ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

5 ವರ್ಷದಲ್ಲಿ ಆರು ಪಟ್ಟು ಹೆಚ್ಚಾದ ಸಚಿವ ವಿನಯ ಕುಲಕರ್ಣಿ ಆಸ್ತಿ

By ಹುಬ್ಬಳ್ಳಿ ಪ್ರತಿನಿಧಿ
|
Google Oneindia Kannada News

ಹುಬ್ಬಳ್ಳಿ ಏಪ್ರಿಲ್ 24 : ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗಣಿ ಮತ್ತೂ ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರ ಆಸ್ತಿ ಸುಮಾರು 5 ವರ್ಷದಲ್ಲಿ 6 ಪಟ್ಟು ಹೆಚ್ಚಳವಾಗಿದೆ . ಹೌದು, ಹುಬ್ಬಳ್ಳಿ ಧಾರವಾಡ (ಗ್ರಾಮೀಣ) ಕ್ಷೇತ್ರದಿಂದ ಪುನರಾಯ್ಕೆ ಬಯಸಿರುವ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಲಕರ್ಣಿ ಆಸ್ತಿ 5 ವರ್ಷದಲ್ಲಿ ಭಾರಿ ಏರಿಕೆಯಾಗಿದೆ.

2013ರಲ್ಲಿ 2.47 ಕೋಟಿ ರೂ. ಒಟ್ಟು ಆಸ್ತಿ ಘೋಷಿಸಿಕೊಂಡಿದ್ದ ಅವರು ಪ್ರಸಕ್ತ ವರ್ಷ ನಾಮ ಪತ್ರದ ಸಲ್ಲಿಕೆ ವೇಳೆ ಸಲ್ಲಿಸಿದ ಅಫಿಡೆವಟ್ ನಲ್ಲಿ ತಮ್ಮ ಚರ ಮತ್ತು ಸ್ಥಿರ ಆಸ್ತಿ ಮೌಲ್ಯ ಒಟ್ಟು 16.19 ಕೋಟಿ ರೂ. ಎಂದು ಘೋಷಿಸಿಕೊಂಡಿದ್ದಾರೆ . ಅಂದರೆ, ಒಟ್ಟು ಅವರ ಆಸ್ತಿಯಲ್ಲಿ 13.72 ಕೋಟಿ ರೂ. ಹೆಚ್ಚಳವಾಗಿದೆ. ಇನ್ನು ಪತ್ನಿ ಶಿವಲೀಲಾ ಹೆಸರಲ್ಲಿ 54 ಲಕ್ಷ ರೂ.ಗಳ ಚರಾಸ್ತಿ ಇರುವುದಾಗಿ 2013ರಲ್ಲಿ ಘೋಷಿಸಿದ್ದರು. ಆದರೆ 5 ವರ್ಷದ ಬಳಿಕ ಪತ್ನಿ ಹೆಸರಲ್ಲಿ 157 ಲಕ್ಷ ರೂ.ಗಳ ಚರಾಸ್ತಿ ಇರುವುದಾಗಿ ತಿಳಿಸಿದ್ದಾರೆ.

ಧಾರವಾಡ ದಕ್ಷಿಣದ ಶಾಸಕ ವಿನಯ್ ಕುಲಕರ್ಣಿ ಪರಿಚಯ ಧಾರವಾಡ ದಕ್ಷಿಣದ ಶಾಸಕ ವಿನಯ್ ಕುಲಕರ್ಣಿ ಪರಿಚಯ

ಇನ್ನು ವಿನಯ ಕುಲಕರ್ಣಿ ಈ ಸಾರಿ ಘೋಷಿಸಿರುವಂತೆ ಅವರ ಹೆಸರಲ್ಲಿ ಇರುವ ಚರಾಸ್ತಿಯ ಒಟ್ಟು ಮೌಲ್ಯ 5.06 ಕೋಟಿ ರೂಪಾಯಿ. ಪತ್ನಿ ಶಿವಲೀಲಾ ಹೆಸರಲ್ಲಿ 1.57 ಕೋಟಿ ರೂಪಾಯಿ , ಪುತ್ರಿಯರಾದ ವೈಶಾಲಿ ಹೆಸರಲ್ಲಿ 14 ಲಕ್ಷ, ದೀಪಾಲಿ ಹೆಸರಲ್ಲಿ 13 ಲಕ್ಷ ಹಾಗೂ ಪುತ್ರ ಹೇಮಂತ್ ಹೆಸರಲ್ಲಿ 4 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ. ಸಚಿವರು ತಮ್ಮ ಹೆಸರಲ್ಲಿ 11.13 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿರುವುದಾಗಿ ಮತ್ತು ಪತ್ನಿ, ಅವಲಂಬಿತರ ಹೆಸರಲ್ಲಿ ಸ್ಥಿರಾಸ್ತಿ ಇಲ್ಲ ಎಂದು ತಿಳಿಸಿದ್ದಾರೆ.

Vinaya Kulkarnis property is six times more in 5 years.

ನಾಯಕನೂರ ಗ್ರಾಮದಲ್ಲಿ 41.21 ಎಕರೆ ಪಿತ್ರಾರ್ಜಿತ ಆಸ್ತಿ . 3.28 ಎಕರೆ ಧಾರವಾಡ ಗುಲಗಂಜಿಕೊಪ್ಪದಲ್ಲಿ ಸ.ನಂ. 65/2ರಲ್ಲಿ 33 ಗುಂಟೆ ಪಿತ್ರಾರ್ಜಿತ ಕೃಷಿಯೇತರ ಜಮೀನು, ಧಾರವಾಡದಲ್ಲಿ ತಲಾ 5 ಗುಂಟೆಯ 2 ಹಾಗೂ 1.3 ಗುಂಟೆ ಕೃಷಿಯೇತರ, ನಾಯಕನೂರಲ್ಲಿ 600 ಹಾಗೂ ತಲಾ 1250 ಚ.ಅಡಿಯ 2 ಜಮೀನು, ಮನಸೂರ ಗ್ರಾಮದಲ್ಲಿ ಜಂಟಿ ಅಭಿವೃದ್ಧಿ ಅಗ್ರಿಮೆಂಟ್ ಪ್ರಕಾರ 10050.95 ಚ. ಅಡಿ ಕೃಷಿಯೇತರ, ನಾಯಕನೂರ ಗ್ರಾಮದಲ್ಲಿ 2 ಪಿತ್ರಾರ್ಜಿತ ಮನೆ ಸೇರಿ ಒಟ್ಟು 11.13 ಕೋಟಿ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.

ಬ್ಯಾಂಕ್, ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿಲ್ಲ. ತಮ್ಮ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿಲ್ಲ ಎಂದು ವಿನಯ ಕುಲಕರ್ಣಿ ತಮ್ಮ ನಾಮ ಪತ್ರದ ಜೊತೆ ಸಲ್ಲಿಸಿದ ಅಫಿಡೆವಟ್ ನಲ್ಲಿ ಅನುಮೋದಿಸಿದ್ದಾರೆ.

English summary
Dharwad South MLA Vinay Kulkarni's property is six times more in 5 years.He disclosed in filed nomination.He declared total asset Rs 2.47 crore in 2013.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X