• search
  • Live TV
ಹುಬ್ಬಳ್ಳಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Video: ರೈಲ್ವೆ ಕಾಮಗಾರಿ ವೀಕ್ಷಣೆ ವೇಳೆ ಶೆಟ್ಟರ್ ಅಪಾಯದಿಂದ ಪಾರು

By ಹುಬ್ಬಳ್ಳಿ ಪ್ರತಿನಿಧಿ
|

ಹುಬ್ಬಳ್ಳಿ, ಜ. 3: ರೈಲ್ವೆ ಕಾಮಗಾರಿ ವೀಕ್ಷಣೆಗೆ ತೆರಳಿದ್ದ ಕೈಗಾರಿಕಾ ಸಚಿವ ಸಚಿವ ಜಗದೀಶ್ ಶೆಟ್ಟರ್ ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ದೇಶಪಾಂಡೆ ನಗರ ಹಾಗೂ ಭವಾನಿ ನಗರ ಮಧ್ಯೆ ಸಂಪರ್ಕ ಕಲ್ಪಿಸಲು ಕೃಷ್ಣಮಂದಿರ ಬಳಿ ಕೆಳ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಬೃಹತ್, ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ವೀಕ್ಷಿಸಿ ಪರಿಶೀಲಿಸಿದರು.

ಹುಬ್ಬಳ್ಳಿಯಿಂದ 10 ವಿಶೇಷ ರೈಲುಗಳ ಸಂಚಾರ; ವೇಳಾಪಟ್ಟಿ

ಕೆಳ ಸೇತುವೆಯನ್ನು ವೀಕ್ಷಿಸಿ ಹೊರಗೆ ಬರುವಷ್ಟರಲ್ಲಿ ಕಾಮಗಾರಿ ನಡೆಯುತ್ತಿದ್ದ ದೊಡ್ಡ ಮಣ್ಣಿನ ದಿಬ್ಬವೊಂದು ಕುಸಿದು ಬಿದ್ದಿದೆ. ಕಾಮಗಾರಿ ಪರಿಶೀಲನೆ ಸಂದರ್ಭದ ವಿಡಿಯೋ ನೋಡಿ.

ಪಕ್ಕದಲ್ಲಿದ್ದ ಸಚಿವ ಜಗದೀಶ್ ಶೆಟ್ಟರ್ ಮತ್ತು ಬಿಜೆಪಿ ನಾಯಕರು ಮುಖಂಡರು ಕಾರ್ಯಕರ್ತರು ಕೂದಲೆಳೆ ಅಂತರದಲ್ಲಿಯೇ ಪಾರಾಗಿದ್ದಾರೆ. ನಗರದ ದೇಶಪಾಂಡೆ ನಗರದ ರೈಲ್ವೇ ಕೆಳಸೇತುವೆ ಕಾಮಗಾರಿ ವೀಕ್ಷಣೆಯ ಸಮಯದಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

ಈ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಕೂಡಾ ಪ್ರತಿಕ್ರಿಯೆ ನೀಡಿದ್ದು, ಸಚಿವರು ಹಾಗೂ ತಂಡ ದಿಬ್ಬ ಕುಸಿದ ಸ್ಥಳದಿಂದ ಕೆಲ ಮೀಟರುಗಳ ದೂರದಲ್ಲಿದ್ದರು. ಘಟನೆಯಿಂದ ಯಾರಿಗೂ ಯಾವುದೇ ಹಾನಿಯಾಗಿಲ್ಲ, ಯಾರೂ ಕೂಡಾ ಗಾಯಗೊಂಡಿಲ್ಲ, ಮುಂಜಾಗರೂಕತೆಯಿಂದ ಕಾಮಗಾರಿ ನಡೆಸಲಾಗುತ್ತಿದೆ ಎಂದಿದ್ದಾರೆ.

English summary
Video: Karnataka Minister for Large and Medium scale Industries Jagadish Shettar escaped unhurt when Mud collapsed while inspecting Railway work in Hubballi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X