ್ತಿಗೆ ದಂಡ ಹಾಕೋಕಾಗ್ತಿಲ್ಲ ಯಾಕೆ?ಹೆಲ್ಮೆಟ್ ಇಲ್ಲ ಅಂದ್ರೂ ಈ ವ್ಯಕ್ತಿಗೆ ದಂಡ ಹಾಕೋಕಾಗ್ತಿಲ್ಲ ಯಾಕೆ?

ನೋ ಪಾರ್ಕಿಂಗ್ ಸ್ಥಳದಲ್ಲಿ ಬೈಕ್ ನಿಲ್ಲಿಸಿದ್ದಾರೆ ಎಂಬ ಕಾರಣಕ್ಕೆ ಟ್ರಾಫಿಕ್ ಪೊಲೀಸರು ಆರ್ ಪಿಎಫ್ ಮಹಿಳಾ ಪೇದೆಯ ಬೈಕ್ ಅನ್ನು ಟೋಯಿಂಗ್ ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದರು. ಬೈಕ್ ತೆಗೆದುಕೊಂಡು ಹೋಗುತ್ತಿದ್ದುದನ್ನು ನೋಡಿದ ಮಹಿಳಾ ಪೇದೆ ಪೊಲೀಸರಿಗೆ ಅವಾಜ್ ಹಾಕಿದ್ದಾರೆ. ನೋ‌ಪಾರ್ಕಿಂಗ್ ಅಂತ ಎಲ್ಲಿ ಬೋರ್ಡ್ ಹಾಕಿದ್ದೀರಿ ತೋರಿಸಿ? ನನ್ನ ಬೈಕನ್ನು ಹೇಗೆ ಹಾಕಿಕೊಂಡಿರಿ, ಕೆಳಗೆ ಇಳಿಸಿ ಎಂದು ಜೋರು ಮಾಡಿದ್ದಾರೆ.

Women Rpf Quarreled With Traffic Police In Hubli Video Viral

ಮಹಿಳಾ‌ ಪೇದೆಯ ಅವಾಜ್ ಗೆ ಅಂಜಿದ ಸಂಚಾರಿ ಪೊಲೀಸರು ಬೈಕ್ ವಾಪಸ್ ಇಳಿಸಿಕೊಟ್ಟಿದ್ದಾರೆ. ಇದೆಲ್ಲವನ್ನು ಜನರು ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇವರಿಗೊಂದು ಕಾನೂನು, ನಮಗೊಂದು ಕಾನೂನು ಎಂದು ಪ್ರಶ್ನಿಸಿದ್ದಾರೆ. ಟ್ರಾಫಿಕ್ ರೂಲ್ಸ್ ಹೇಳಿ ದಂಡ ವಸೂಲಿ ಮಾಡುವ ಸಂಚಾರಿ ಪೊಲೀಸರಿಗೆ ಮಹಿಳಾ‌ ಪೇದೆ ಅವಾಜ್ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಟ್ರಾಫಿಕ್ ಪೊಲೀಸರ ವರ್ತನೆಯನ್ನು ಪ್ರಶ್ನಿಸುವಂತೆ ಮಾಡಿದೆ.

English summary
A railway policewoman (RFF) quarreled with traffic policeman at the Anjata Hotel near Nehru Stadium. police released her scooter and this video gone viral.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X